ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ

1 (4)

ದೆಹಲಿ: ದೆಹಲಿಯ ನಿಜಾಮುದ್ದೀನ್ ನಗರದ ಭೋಗಲ್ ಬಜಾರ್ ಲೇನ್‌ನಲ್ಲಿ ಪಾರ್ಕಿಂಗ್‌ ವಿಚಾರಕ್ಕೆ ಉಂಟಾದ ವಾದ ಮತ್ತು ಜಗಳದಿಂದ ಹಿಂದಿ ನಟಿ ಹುಮಾ ಖುರೇಷಿ ಸಹೋದರ ಆಸಿಫ್ ಖುರೇಷಿಯ ಹತ್ಯೆಯಾಗಿದೆ. ಸ್ಕೂಟರ್ ಪಾರ್ಕಿಂಗ್ ವಿಚಾರಕ್ಕೆ ನೆರೆ ಹೊರೆಯವರ ಜೊತೆ ಜಗಳವಾಡಿದ್ದ ಆಸೀಫ್, ಹಲ್ಲೆಗೊಳಾಗಾಗಿ ಹತ್ಯೆಯಾದ ಘಟನೆ ನಡೆದಿದೆ. ಪೊಲೀಸರು ವಿಚಾರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾರ್ಕಿಂಗ್ ವಿಚಾರಕ್ಕೆ ಶುರುವಾದ ವಾದವು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದೆಹಲಿಯ ನಿಜಾಮುದ್ದೀನ್ ನಗರದಲ್ಲಿ ನಡೆದಿದೆ. ಹತ್ಯೆಯಾದ ಆಸೀಫ್ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾತಿನಲ್ಲಿ ಶುರುವಾದ ಜಗಳವು ಕೊಲೆಯ ಹಂತಕ್ಕೆ ತಲುಪಿದ್ದು, ಆಸೀಫ್ ಹತ್ಯೆಯಾಗಿದ್ದಾರೆ. ಪೊಲೀಸರು ತ್ವರಿತವಾಗಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಕಾರ್ಯಾಚರಣೆ ವೇಗದಲ್ಲಿ ನಡೆದಿದೆ.

ಆಗಸ್ಟ್ 7ರ ನಡುರಾತ್ರಿ ಹನ್ನೊಂದರ ಸುಮಾರಿಗೆ ಭೋಗಲ್ ಬಜಾರ್ ಲೇನ್‌ನಲ್ಲಿ ಘಟನೆ ನಡೆದಿದ್ದು, ತಮ್ಮ ಮನೆಯ ಮುಂದಿದ್ದ ಸ್ಕೂಟಿಯನ್ನು ಪಕ್ಕದಲ್ಲಿ ನಿಲ್ಲಿಸಲು ಆಸೀಫ್ ಹೇಳಿದ್ದರು. ಆದರೆ ಆರೋಪಿಗಳು ಗಾಡಿಯನ್ನು ಅಲ್ಲೇ ಇರಿಸಿ ವಿವಾದಕ್ಕೆ ಎಡೆ ಮಾಡಿ ಜಗಳದ ನಂತರ ಹಲ್ಲೆಯಾಯಿತು ಎನ್ನಲಾಗಿದೆ. ಆರೋಪಿಗಳು ನಟಿಯ ಸಹೋದರನಿಗೆ ಗಂಭೀರ ಹಲ್ಲೆ ನಡೆಸಿದ್ದರು. ಮನೆಯವರು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದು, ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು.

ಆಸೀಫ್ ಮನೆಯವರ ಪ್ರಕಾರ, ಇದು ಮೊದಲ ಬಾರಿ ನಡೆದ ಜಗಳವಲ್ಲ, ಹಲವು ಬಾರಿ ಈ ಜಗಳಗಳು ನಡೆದಿದ್ದು ಕೊಲೆಯ ತನಕ ಹೋಗಿದ್ದು ದುಃಖವಾಗಿದೆ ಎಂದು ಹೇಳಿದ್ದಾರೆ.

ನನ್ನ ಗಂಡ ಆಫೀಸಿನಿಂದ ಬಂದು ಗಾಡಿ ನಿಲ್ಲಿಸಿದವರು ಮನೆಯ ಮುಂದಿದ್ದ ಗಾಡಿಯನ್ನು ತೆಗೆದು ಬೇರೆಡೆ ನಿಲ್ಲಿಸಲು ಕೇಳಿದರು. ಆದರೆ ಅವರು ಗಾಡಿ ಬೇರೆಡೆ ನಿಲ್ಲಿಸದೆ ಸುಮ್ಮನೆ ವಾದ ಮಾಡಿದರು. ಮಾತಿಗೆ ಮಾತು ಬೆಳೆದು ನನ್ನ ಗಂಡ ಮತ್ತು ಮನೆಯವರನ್ನ ಅವಾಚ್ಯ ಪದಗಳಿಂದ ನಿಂದಿಸಿದರು. ನಂತರ ಹಲ್ಲೆ ಮಾಡಿದರು. ಆಸ್ಪತ್ರೆಗೆ ಸೇರಿಸುವ ಮುನ್ನವೇ ಅವರ ಪ್ರಾಣ ಹೋಗಿತ್ತು ಎಂದು ಮೃತ ಆಸೀಫ್ ಪತ್ನಿ ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಕಾರ್ಯಾಚರಣೆ ನಡೆಯುತ್ತಿದೆ. ಮೃತ ಆಸೀಫ್ ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಹೋದರರಾಗಿದ್ದಾರೆ. ಹುಮಾ ಖುರೇಷಿ ಗ್ಯಾಂಗ್ ವಸೇಪುರ್, ಹೈವೇ ಮುಂತಾದ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ.

Exit mobile version