ನಿನ್ನೆ ಜೂನಿಯರ್ ಎನ್‌ಟಿಆರ್ ವಾಚ್ ಕಲೆಕ್ಷನ್ ಬಗ್ಗೆ ತೋರಿಸಿದ್ವಿ. ಇವತ್ತು ಡೆವಿಲ್ ಸಿನಿಮಾದ ಫಸ್ಟ್ ಸಾಂಗ್‌ನಲ್ಲಿ ನಟ ದರ್ಶನ್ ಧರಿಸಿದ್ದ ಕಾಸ್ಟ್ಯೂಮ್ ಕುರಿತ ಕಹಾನಿ ತೋರಿಸ್ತೀವಿ ನೋಡಿ. ಅಂದಹಾಗೆ ಪತಿ ಜೈಲಲ್ಲಿದ್ರೂ ಪತ್ನಿ ಮಾತ್ರ ದಸರಾ ಮಾವುತರಿಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದರೊಟ್ಟಿಗೆ ನುಡಿದಂತೆ ನಡೆದ ವಿನೋದ್ ರಾಜ್ ದಚ್ಚುಗಾಗಿ ಮಾಡಿದ್ದೇನು.
ಡಿಬಾಸ್ ಧರಿಸಿದ್ದ ರೆಡ್ ಲೆದರ್ ಜಾಕೆಟ್ ಬೆಲೆ 79 ಸಾವಿರ ರೂ
ಇದ್ರೆ ನೆಮ್ದಿಯಾಗ್ ಇರ್ಬೇಕ್ ಡೆವಿಲ್ ಚಿತ್ರದ ಫಸ್ಟ್ ಸಾಂಗ್. ಇದು ರಿಲೀಸ್‌ಗೂ ಮೊದಲು ಹೇಗೆ ಟಾಕ್ ಕ್ರಿಯೇಟ್ ಮಾಡಿತ್ತೋ, ರಿಲೀಸ್ ಬಳಿಕ ಕೂಡ ಅಷ್ಟೇ ಟಾಕ್‌ನಲ್ಲಿದೆ. ಅದಕ್ಕೆ ಕಾರಣ ಸಾಂಗ್ ಅಷ್ಟು ಮಜಬೂತಾಗಿದೆ. ಅನಿರುದ್ದ್ ಶಾಸ್ತ್ರಿ ಸಾಹಿತ್ಯದ, ಅಜನೀಶ್ ಲೋಕನಾಥ್ ಸಂಯೋಜನೆಯ ಡೆವಿಲ್ ಸಾಂಗ್ ಸಖತ್ ಕಲರ್‌ಫುಲ್ ಆಗಿ ಮೂಡಿಬಂದಿದೆ. ಕೋಟ್ಯಂತರ ವೀವ್ಸ್ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಪ್ರಕಾಶ್ ವೀರ್ ನಿರ್ದೇಶಿಸಿ, ನಿರ್ಮಿಸಿರೋ ಈ ಡೆವಿಲ್ ಸಿನಿಮಾಗೆ ಅವ್ರ ಪತ್ನಿಯೇ ಕಾಸ್ಟ್ಯೂಮ್ ಡಿಸೈನ್ ಮಾಡಿರೋದು ಇಂಟರೆಸ್ಟಿಂಗ್. ನಟ ದರ್ಶನ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣ್ತಿದ್ದು, ಕಾಸ್ಟ್ಯೂಮ್ಸ್ ಇಂಪ್ರೆಸ್ಸೀವ್ ಆಗಿವೆ. ಅದ್ರಲ್ಲೂ ರೆಡ್ ಜಾಕೆಟ್ ಹಾಟ್ ಕೇಕ್‌ನಂತೆ ದಚ್ಚು ಮುಖದ ಕಳೆ ಹೆಚ್ಚಿಸಿದೆ. ಲೆದರ್ ಜಾಕೆಟ್ ಅದಾಗಿದ್ದು, ಅದ್ರ ಬೆಲೆ ಬರೋಬ್ಬರಿ 79 ಸಾವಿರದ ಇನ್ನೂರು ರೂಪಾಯಿ. ಈ ಜಾಕೆಟ್‌ಗೀಗ ಆನ್‌ಲೈನ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗ್ತಿರೋದು ವಿಶೇಷ.
