ಅಯ್ಯೋ.. ದರ್ಶನ್ ಫ್ಯಾಮಿಲಿಗೆ ಮತ್ತೆ ಕಾನೂನು ಕಂಟಕ..?

ವಿಜಯಲಕ್ಷ್ಮೀ ಫ್ಲ್ಯಾಟ್‌‌‌ನಲ್ಲಿ ಪೆಟ್ ಸ್ನೇಕ್.. ದರ್ಶನ್‌ಗೆ ಉರುಳು

Untitled design 2025 05 30t181324.427

ಥತ್ತೇರಿಕೆ.. ಇದೇನ್ ಗೊತ್ತಿದ್ ಮಾಡ್ತಾರೋ ಅಥ್ವಾ ಗೊತ್ತಿಲ್ದೆ ಮಾಡ್ತಾರೋ ಒಂದೂ ಗೊತ್ತಾಗ್ತಿಲ್ಲ. ಆದ್ರೆ ಒಂದರ ಹಿಂದೊಂದು ವಿವಾದಗಳಲ್ಲಿ ಸಿಲುಕಿಕೊಳ್ತಾನೇ ಇರ್ತಾರೆ ನಟ ದರ್ಶನ್ & ಫ್ಯಾಮಿಲಿ. ಅರೇ.. ಬೇಲ್ ಮೇಲೆ ಹೊರಗಡೆ ಬಂದಿದ್ದಾರಲ್ವಾ ಡಿಬಾಸ್..? ಮತ್ತೇನ್ ಎಡವಟ್ ಮಾಡ್ಕೊಂಡ್ರು ಗುರು ಅಂತ ಹುಬ್ಬೇರಿಸುವವರು ಈ ಸ್ಪೆಷಲ್ ಎಕ್ಸ್‌ಕ್ಲೂಸಿವ್ ಸ್ಟೋರಿಯನ್ನ ಒಮ್ಮೆ ನೋಡಲೇಬೇಕು.

ಮುದ್ದಾದ ಹೆಂಡ್ತಿ, ಮುಗಿಲೆತ್ತರಕ್ಕೆ ಬೆಳೆದು ನಿಂತಿರೋ ಮಗ. ಕೆಲಸ ಮಾಡೋಕೆ ಕೈ ತುಂಬಾ ಸಿನಿಮಾಗಳು. ಆರಧಿಸೋಕೆ ಲಕ್ಷಾಂತರ ಮಂದಿ ಅಭಿಮಾನಿಗಳು. ನೆಮ್ಮದಿಯ ಜೀವನಕ್ಕೆ ಎರಡು ಫಾರ್ಮ್‌ ಹೌಸ್‌ಗಳು. ಐಷಾರಾಮಿ ಕಾರ್‌‌ಗಳು. ಇದಕ್ಕಿಂತ ಒಳ್ಳೆಯ ಲೈಫು ಯಾರಿಗಾದ್ರೂ ಸಿಗೋಕೆ ಸಾಧ್ಯವೇ..? ನೋ ವೇ. ಚಾನ್ಸೇ ಇಲ್ಲ. ಇವೆಲ್ಲವೂ ಇದ್ದು, ಎಡವಟ್ ಮೇಲೆ ಎಡವಟ್ ಮಾಡ್ಕೊಳ್ತಿರೋ ಒನ್ ಅಂಡ್ ಓನ್ಲಿ ಕನ್ನಡದ ಸ್ಟಾರ್ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಕನ್ನಡ ಚಿತ್ರರಂಗದಲ್ಲಿ ಫಾದರ್ ತೂಗುದೀಪ ಶ್ರೀನಿವಾಸ್ ಬಹುದೊಡ್ಡ ಹೆಸರು ಮಾಡಿದ್ರೂ ಸಹ, ಅವರ ಸಹಾಯವಿಲ್ಲದೆ, ಯಾವುದೇ ಗಾಡ್ ಫಾದರ್ ಇಲ್ಲದೆ, ಸಾಮಾನ್ಯ ಲೈಟ್ ಬಾಯ್ ಆಗಿದ್ದ ದರ್ಶನ್, ಇಂದು ದೊಡ್ಡ ಸೂಪರ್ ಸ್ಟಾರ್. ಸಿನಿಮಾ, ಸೀರಿಯಲ್‌‌‌ಗಳಲ್ಲಿ ಕ್ಯಾಮೆರಾ ಅಸಿಸ್ಟೆಂಟ್, ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬೆಳೆದ ಇವರು ಮೆಜೆಸ್ಟಿಕ್‌‌ನಿಂದಲೇ ಮೆಜೆಸ್ಟಿಕ್‌ನ ಕೆಜಿ ರಸ್ತೆಯ ಥಿಯೇಟರ್ ಮುಂದೆ ಕಟೌಟ್ ಹಾಕಿಸಿಕೊಳ್ತಾರೆ. 23 ವರ್ಷಗಳಲ್ಲಿ 55ಕ್ಕೂ ಅಧಿಕ ಚಿತ್ರಗಳನ್ನ ಮಾಡಿ, ಅಪಾರ ಅಭಿಮಾನಿಗಳನ್ನ ಸಂಪಾದಿಸಿರೋ ದಾಸ ದರ್ಶನ್, ಬಾಕ್ಸ್ ಆಫೀಸ್ ಸುಲ್ತಾನ ಕೂಡ ಹೌದು.

