ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ ಸಿಗ್ತಿದೆ. ಅದುವೇ ಡೆವಿಲ್ ಅಪ್ಡೇಟ್ ಹೌದು, ಈಗಾಗಲೇ 70 % ಶೂಟಿಂಗ್ ಮುಗಿಸಿರೋ ಡೆವಿಲ್ ಚಿತ್ರತಂಡ ಇದೀಗ ಬೆಂಗಳೂರಿನಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಿ ಥೈಲ್ಯಾಂಡ್ ಗೆ ಹೊರಡಲು ಸಿದ್ದವಾಗಿದೆ. ಹೇಗಿರಲಿದೆ ಥೈಲ್ಯಾಂಡ್ನಲ್ಲಿ ಡೆವಿಲ್ ಶೂಟಿಂಗ್ ಅನ್ನೋದರ ಅಪ್ಡೇಟ್ ಇಲ್ಲಿದೆ.
- ಫಾಸ್ಟ್ ಮೋಡ್ನಲ್ಲಿ ಡೆವಿಲ್ ಟೀಂ..ದರ್ಶನ್ ಫ್ಯಾನ್ಸ್ ಖುಷ್
- ಬೆಂಗಳೂರಿನಲ್ಲಿ ಶೂಟಿಂಗ್ ಮುಕ್ತಾಯ..ಫ್ಲೈಟ್ ರೆಡಿ..!
- ಷರತ್ತುಗಳ ನಡುವೆ ಥಾಯ್ಲೆಂಡ್ ನತ್ತ ದರ್ಶನ್ ಪ್ರಯಾಣ
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಡೆವಿಲ್ ಕೂಡ ಒಂದು. ಅಂದುಕೊಂಡಂತೆ ಆಗಿದ್ರೆ ಕಳೆದ ವರ್ಷ ಡಿಸೆಂಬರ್ನಲ್ಲೇ ಡೆವಿಲ್ ಬಿಡುಗಡೆ ಆಗಬೇಕಿತ್ತು. ಎಲ್ಲಾ ಅಡೆತಡೆಗಳ ನಡುವೆಯೂ ಡೆವಿಲ್ ಶೂಟಿಂಗ್ ಕೊನೆಯ ಹಂತದಲ್ಲಿದೆ. ಹೌದು, ಈಗಾಗಲೇ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿರೋ ಡೆವಿಲ್ ಟೀಂ ಈಗ ಬೆಂಗಳೂರಿನಲ್ಲೂ ಚಿತ್ರೀಕರಣ ಮುಗಿಸಿದ್ದಾರೆ. ಅದರ ಫೋಟೋ ಹಂಚಿಕೊಂಡಿರೋ ಡಿ ಕಂಪನಿ ಮುಂದಿನ ನಮ್ಮ ಪಯಣ ವಿದೇಶಕ್ಕೆ ಎಂದು ಬರೆದುಕೊಂಡಿದ್ದಾರೆ
ಸದ್ಯ ಡೆವಿಲ್ ಸಿನಿಮಾ ಇದೀಗ ಬೆಂಗಳೂರು ಮತ್ತು ಉದಯಪುರದಲ್ಲಿ 70 ದಿನಗಳ ನಿರ್ಣಾಯಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.ಈಗ, ಮುಂದಿನ ಮತ್ತು ಕೊನೆಯ ಹಂತದ ಶೂಟಿಂಗ್ ಅನ್ನು ಥಾಯ್ಲೆಂಡ್ನಲ್ಲಿ ಮಾಡಲಾಗಿದೆ. ಫುಕೆಟ್, ಕ್ರಾಬಿ ಮತ್ತು ಬ್ಯಾಂಕಾಕ್ನಲ್ಲಿ ಹಾಡಿನ ಸನ್ನಿವೇಶಗಳು ಮತ್ತು ಮಾಂಟೇಜ್ ಶಾಟ್ಗಳನ್ನು ಒಳಗೊಂಡ 10 ದಿನಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಈಗಾಗಲೇ ಪ್ರಯಾಣ ಬೆಳೆಸಲಿದೆ.