ದಸರಾ ಮಾವುತರಿಗೆ ವಿಜಯಲಕ್ಷ್ಮೀ ಆತಿಥ್ಯ..ಕುಕ್ಕರ್ ಭಾಗ್ಯ..!
ಡೆವಿಲ್ ಸಾಂಗ್ ರಿಲೀಸ್ ಆಗ್ತಿದ್ದಂತೆ ಮೊದಲು ಅದಕ್ಕೆ ಪ್ರತಿಕ್ರಿಯಿಸಿದ್ದೇ ನಟ ವಿನೋದ್ ರಾಜ್. ದರ್ಶನ್ ಜೊತೆ ಉತ್ತಮ ಒಡನಾಟ ಹಾಗೂ ಬಾಂಧವ್ಯ ಹೊಂದಿದ್ದ ವಿನೋದ್ ರಾಜ್, ಆ ಹಾಡನ್ನ ದೊಡ್ಡ ಮಟ್ಟದಲ್ಲಿ ಶೇರ್ ಮಾಡಲು ಫ್ಯಾನ್ಸ್‌ಗೆ ಮನವಿ ಮಾಡಿದ್ರು. ಅಲ್ಲದೆ ತಾವು ಕೂಡ ಬೊಂಬಾಟ್ ಸ್ಟೆಪ್ಸ್ ಹಾಕಿ, ಡ್ಯಾನ್ಸ್ ರಾಜ ಡ್ಯಾನ್ಸ್ ಅಂತ ಎಲ್ರೂ ಕಮೆಂಟ್ ಮಾಡುವಂತೆ ಮಾಡಿದ್ರು. ಇನ್ನು ದರ್ಶನ್ ಬೇಗ ಜೈಲಿಂದ ಹೊರಬರಲಿ ಅಂತ ಶ್ರೀ ಮಂಜುನಾಥಸ್ವಾಮಿಯ ಬಳಿ ಕೇಳಿಕೊಳ್ತೀನಿ ಎಂದಿದ್ರು.
ಆದ್ರೀಗ ನುಡಿದಂತೆ ನಡೆದಿದ್ದಾರೆ ಲೀಲಾವತಿ ಮಗ ವಿನೋದ್ ರಾಜ್. ತಮ್ಮ ಮ್ಯಾನೇಜರ್ ಹಾಗೂ ಹುಡುಗರ ಸಮೇತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ದಾಸನ ಸಂಕಷ್ಟ ನಿವಾರಣೆಗೆ ಮಂಜುನಾಥಸ್ವಾಮಿಗಳ ಮೊರೆ ಹೋಗಿದ್ದಾರೆ. ಅಲ್ಲದೆ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿ ಕುಶಲೋಪಹರಿ ಹಂಚಿಕೊಂಡಿದ್ದಾರೆ.
ಇನ್ನು ಪತಿ ದರ್ಶನ್ ಜೈಲಲ್ಲಿದ್ರೂ, ಮೈಸೂರಿನ ಜೊತೆ ಇರೋ ಆ ಭಾವನಾತ್ಮಕ ನಂಟು ಬಿಟ್ಟಿಲ್ಲ ಪತ್ನಿ ವಿಜಯಲಕ್ಷ್ಮೀ. ದಸರಾಗಾಗಿ ಬಂದಿರೋ ಆನೆಗಳ ಮಾವುತರು ಹಾಗೂ ಅವರ ಕುಟುಂಬಸ್ಥರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅಡುಗೆ ಮಾಡಿಕೊಳ್ಳಲು ಪ್ರೆಶರ್ ಕುಕ್ಕರ್‌ಗಳನ್ನ ಗಿಫ್ಟ್ ನೀಡಿ, ಭೇಷ್ ಅನಿಸಿಕೊಂಡಿದ್ದಾರೆ. ವಿಜಯಲಕ್ಷ್ಮೀ ಅವ್ರ ಈ ಸಾಮಾಜಿಕ ಕಾರ್ಯಕ್ಕೆ ನಟ ಧನ್ವೀರ್ ಗೌಡ ಕೂಡ ಸಾಥ್ ನೀಡಿರೋದು ಮೆಚ್ಚುವ ವಿಷಯ.