ಕಷ್ಟಪಟ್ಟು ಮೇಲೆ ಬಂದ ದರ್ಶನ್‌ಗೆ ಸ್ಟಾರ್ಡಮ್, ದುಡ್ಡಿನ ಮದ ಎಲ್ಲವೂ ತಲೆಗೆ ಹತ್ತಿಬಿಡ್ತು. ಅದೇ ಕಾರಣದಿಂದ ಕಷ್ಟಕಾಲದಲ್ಲಿ ಕೈ ಹಿಡಿದ ಪತ್ನಿಯನ್ನ ಕೂಡ ಲೆಕ್ಕಿಸದೆ ಒಂದಲ್ಲ ಎರಡೆರಡು ಬಾರಿ ಡೊಮೆಸ್ಟಿಕ್ ವಯಲೆನ್ಸ್ ಮಾಡುವ ಮೂಲಕ ಜೈಲು ಪಾಲಾಗಿದ್ದರು. ಸಾಲದು ಅಂತ ಪತ್ನಿ ಇದ್ದಾಗಲೇ ಗೆಳತಿ ಪವಿತ್ರಾ ಗೌಡಗಾಗಿ ರೇಣುಕಾಸ್ವಾಮಿಯ ಹತ್ಯೆ ಕೂಡ ಮಾಡಿರೋ ಆರೋಪ ಹೊತ್ತಿದ್ದಾರೆ. ಸದ್ಯ ಕೊಲೆ ಆರೋಪಿ ಆಗಿರೋ ದರ್ಶನ್‌ ಲೈಫು ತುಂಬಾ ಬರ್ಬಾದ್ ಆಗೋಗಿದೆ. ಬೇಲ್ ಮೇಲೆ ಹೊರಗೆ ಇದ್ದರೂ ನೆಮ್ಮದಿ ಇಲ್ಲದಂತಾಗಿದೆ.

ಗೊತ್ತಿದ್ದು ಮಾಡ್ತಾರೋ ಅಥ್ವಾ ಗೊತ್ತಿಲ್ಲದೆ ಮಾಡ್ತಾರೋ ಗೊತ್ತಿಲ್ಲ. ಆದ್ರೆ ವಿವಾದಗಳು ಮಾತ್ರ ಬೇತಾಳನಂತೆ ಇವರ ಬೆನ್ನ ಹಿಂದೆಯೇ ಇದ್ದಾವೆ. ಕೊಲೆ ಕೇಸ್‌‌ನಿಂದ ಹೊರಗೆ ಬಂದ್ರೆ ಸಾಕಪ್ಪಾ ದೇವರೆ ಅಂತ ದರ್ಶನ್ ಹಾಗೂ ವಿಜಯಲಕ್ಷ್ಮೀ ಕೈ ಮುಗಿಯದ ದೇವರೇ ಇಲ್ಲ. ಹಾಗಂತ ಯಾವ ದೇವರೂ ಸಹ ಅವ್ರನ್ನ ಕೈಹಿಡಿಯುತ್ತಿಲ್ಲ. ಒಂದು ಸಮಸ್ಯೆ ನಿವಾರಿಸಿಕೊಳ್ಳೋ ಸಮಯಕ್ಕೆ ಮತ್ತೊಂದು ಸಮಸ್ಯೆ ಬಂದು ಮುತ್ತಿಕೊಳ್ತಿದೆ. ವಿವಾದಗಳ ಸಹವಾಸವೇ ಸಾಕು ಗುರು ಅಂತ ದರ್ಶನ್ ಅಂದ್ರೂ ವಿವಾದಗಳೇ ದರ್ಶನ್ ಮನೆ ತನಕ ಬಂದು ಬಾಗಿಲು ಬಡಿಯುತ್ತಿವೆ.

