ಹ್ಯಾಟ್ರಿಕ್ ಹಿಟ್‌ನಿಂದ ಹೈ ಸ್ಪಿರಿಟ್ ಅಂಡ್ ಸ್ಪೀಡ್‌ನಲ್ಲಿದ್ದ ಸೌತ್‌ನ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾಗೆ ಭಾರೀ ಭಂಗ ತಂದಿದ್ದಾರೆ ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಿನ ಕೆಸರೆರಚಾಟ ನೋಡ್ತಾನೇ ಇದ್ದೀವಿ. ಆದ್ರೀಗ ಮೌನ ಮುರಿದಿರೋ ರಣ್ವೀರ್ ಸಿಂಗ್ ಪತ್ನಿ, ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ.
- ಮೌನ ಮುರಿದ ದೀಪಿಕಾ.. ವಂಗಾ ಆರೋಪಕ್ಕೆ ಟಕ್ಕರ್
- ನನ್ನ ಟ್ರ್ಯಾಕ್ ರೆಕಾರ್ಡ್ ನನಗೆ ಗೊತ್ತು ಎಂದ ದೀಪಿಕಾ..!
- ಹೀರೋಗೆ ಹೆಚ್ಚು ಖರ್ಚು.. ಡೈರೆಕ್ಟರ್‌ಗೆ ನಟಿ ತಿರುಗೇಟು
- ರಣ್ವೀರ್ ಸಿಂಗ್ ಪತ್ನಿ ಮೇಲೆ ಪ್ರಭಾಸ್ ಫ್ಯಾನ್ಸ್ ಗರಂ..!
ಸಕ್ಸಸ್ ಅನ್ನೋದು ತಲೆಗೆ ಹತ್ತಿದಾಗ ಈಗೋ ಕ್ಲ್ಯಾಶಸ್ ಆಗೋದು ಸರ್ವೇ ಸಾಮಾನ್ಯ. ಇತ್ತೀಚೆಗೆ ಬಾಲಿವುಡ್‌ನ ಮೋಸ್ಟ್ ಸಕ್ಸ್ಸಸ್‌ಫುಲ್ ನಟಿ ದೀಪಿಕಾ ಪಡುಕೋಣೆ ಹಾಗೂ ಮಾಡಿದ ಮೂರೂ ಸಿನಿಮಾಗಳಿಂದ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಅನಿಸಿಕೊಂಡ ಸಂದೀಪ್ ರೆಡ್ಡಿ ವಂಗಾ ನಡುವೆ ನಡೆಯುತ್ತಿರೋ ಶೀತಲ ಸಮರ ಗೊತ್ತೇಯಿದೆ. ಅದೀಗ ಮತ್ತಷ್ಟು ಕಿಡಿ ಹೊತ್ತಿದ್ದು, ಎಲ್ಲರ ಮುಂದೆ ಬಹಿರಂಗವಾಗಿಯೇ ಡೈರೆಕ್ಟರ್ ಸೀಕ್ರೆಟ್ಸ್‌ನ ಬಟಾ ಬಯಲು ಮಾಡಿದ್ದಾರೆ ದೀಪಿಕಾ.
ಯೆಸ್.. ಈಕೆ ಹೇಳ್ತಿರೋದು ಇಷ್ಟೇ. ಸಂದೀಪ್ ರೆಡ್ಡಿ ವಂಗಾ ಹೇಳಿದ ಸ್ಪಿರಿಟ್ ಚಿತ್ರದ ಕಥೆ ತುಂಬಾ ಚೆನ್ನಾಗಿತ್ತು. ಆದ್ರೆ ಸಂಭಾವನೆ ವಿಚಾರ ಟರ್ಮ್ಸ್ ಅಂಡ್ ಕಂಡಿಷನ್ಸ್ ಒಪ್ಪಿಗೆ ಆಗಲಿಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ನನಗೆ ಗೊತ್ತು. ಅವರು ಹೀರೋಗೆ ಜಾಸ್ತಿ ಖರ್ಚು ಮಾಡ್ಬೇಕು ಅಂದ್ರು. ಅವರ ಸಿನಿಮಾಗಳು ಗಳಿಸ್ತಾ ಇರೋದು ಕೂಡ ಎಷ್ಟು ಅನ್ನೋದು ನನಗೆ ಗೊತ್ತು ಅಂತ ಪರೋಕ್ಷವಾಗಿ ಪ್ರಭಾಸ್ ಚಿತ್ರಗಳ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ.
