ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು, ಇದನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ ಪರಿಣಾಮ ನಟ ದರ್ಶನ್‌ಗೆ ಜಾಮೀನು ರದ್ದುಗೊಳಿಸಿ ಬಂಧಿಸುವಂತೆ ಆದೇಶಿಸಿತ್ತು. ಆದೇಶದಂತೆ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಜೀವನದಲ್ಲಿ ಮತ್ತೆ ನೋವು ಎದುರಾಗಿದೆ. ದರ್ಶನ್ ಬಂಧನದ ಸುದ್ದಿ ಕೇಳಿದ ಕ್ಷಣದಿಂದಲೇ ವಿಜಯಲಕ್ಷ್ಮಿ ಮೌನವಾಗಿದ್ದಾರೆ. ಪತಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ಕಂಡ ಕಂಡ ದೇವಾಲಯಗಳಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಹಗಲು ರಾತ್ರಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿ, ಜಾಮೀನಿಗಾಗಿ ಬಹಳ ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲಾ ಪ್ರಯತ್ನಗಳೂ ಕೊನೆಗೆ ವಿಫಲವಾಗಿ ದರ್ಶನ್ ಮತ್ತೆ ಜೈಲಿಗೆ ಸೇರಿದ್ದು ದುಃಖದಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮೊದಲ ಬಾರಿಗೆ ಪತಿ ದರ್ಶನ್ ಫೋಟೋ ಪೋಸ್ಟ್ ಮಾಡಿ ಹೃದಯ ಒಡೆದಿರುವ ಇಮೋಜಿ ಹಾಕಿ ನೋವನ್ನು ವ್ಯಕ್ತ ಪಡಿಸಿದ್ದಾರೆ.
ವಿಜಯಲಕ್ಷ್ಮಿ ಕ್ಷಣವೂ ವಿಶ್ರಾಂತಿ ಪಡೆಯದೇ ಜಾಮೀನಿಗಾಗಿ ಪ್ರಯತ್ನಿಸಿದ್ದಾರೆ. ಕಾನೂನು ತಂಡದ ಜೊತೆಗೆ ಸಮಾಲೋಚನೆ, ದೇವಾಲಯಗಳಿಗೆ ಭೇಟಿ, ವಿಶೇಷ ಪೂಜೆಗಳು ಎಲ್ಲವನ್ನೂ ಮಾಡಿಸಿದ್ದಾರೆ. ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ್‌ಗೆ ಜಾಮೀನು ಒದಗಿಸಲು ಪ್ರಾರ್ಥಿಸಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ದರ್ಶನ್ ಜಾಮೀನನ್ನು ರದ್ದುಗೊಳಿಸಿದಾಗ ಈ ಎಲ್ಲಾ ಪ್ರಯತ್ನಗಳು ವ್ಯರ್ಥವಾದವು. ಈ ಸುದ್ದಿಯಿಂದ ವಿಜಯಲಕ್ಷ್ಮಿ ಮತ್ತೆ ಆಘಾತಕ್ಕೊಳಗಾದರು ಅವರ ಮನೆಯಲ್ಲಿ ಕಣ್ಣೀರಿನ ವಾತಾವರಣ ನಿರ್ಮಾಣವಾಗಿದೆ.
ಕಳೆದ ಡಿಸೆಂಬರ್‌ನಿಂದ ಇತ್ತೀಚಿಗಿನ ಜೈಲುವಾಸದವರೆಗೂ, ವಿಜಯಲಕ್ಷ್ಮಿ ತಮ್ಮ ಪತಿ ದರ್ಶನ್‌ರೊಂದಿಗೆ ಗಣನೀಯ ಸಮಯವನ್ನು ಕಳೆದಿದ್ದಾರೆ. ‘ಡೆವಿಲ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನ ಮತ್ತು ವಿದೇಶದಲ್ಲಿ ದರ್ಶನ್‌ರೊಂದಿಗೆ ಜೊತೆಯಾಗಿದ್ದರು.
ಈ ಸಂದರ್ಭದಲ್ಲಿ, ದರ್ಶನ್‌ರೊಂದಿಗಿನ ಒಡನಾಟವು ಅವರಿಗೆ ಬೆಂಬಲವನ್ನು ಒದಗಿಸಿತು. ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಿಜಯಲಕ್ಷ್ಮಿಯ ಮನೆ ಇದ್ದರೆ, ಆರ್.ಆರ್. ನಗರದಲ್ಲಿ ದರ್ಶನ್‌ರ ಮನೆಯಿದೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದಾಗ, ದರ್ಶನ್ ಹೆಚ್ಚಿನ ಸಮಯವನ್ನು ಪತ್ನಿಯ ಜೊತೆಯೇ ಕಳೆದಿದ್ದರು. ಆದರೆ, ಇದೀಗ ದರ್ಶನ್ ಮತ್ತೆ ಜೈಲಿಗೆ ಸೇರಿದ್ದು, ವಿಜಯಲಕ್ಷ್ಮಿಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.