ಯೆಸ್.. ಇದು ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಾನು ವಾಸವಾಗಿರೋ ಹೊಸಕೆರೆಹಳ್ಳಿಯ ಅಪಾರ್ಟ್‌‌ಮೆಂಟ್‌‌ನಲ್ಲಿರೋ ಫ್ಲ್ಯಾಟ್‌‌ನಲ್ಲಿ ಹಾವಿನ ಜೊತೆ ಪೋಸ್ ಕೊಟ್ಟಿರೋ ಫೋಟೋಗಳು. ಅಂದಹಾಗೆ ಹೆಬ್ಬಾವು ಪ್ರಭೇದದ ಈ ಹಾವು ನಮ್ಮ ಭಾರತದ್ದು ಅಲ್ಲ. ದುಬೈ ಸೇರಿದಂತೆ ಅರಬ್ ಕಂಟ್ರಿಗಳಲ್ಲಿ ಲೀಗಲ್ ಆಗಿ ಸಾಕಲು ಅನುಮತಿ ಅರುವಂತಹ ಇಂಪೋರ್ಟೆಡ್ ಸ್ನೇಕ್.

ನಮ್ಮ ಇಂಡಿಯಾದಲ್ಲಿ ಹಾವುಗಳನ್ನ ಸಾಕುವುದಕ್ಕೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ತೊಡಕಿದೆ. ಅದರಲ್ಲೂ ಒಂದೂವರೆ ವರ್ಷದ ಹಿಂದೆ ಸ್ನೇಕ್ ಶ್ಯಾಮ್ ಅವರು ರೆಸ್ಕ್ಯೂ ಮಾಡಿದಂತಹ ಎರಡು ಹಾವುಗಳನ್ನ ಅಕ್ರಮವಾಗಿ ಮನೆಯಲ್ಲಿ ಸಾಕಿದ್ದ ಹಿನ್ನೆಲೆ ಅವರ ಮನೆ ಮೇಲೆ ರೇಡ್ ಕೂಡ ಆಗಿತ್ತು. ಕರ್ನಾಟಕ ಫಾರೆಸ್ಟ್ ಆ್ಯಕ್ಟ್ ಪ್ರಕಾರ ಅವರ ತಪ್ಪು ಸಾಬೀತಾಗಿ ಅವರನ್ನ ಜುಡಿಷಿಯಲ್ ಕಸ್ಟಡಿಗೆ ನೀಡಲಾಗಿತ್ತು. ಸದ್ಯ ವಿಜಯಲಕ್ಷ್ಮೀ ಹಾವು ಸಾಕಿರೋ ಪ್ರಕರಣ ಕೂಡ ಅಂಥದ್ದೇ ಬೆಳವಣಿಗೆ ಪಡೆದರೂ ಅಚ್ಚರಿಯಿಲ್ಲ.

ಅಂದಹಾಗೆ ವಿಜಯಲಕ್ಷ್ಮೀ ದರ್ಶನ್ ಅವರು ಹಾವನ್ನು ಸಾಕ್ತಿರೋ ವಿಷಯ ಅಕ್ಕಪಕ್ಕದ ನಿವಾಸಿಗಳಿಗೆ ಆತಂಕ ತಂದಿದೆ. ಅಲ್ಲಿನ ನಿವಾಸಿಗಳು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರಂತೆ. ಆಗ ಪೊಲೀಸರು ಕೂಡ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದು, ಯಾವುದೇ ಕ್ಷಣದಲ್ಲಿ ವಿಜಯಲಕ್ಷ್ಮೀ ಫ್ಲ್ಯಾಟ್ ಮೇಲೆ ಅರಣ್ಯಾಧಿಕಾರಿಗಳು ರೇಡ್ ಮಾಡುವ ಸಾಧ್ಯತೆಯಿದೆ.

ಇಷ್ಟಕ್ಕೂ ವಿಜಯಲಕ್ಷ್ಮೀ ಅನುಮತಿ ಪಡೆದೇ ಹಾವನ್ನು ಸಾಕ್ತಿದ್ದಾರಾ..? ಅವರ ಬಳಿ ಅದಕ್ಕೆ ಪೂರಕವಾಗಿ ಅನುಮತಿ ಪತ್ರ ಇದೆಯಾ..? ಅಥ್ವಾ ಅದು ಅಕ್ರಮವಾಗಿ ಸಾಕ್ತಿರೋದಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ಟಾರೆ ಇದು ಅಕ್ರಮ ಅನ್ನೋದು ಸಾಬೀತಾದರೆ ಕಾನೂನಿನ ಕಂಟಕ ಕಟ್ಟಿಟ್ಟ ಬುತ್ತಿ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Exit mobile version