ಪ್ರಭಾಸ್ ಜೊತೆ ನಟಿಸೋಕೆ 20ಕೋಟಿ ಡಿಮ್ಯಾಂಡ್

ಸಂಭಾವನೆಯಲ್ಲಿ 'ನಯನತಾರಾ'ನ ಹಿಂದಿಕ್ಕಿದ ದೀಪಿಕಾ

Web 2025 05 16t204830.436

ಬಿಟೌನ್​ ಬೆಡಗಿ ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್​ನಲ್ಲಿ ಟಾಪ್​ನಲ್ಲಿದ್ದಾರೆ.  ತಾಯಿಯಾದ ಬಳಿಕೆ ಕ್ರೇಜ್ ಕಡಿಮೆ ಆಗುತ್ತೆ ಲೀಡ್ ರೋಲ್ ಸಿಗೋದೇ ಇಲ್ಲ ಅನ್ನೋ ವಾಡಿಕೆ ಹೀರೋಯಿನ್​ ವಲಯದಲ್ಲಿ ಇದೆ. ಆದ್ರೆ ದೀಪಿಕಾ ಈ ವಾಡಿಕೆಯನ್ನ ಮುರಿದಿದ್ದಾರೆ. ಸ್ಪಿರಿಟ್ ಸಿನಿಮಾಗಾಗಿ ದೀಪಿಕಾ ಭಾರೀ ಮೊತ್ತದ ಸಂಭಾವನೆಯನ್ನೇ ಕೇಳದ್ದಾರಂತೆ. ಅಷ್ಟಕ್ಕೂ ದೀಪಿಕಾ ಕೇಳಿರೋ ರೆಮ್ಯೂನರೇಶನ್​ ಕೇಳಿದ್ರೆ ನಟಿಮಣಿಯರು ಶಾಕ್ ಆಗಿದ್ದಾರೆ.

ಬಾಲಿವುಡ್​ನಲ್ಲಿ ಹೆಚ್ಚು ರೆಮ್ಯೂನರೇಶನ್​ ಪಡೆಯೋ ನಟಿ ಅಂದ್ರೆ ಮೊದಲು ಬರೋ ಹೆಸರೇ ದೀಪಿಕಾ ಪಡುಕೋಣೆ.

ಬಾಲಿವುಡ್​ ಪದ್ಮಾವತಿ ದೀಪಿಕಾ ತಾಯಿಯಾದ ಬಳಿಕ, ಶಾರುಖ್​ ಖಾನ್​ ಅವರ ‘ಕಿಂಗ್’​ ಸಿನಿಮಾ ಮೂಲಕ ಕಮ್​ಬ್ಯಾಕ್​ ಮಾಡ್ತಿರೋ ವಿಚಾರ ಗೊತ್ತೇಯಿದೆ. ಈ ನಡುವೆ ಡಿಪ್ಪಿ ಪ್ರಭಾಸ್​ ಅವರ ಅಪ್​ಕಮಿಂಗ್​ ಸಿನಿಮಾ ‘ಸ್ಪಿರಿಟ್’​ ಚಿತ್ರದಲ್ಲಿ ನಟಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಅನ್ನೋ ಸುದ್ದಿ ಟಿಟೌನ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಸಾಮಾನ್ಯವಾಗಿ ತಾಯಿಯಾದ ನಂತರ ನಟಿಯರಿಗೆ ಅಷ್ಟು ಡಿಮ್ಯಾಂಡ್​ ಇರೋಲ್ಲ. ಆದ್ರೆ ದೀಪಿಕಾ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಒಂದು ಮಗುವಿನ ತಾಯಿಯಾದ್ರು ಡೀಪಿಕಾ ಡಿಮ್ಯಾಂಡ್​ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ ದೀಪಿಕಾ ಸಂಭಾವನೆ ಡಬಲ್ ಆಗಿದೆ.