ಕಾಟೇರ ಚಿತ್ರದಲ್ಲಿ ಡಿಬಾಸ್ ದರ್ಶನ್ ಅದ್ಯಾಕಾದ್ರೂ ಜೈಲಿಗೆ ಹೋಗುವ ಸೀನ್ ಇಟ್ರೋ ಏನೋ.. ವಿಧಿಯ ಆಟ, ನಿಜ ಜೀವನದಲ್ಲೂ ಜೈಲೂಟ ಸವಿಯುವಂತಾಯ್ತು. ಆದ್ರೀಗ ಹೊರಬಂದಿರೋ ದಾಸ, ಡೆವಿಲ್ ಸಿನಿಮಾಗಾಗಿ ಸಿಕ್ಕಾಪಟ್ಟೆ ಎಫರ್ಟ್ ಹಾಕ್ತಿದ್ದಾರೆ. ಒಂದಷ್ಟು ಅಂತೆ ಕಂತೆಗಳ ನಡುವೆಯೂ ಯೂರೋಪ್ ಬದಲಿಗೆ ಥಾಯ್ಲೆಂಡ್ನತ್ತ ಫ್ಲೈಟ್ ಏರುವುದಕ್ಕೆ ಸಜ್ಜಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು, ಡೆವಿಲ್ ಸಿನಿಮಾದ ಸಾಂಗ್ ಶೂಟ್ ಗಾಗಿ ಫಾರಿನ್ ಗೆ ಹೊರಟು ನಿಂತಿರೋ ದರ್ಶನ್ ಗೆ ಒಂದಲ್ಲ ಎರಡಲ್ಲ ಹತ್ತಾರು ಕಂಡಿಷನ್ಸ್.
- ಥಾಯ್ಲೆಂಡ್ನಲ್ಲಿ ದಚ್ಚು ರೋಮ್ಯಾನ್ಸ್ ಟಾಪ್ ನಾಚ್ ಸೀನ್ಸ್
- ಥಾಯ್ಲೆಂಡ್ನಿಂದ ದಾಸ ವಾಪಾಸ್ ಆಗೋದು ಯಾವಾಗ..?
ಹೌದು, ಸಾಂಗ್ ಶೂಟ್ಗಾಗಿ ವಿದೇಶಕ್ಕೆ ತೆರಳಬೇಕಿದ್ದ ಡೆವಿಲ್ ಸಿನಿಮಾ ತಂಡ, ದರ್ಶನ್ಗೆ ಕಾನೂನು ಕಂಟಕ ಇರೋದ್ರಿಂದ ಕೋರ್ಟ್ನಿಂದ ಸ್ಪೆಷಲ್ ಪರ್ಮಿಷನ್ ಪಡೆದಿತ್ತು. ಒಂದಷ್ಟು ಖಡಕ್ ಕಂಡಿಷನ್ಸ್ ಮೇಲೆ ದರ್ಶನ್ಗೆ ಫಾರಿನ್ಗೆ ತೆರಳಲು ಅವಕಾಶ ನೀಡಿತ್ತು ಕೋರ್ಟ್. ಯೂರೋಪ್ ಹಾಗೂ ಬ್ಯಾಂಕಾಕ್ಗೆ ತೆರಳಲು 25ರಿಂದ ಒಂದು ತಿಂಗಳ ಕಾಲ ಕೋರ್ಟ್ ಅನುಮತಿ ಪಡೆದಿದ್ದ ಟೀಂ ಡೆವಿಲ್ 10 ದಿನಕ್ಕೆ ಆ ಟೂರ್ನ ಸೀಮಿತಗೊಳಿಸಿದೆ. ಥಾಯ್ಲೆಂಡ್ ಪ್ರವಾಸ ಜಸ್ಟ್ 10 ದಿನ ಅಷ್ಟೇ. ಅದರಲ್ಲೂ ಐದು ದಿನಗಳ ಕಾಲ ನಟಿ ರಚನಾ ರೈ ಜೊತೆ ದರ್ಶನ್ ಡುಯೆಟ್ ಸಾಂಗ್ ಚಿತ್ರಿಸಲಿದೆ. ಅದಾದ ಬಳಿಕ ಐದು ದಿನಗಳ ಕಾಲ ರೆಸ್ಟ್ ಪಡೆದು, ಜುಲೈ 24ರಂದೇ ವಾಪಸ್ ಆಗಲಿದೆಯಂತೆ ಚಿತ್ರತಂಡ.
ತಾರಕ್ ಚಿತ್ರದ ನಂತರ ದರ್ಶನ್ ಮತ್ತು ನಿರ್ದೇಶಕ ಪ್ರಕಾಶ್ ವೀರ್ ಅವರ ಎರಡನೇ ಕಾಂಬಿನೇಶನ್ ನಲ್ಲಿ ಮೂಡಿ ಬರ್ತಿರೋ ‘ಡೆವಿಲ್’ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಅಭಿಮಾನಿಗಳಿಗಾಗಿ ಶೂಟಿಂಗ್ ಬೇಗ ಮುಗಿಸುತ್ತಿರೋ ದರ್ಶನ್ ಅಂಡ್ ಟೀಂ ಆದಷ್ಟು ಬೇಗ ರಿಲೀಸ್ ಡೇಟ್ ಕೂಡ ಅಧಿಕೃತವಾಗಿ ಘೋಷಿಸಲಿದ್ದಾರೆ. ಬಹುತೇಕ ಸೆಪ್ಟೆಂಬರ್ ಅಂತ್ಯದಲ್ಲಿ ಡೆವಿಲ್ ತೆರೆ ಕಾಣಲು ತಯಾರಿ ನಡೆದಿದೆ ಎಂದು ಹೇಳಲಾಗ್ತಿದೆ.