ಇದರಿಂದ ಪ್ರಭಾಸ್ ಫ್ಯಾನ್ಸ್ ದೀಪಿಕಾ ಮೇಲೆ ಉರಿದು ಬೀಳ್ತಿದ್ದು, ಸ್ಪಿರಿಟ್ ಚಿತ್ರದಿಂದ ಅಫಿಶಿಯಲಿ ದೀಪಿಕಾ ಹೊರಬಂದಿರೋದು ಕಾತರಿ ಆಗಿದೆ. ಅಂದಹಾಗೆ ಈ ಹಿಂದಿನ ಕಲ್ಕಿ ಚಿತ್ರದಲ್ಲಿ ಇದೇ ದೀಪಿಕಾ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ರು. ಇದೀಗ ಪ್ರಭಾಸ್ ವಿರುದ್ಧ ಸ್ಟೇಟ್‌ಮೆಂಟ್ ನೀಡಿರೋದು ತೆಲುಗು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿದೆ.
ಸಿನಿಮಾದಲ್ಲಿ ಸಂಭಾವನೆ ಹೆಚ್ಚು ನಿರೀಕ್ಷಿಸಿದ, ಸಮಯದ ಲಿಮಿಟ್ ಹಾಗೂ ತೆಲುಗು ಡೈಲಾಗ್ಸ್‌ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ದೀಪಿಕಾಗೆ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಗೇಟ್‌ಪಾಸ್ ನೀಡಿದ್ರು. ಅದಕ್ಕೆ ರಿಟರ್ನ್ ಗಿಫ್ಟ್ ಆಗಿ ಸ್ಪಿರಿಟ್ ಚಿತ್ರದ ಕಥೆಯನ್ನ ಲೀಕ್ ಮಾಡಿದ್ರಂತೆ ದೀಪಿಕಾ. ಅದನ್ನ ಸ್ವತಃ ವಂಗಾ ಪೋಸ್ಟ್ ಮೂಲಕ ದೀಪಿಕಾ ಮೇಲೆ ಆಕ್ರೋಶ ಹೊರಹಾಕಿದ್ದರು. ಅಷ್ಟೇ ಅಲ್ಲ, ಬಾಲಿವುಡ್ ಬ್ಯೂಟಿ ತೃಪ್ತಿ ದಿಮ್ರಿಯನ್ನ ಆ ಸ್ಥಾನಕ್ಕೆ ಸೆಲೆಕ್ಟ್ ಮಾಡಿದ್ರು.
ಇಲ್ಲಿಯವರೆಗೂ ಡರ್ಟಿ ಪಿಆರ್ ಗೇಮ್ಸ್ ಅಂದಿದ್ದ ವಂಗಾ ವಿರುದ್ಧ ಸೈಲೆಂಟ್ ಆಗಿ ಸಮರ ಸಾರಿದ್ದ ಡಿಪ್ಪಿ, ಇದೀಗ ಓಪನ್ ಆಗಿಯೇ ಮಾತನಾಡೋಕೆ ಮುಂದಾಗಿದ್ದಾರೆ. ಈ ಟಾಕ್ ವಾರ್, ಟ್ವೀಟ್ ವಾರ್ ಮುಂದೆ ಎಲ್ಲಿಯತನಕ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಆದ್ರೆ ದೀಪಿಕಾಗಿಂತ ತೃಪ್ತಿ ದಿಮ್ರಿನೇ ಹಾಟ್ ಅಂಡ್ ಸೆಕ್ಸಿ ಆಗಿದ್ದಾರೆ ಅಂತ ಪ್ರಭಾಸ್ ಫ್ಯಾನ್ಸ್ ಖುಷ್ ಅಗಿದ್ದಾರೆ.
ಅನಿಮಲ್ ಚಿತ್ರದಲ್ಲಿ ಪ್ರತಿಯೊಬ್ಬ ನೋಡುಗನ ಮನಸ್ಸಿಗೆ ತೃಪ್ತಿ ನೀಡಿದ್ದ ಈ ಹಾಟ್ ಬ್ಯೂಟಿ ತೃಪ್ತಿ ದಿಮ್ರಿ ಇದೀಗ ಅಫಿಶಿಯಲ್ ಆಗಿ ಡಾರ್ಲಿಂಗ್ ಜೊತೆ ರೊಮ್ಯಾನ್ಸ್ ಮಾಡಲಿರೋ ಕ್ಯೂಟ್ ಕ್ವೀನ್. ಸೋ.. ಸದ್ಯದಲ್ಲೇ ಶೂಟಿಂಗ್ ಶುಭಾರಂಭ ಆಗ್ತಿದ್ದು, ವಿದೇಶದಲ್ಲೇ ಬಹುತೇಕ ಚಿತ್ರೀಕರಣ ಮಾಡಲು ಟೀಂ ಪ್ಲ್ಯಾನ್ ಮಾಡಿದೆ. ದೀಪಿಕಾ ಇಷ್ಟಕ್ಕೇ ಸೈಲೆಂಟ್ ಆಗ್ತಾರಾ ಅಥ್ವಾ ದೀಪಿಕಾ ಮಾತಿಗೆ ವಂಗಾ ಮತ್ತೆ ರಿಯಾಕ್ಟ್ ಮಾಡ್ತಾರಾ ಅನ್ನೋದು ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್