ಈಗಾಗಲೇ ದೀಪಿಕಾಗೆ ಎರಡು ಸಿನಿಮಾ ಆಫರ್​ಗಳು ಬಂದಿದೆ. ಆ ಪೈಕಿ  ಮೊದಲನೆಯದ್ದು ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಎರಡನೆಯದ್ದು ಪ್ರಭಾಸ್ ನಟನೆಯ ‘ಸ್ಪಿರಿಟ್’. ಸದ್ಯ ಡಿಪ್ಪಿ ಎರಡೂ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಆದ್ರೆ ಸದ್ಯ ಚರ್ಚೆಗೆ ಗ್ರಾಸವಾಗಿರೋ ವಿಚಾರ ಏನಂದ್ರೆ ಅದು ದೀಪಿಕಾ ಸಂಭಾವನೆ.

ಸ್ಪಿರಿಟ್​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಸ್ಕ್ರೀನ್​ ಶೇರ್​ ಮಾಡೋಕೆ, ದೀಪಿಕಾ 20 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಇತ್ತೀಚೆಗೆ ಮೆಗಾ ಸ್ಟಾರ್​ ಚಿರಂಜೀವಿ ಜೊತೆ ನಟಿಸಲು ಸೌತ್​ ಲೇಡಿ ಸೂಪರ್​ ಸ್ಟಾರ್​ ನಯನತಾರಾ 18 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಗುಲ್ಲಾಗಿತ್ತು. ಇದೀಗ ‘ಸ್ಪಿರಿಟ್’ ಚಿತ್ರದ ದೀಪಿಕಾ ಸಂಭಾವನೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಒಂದು ವೇಳೆ ಇದು ನಿಜವಾದ್ರೆ, ದೀಪಿಕಾ ನಟಿಯರ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದಂತೆ ಆಗುತ್ತೆ.

ಭಾರತದ ಇನ್ಯಾವುದೇ ನಟಿಯರು ಯಾವುದೇ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಸಂಭಾವನೆಯನ್ನು ಈವರೆಗೆ ಪಡೆದಿದ್ದಲ್ಲ. ಆಲಿಯಾ ಭಟ್​ಗೆ ಸಹ 10 ರಿಂದ 15 ಕೋಟಿ ಸಂಭಾವನೆ ನೀಡಲಾಗುತ್ತದೆ. ಆದರೆ ದೀಪಿಕಾ ತಮ್ಮ ಕಮ್ ಬ್ಯಾಕ್ ಸಿನಿಮಾಕ್ಕೆ 20 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ ಅಂದ್ರೆ ಅದು ಸಣ್ಣ ವಿಚಾರ ಅಲ್ಲ. ‘ಸ್ಪಿರಿಟ್’ ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಇರುವಷ್ಟೆ ಪ್ರಾಧಾನ್ಯತೆ ನಾಯಕಿ ಪಾತ್ರಕ್ಕೂ ಇದ್ದು, ಇಬ್ಬರೂ ಸಹ ಸಮಾನ ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆಯಂತೆ. ಇದೇ ಕಾರಣಕ್ಕೆ ಈ ಸಿನಿಮಾಕ್ಕೆ ದೀಪಿಕಾ ಪಡುಕೋಣೆಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ.

ದೀಪಿಕಾಗೆ 20 ಕೋಟಿ ಸಂಭಾವನೆ ಸಿಕ್ಕರೇ  ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ದೀಪಿಕಾ ಈವರೆಗೂ ತಮ್ಮ ಯಾವುದೇ ಚಿತ್ರಕ್ಕೂ ಇಷ್ಟು ದೊಡ್ಡಮಟ್ಟದ ಸಂಭಾವನೆ ಪಡೆದಿಲ್ಲ. ದೀಪಿಕಾ ರೀ ಎಂಟ್ರಿ ಆರಂಭದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಮೂಲಕ ದೊಡ್ಡಮಟ್ಟದ ಸುದ್ದಿ ಮಾಡಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version