ಡಿಬಾಸ್ ದರ್ಶನ್ ಹಾಗೂ ವಿಜಯಲಕ್ಷ್ಮೀ ನಡುವಿನ ವಿರಹ ಎಂಥವ್ರಿಗೂ ಬೇಸರ ತರಿಸುತ್ತೆ. ಕಾಶಿನಾಥ್ ಶ್..!!! ಮೂವಿಯ ಹಾಡಿನಂತೆ ‘ಅವನಲ್ಲಿ.. ಇವಳಿಲ್ಲಿ.. ಮಾತಿಲ್ಲ.. ಕಥೆಯಿಲ್ಲ’ ಅನ್ನುವಂತಾಗಿದೆ. ಅದ್ರಲ್ಲೂ ಕಳೆದ ವರ್ಷ ವೆಡ್ಡಿಂಗ್ ಆ್ಯನಿವರ್ಸರಿಯನ್ನ ಮೆಮೊರಬಲ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದ ದಚ್ಚು ದಂಪತಿ.. ಈ ಬಾರಿಯ ಆ್ಯನಿವರ್ಸರಿಯನ್ನ ವಿರಹ ಗೀತೆಯೊಂದಿಗೆ ಆಚರಿಸುವಂತಾಗಿದೆ.
- ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ
- ವಿಜಿ ಹಾರ್ಟ್ ಬ್ರೋಕನ್.. ಎಲ್ಲಕ್ಕೂ ಮೌನಗಳೇ ಸಾಕ್ಷಿ
- ಕಳೆದ ವರ್ಷ ಸಖತ್ ಸೆಲೆಬ್ರೇಷನ್.. ಈ ಬಾರಿ ಡಿಪ್ರೆಷನ್
- ವೆಡ್ಡಿಂಗ್ ಆ್ಯನಿವರ್ಸರಿಗೆ ‘ಅವನಲ್ಲಿ.. ಇವಳಿಲ್ಲಿ..’ ಸಾಂಗ್
ಮೇ 19.. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಜಯಲಕ್ಷ್ಮೀ ಕೈ ಹಿಡಿದ ದಿನ. ನಾಳೆಗೆ ಅವರಿಬ್ಬರೂ ಸತಿ ಪತಿಗಳಾಗಿ 23 ವರ್ಷಗಳಾಗಲಿದೆ. ಅಂದ್ರೆ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿಕೊಳ್ಳಬೇಕಿದ್ದ ದಂಪತಿ ವಿರಹ ವೇದನೆಯಲ್ಲಿರೋದನ್ನ ನೋಡೋಕೆ ಅಕ್ಷರಶಃ ಕಷ್ಟವಾಗಲಿದೆ. ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲೂ ಬೇಲ್ ಸಿಕ್ಕಿಲ್ಲ. ಇನ್ನೂ ಒಂದು ವರ್ಷ ಜೈಲಲ್ಲೇ, ನಾಲ್ಕು ಗೋಡೆ ಮಧ್ಯೆ ಜೀವನ ಸಾಗಿಸಬೇಕಿದೆ.
ಕಳೆದ ವರ್ಷ ಕನಕಪುರದ ಬಳಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪತ್ನಿ ವಿಜಯಲಕ್ಷ್ಮೀ ಹಾಗೂ ಅತ್ಯಾಪ್ತರ ನಡುವೆ ದಾಸ ದರ್ಶನ್ ತಮ್ಮ 22ನೇ ವಿವಾಹ ವಾರ್ಷಿಕೋತ್ಸವವನ್ನ ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ರು. ತಮಗಿಷ್ಟದ ಹಾಡುಗಳನ್ನೆಲ್ಲಾ ಹಾಡುವ ಮೂಲಕ ಮೋಜು, ಮಸ್ತಿ ಮಾಡಿದ್ರು. ಆದ್ರೀಗ ಈ ವರ್ಷ ಎಲ್ಲವೂ ಅದಲು ಬದಲಾಗಿಬಿಟ್ಟಿದೆ. ಕಾಶಿನಾಥ್ ಉಪೇಂದ್ರ ಶ್…!!! ಮೂವಿಯ ‘ಅವನಲ್ಲಿ.. ಇವಳಿಲ್ಲಿ.. ಮಾತಿಲ್ಲ.. ಕಥೆಯಿಲ್ಲ..’ ಅನ್ನೋ ಹಾಡಿನಂತಾಗಿದೆ.
ಬೇಲ್‌ಗಾಗಿ ಸುಪ್ರೀಂ ಮೊರೆ ಹೋಗಿದ್ದ ದರ್ಶನ್‌ಗೆ ಆದಷ್ಟು ಬೇಗ ಜಾಮೀನು ಮಂಜೂರು ಆಗಲಿ ಅಂತ ವಿಜಯಲಕ್ಷ್ಮೀ ಅಮೃತಸರದಲ್ಲಿರೋ ಗೋಲ್ಡನ್ ಟೆಂಪಲ್‌ಗೆ ತೆರಳಿ, ದೇವರ ಮೊರೆ ಕೂಡ ಹೋಗಿದ್ರು. ಆದ್ರೆ ಆಕೆಯ ಹರಕೆಗಳ ಫಲಿಸಲೇ ಇಲ್ಲ. ಆ ದೇವರು ಅವ್ರ ಕೈ ಹಿಡಿಯಲೇ ಇಲ್ಲ. ಹಾಗಾಗಿ ತಮ್ಮ ಇನ್ಸ್‌ಟಾ ಸ್ಟೋರೀಸ್‌ನಲ್ಲಿ ವಿಜಿ ತಮ್ಮ ಗಂಡನ ಫೋಟೋ ಹಾಕಿ, ಅದಕ್ಕೊಂದು ಹಾರ್ಟ್ ಬ್ರೋಕನ್ ಇಮೇಜ್ ಹಾಕಿ, ಲಂಕೇಶ್ ಪತ್ರಿಕೆ ಚಿತ್ರದ ಎಂದು ಕಂಡ ಕನಸು ಅನ್ನೋ ವಿರಹ ಗೀತೆಯ ಸಾಲುಗಳನ್ನ ಹಾಕಿಕೊಂಡಿದ್ದಾರೆ.
- ಜೈಲಲ್ಲಿ ದರ್ಶನ್ ಆತ್ಮಹತ್ಯೆಗೆ ಯತ್ನಿಸಿಲ್ಲ.. ಸುಳ್ಳು ಸುದ್ದಿ
- ಅಂತೆ ಕಂತೆಗಳಿಗೆ ಜೈಲಾಧಿಕಾರಿ ಕೊಟ್ರು ಪಕ್ಕಾ ಸ್ಪಷ್ಟನೆ..!!
ಈ ಮಧ್ಯೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿತ್ತು. ಅದಕ್ಕೆ ಖುದ್ದು ಜೈಲಾಧಿಕಾರಿ ಅನ್ಷು ಕುಮಾರ್ ಸ್ಪಷ್ಟನೆ ನೀಡಿದ್ದು, ಆ ರೀತಿಯ ಘಟನೆ ಏನೂ ಸಂಭವಿಸಿಲ್ಲ. ಅದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ. ಜೈಲಾಧಿಕಾರಿಯೇ ನೀಡಿರೋ ಈ ಸ್ಪಷ್ಟನೆಗೆ ಡಿಬಾಸ್ ಫ್ಯಾಮಿಲಿ ಜೊತೆ ಫ್ಯಾನ್ಸ್ ಕೂಡ ಕೊಂಚ ನಿರಾಳಗೊಂಡಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್