ಡೆವಿಲ್..ಡೆವಿಲ್..ಡೆವಿಲ್..ಹತ್ತು ಹಲವು ಕಾರಣಗಳಿಂದಾಗಿ ಡಿಬಾಸ್ ದರ್ಶನ್ ಡೆವಿಲ್ ಸಿನಿಮಾ ಸಿಕ್ಕಾಪಟ್ಟೆ ಹವಾ ಸೃಷ್ಠಿಸಿದೆ. ದಚ್ಚು ಒಂದೊಂದು ಲುಕ್ಸ್ ಕೂಡ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಈ ಮಧ್ಯೆ ಚಿತ್ರದ ಸ್ಟೋರಿಲೈನ್ ರಿವೀಲ್ ಆಗಿದೆ. ಹಾಗಾದ್ರೆ ಡೆವಿಲ್ ದಿ ಹೀರೋ ಸಿನಿಮಾದ ಕಥೆ ಏನು ಅನ್ನೋದ್ರ ಎಕ್ಸ್ಕ್ಲೂಸಿವ್ ಖಬರ್ ಇಲ್ಲಿದೆ.
ದಿ ವೆಯ್ಟ್ ಈಸ್ ಓವರ್. ಡಿಬಾಸ್ ದರ್ಶನ್ ನಟನೆಯ ಈ ವರ್ಷದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಸ್ಟೋರಿಲೈನ್ ಕೊನೆಗೂ ರಿವೀಲ್ ಆಗಿದೆ. ನೆಗೆಟೀವ್ ಟೈಟಲ್ ಇಟ್ಟು, ಟೀಸರ್ನಿಂದ ಹುಳ ಬಿಟ್ಟಿದ್ದ ಡೈರೆಕ್ಟರ್ ಮಿಲನ ಪ್ರಕಾಶ್, ಇದೀಗ ಚಿತ್ರದ ಒನ್ ಲೈನ್ ಎಳೆಯನ್ನ ಬಿಟ್ಟುಕೊಟ್ಟಿದ್ದಾರೆ. ಅಸಲಿಗೆ ಡಿವಿಲ್ ಸಿನಿಮಾದ ಹೈಲೈಟ್ಸ್ ಏನು ಅಂದ್ರೆ ಅಧಿಕಾರ, ಪ್ರತೀಕಾರ ಹಾಗೂ ನಿಷ್ಕಲ್ಮಶ ಪ್ರೀತಿ ಎನ್ನಲಾಗ್ತಿದೆ.
ಪವರ್, ರಿವೆಂಜ್ ಹಾಗೂ ಲವ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಯುಎಸ್ಪಿ ಆಗಿದೆ. ಅದನ್ನ ಹೊಚ್ಚ ಹೊಸ ಪೋಸ್ಟರ್ ಮೂಲಕ ಅಫಿಶಿಯಲಿ ಅನೌನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆ ಮ್ಯಾಟರ್ ಈಗ ಸಖತ್ ವೈರಲ್ ಆಗ್ತಿದೆ. ಎಲ್ಲರೂ ಅದರ ಬಗ್ಗೆ ಮಾತನಾಡುವಂತಾಗಿದೆ. ಅಂದಹಾಗೆ ಅಧಿಕಾರಕ್ಕೂ ಈ ಸಿನಿಮಾಗೂ ಲಿಂಕ್ ಇದೆ. ಯಾಕಂದ್ರೆ ಈ ಹಿಂದೆಯೇ ಸಿಎಂ ಆಗಿದ್ದ ದರ್ಶನ್ ಫ್ಲೆಕ್ಸ್ ಫೋಟೋ ಲೀಕ್ ಆಗಿತ್ತು.
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಷ್ ರಾಜಶೇಖರ್ ಅಂತ ಫ್ಲೆಕ್ಸ್ ಮೇಲೆ ಬರೆದಿದ್ದು, ವೈಟ್ ಅಂಡ್ ವೈಟ್ನಲ್ಲಿ ದಚ್ಚು ಜನರಿಗೆ ಕೈ ಮುಗಿಯುತ್ತಿರೋ ಫೋಟೋ ಲೀಕ್ ಆಗಿತ್ತು. ಅಷ್ಟೇ ಅಲ್ಲ, ಅದರ ತಲೆಬರಹದಲ್ಲಿ ಕರುನಾಡ ಪ್ರಜಾಪಕ್ಷ ಅಂತಲೂ ಪಕ್ಷದ ಹೆಸರು ನಮೂದಿಸಲಾಗಿತ್ತು. ಇದು ಡೆವಿಲ್ ಸಿನಿಮಾನ ಪವರ್ ಪಾಲಿಟಿಕ್ಸ್ ಮ್ಯಾಟರ್ ಆದ್ರೆ, ರಿವೆಂಜ್ ಸ್ಟೋರಿ ಕೂಡ ಇರಲಿದೆ.
ಡೆವಿಲ್ನಲ್ಲಿ ಒಬ್ಬರಲ್ಲ ಇಬ್ಬರಲ್ಲ ಸಾಲು ಸಾಲು ಪರಭಾಷಾ ಖಳನಟರಿದ್ದಾರೆ. ಆ ಪೈಕಿ ಸಾಹೋ ಖಳನಟ ಮಹೇಶ್ ಮಂಜ್ರೇಕರ್, ಜಿಷು ಸೆಂಗುಪ್ತಾ, ಮುಖೇಶ್ ರಿಷಿ, ಫರ್ದೀನ್ ಖಾನ್ ಹೀಗೆ ಒಳ್ಳೊಳ್ಳೆಯ ಕಲಾವಿದರ ದಂಡಿದೆ. ಹಾಗಾಗಿ ಡೆವಿಲ್ ಪ್ರತೀಕಾರ ಇವರಲ್ಲಿ ಯಾರ ಮೇಲೆ..? ಏತಕ್ಕಾಗಿ ಅನ್ನೋ ಪ್ರಶ್ನೆಗೆ ಉತ್ತರ ಸಿನಿಮಾದಲ್ಲೇ ಸಿಗಲಿದೆ. ಒಟ್ಟಾರೆ ಇಂತಹ ಕಲಾವಿದರು ಹಾಗೂ ದರ್ಶನ್ ನಡುವಿನ ಟಗ್ ಆಫ್ ವಾರ್ ನೋಡೋಕೆ ಮಸ್ತ್ ಮಜಬೂತಾಗಿರಲಿದೆ.
ಪವರ್ ಹಾಗೂ ಪ್ರತೀಕಾರದ ಕಥೆ ಹೇಳಿದ್ವಿ ಇನ್ನು ಉಳಿದಿರೋದು ಟ್ರೂ ಲವ್ ಸ್ಟೋರಿ. ಇದು ಯಾರೊಟ್ಟಿಗೆ ಅಂದ್ರೆ ಒನ್ ಅಂಡ್ ಓನ್ಲಿ ರಚನಾ ರೈ. ಡೆವಿಲ್ ಸಿನಿಮಾದ ನಾಯಕನಟಿ ರಚನಾ. ಕರಾವಳಿ ಮೂಲದ ರಚನಾ ಡಿಬಾಸ್ ದಚ್ಚು ಹೈಟು ಹಾಗೂ ವೆಯ್ಟ್ಗೆ ಹೇಳಿ ಮಾಡಿಸಿದ ಕ್ಯಾರೆಕ್ಟರ್ ಆಗಲಿದೆ.
ಇವರಿಬ್ಬರ ಕೆಮಿಸ್ಟ್ರಿ ಕೂಡ ಇಂಪ್ರೆಸ್ಸೀವ್ ಆಗಿರಲಿದ್ದು, ದಚ್ಚು-ರಚ್ಚು ನಿಷ್ಕಲ್ಮಶವಾದ ನವಿರಾದ ಪ್ರೇಮಕಥೆಯೂ ಡೆವಿಲ್ ಚಿತ್ರದ ಒನ್ ಆಫ್ ದಿ ಸ್ಟ್ರೆಂಥ್. ಒಟ್ಟಾರೆ.. ಟಾಕಿ ಮುಗಿಸಿರೋ ಟೀಂ ಡೆವಿಲ್, ಸಾಂಗ್ಸ್ ಹಾಗೂ ಫೈಟ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಡಿಸೆಂಬರ್ ಕ್ರಿಸ್ಮಸ್ಗೆ ಧೂಮ್ ಧಾಮ್ ಅಂತ ಬಿಗ್ ಸ್ಕ್ರೀನ್ಗೆ ಎಂಟ್ರಿ ಕೊಡುವ ಸೂಚನೆಯಿದೆ.