ಒಂದಷ್ಟು ಅಂತೆ ಕಂತೆಗಳ ನಡುವೆಯೂ ಯೂರೋಪ್ ಬದಲಿಗೆ ಥಾಯ್ಲೆಂಡ್‌ನತ್ತ ಫ್ಲೈಟ್ ಏರುವುದಕ್ಕೆ ಸಜ್ಜಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಯೆಸ್.. ಡೆವಿಲ್ ಸಿನಿಮಾದ ಸಾಂಗ್ ಶೂಟ್‌ಗಾಗಿ ಫಾರಿನ್‌ಗೆ ಹೊರಟು ನಿಂತಿರೋ ಡಿಬಾಸ್‌ಗೆ ಒಂದಲ್ಲ ಎರಡಲ್ಲ ಹತ್ತಾರು ಕಂಡಿಷನ್ಸ್. 10 ದಿನಕ್ಕಾಗಿ ಟಫ್ ಕಂಡಿಷನ್ಸ್ ಹಾಕಿದ್ದು ಯಾರು..? ಏನು ಆ ಕಂಡಿಷನ್ಸ್ ಅಂತೀರಾ..? ಜಸ್ಟ್ ವಾಚ್.
- ಥಾಯ್ಲೆಂಡ್‌ನತ್ತ ಡೆವಿಲ್ ಡಿಬಾಸ್.. ಕಂಡಿಷನ್ಸ್ ಅಪ್ಲೈ
- ಯೂರೋಪ್ ಕ್ಯಾನ್ಸಲ್.. ಥಾಯ್ಲೆಂಡ್‌ಗೆ ಗ್ರೀನ್ ಸಿಗ್ನಲ್
- 10 ದಿನಕ್ಕೆ ಹತ್ತಾರು ಕಂಡಿಷನ್ಸ್.. ಸ್ಟ್ರಿಕ್ಟ್ ಲಾ & ಆರ್ಡರ್
- 5 ದಿನ ಡೆವಿಲ್ ಸಾಂಗ್ ಶೂಟ್.. 5 ದಿನ ಮೋಜು ಮಸ್ತಿ
ದರ್ಶನ್ ಮಾಡಿದ ಆ ಒಂದು ಎಡವಟ್‌ನಿಂದ ಆಲ್ಮೋಸ್ಟ್ ಆಲ್ ಅವರಿಗೆ ನರಕದ ದರ್ಶನ ಆಗಿಬಿಟ್ಟಿದೆ. ಆದ್ರೂ ಕುಗ್ಗದ ಡಿಬಾಸ್ ದಚ್ಚು, ಮತ್ತೆ ಪುಟಿದೇಳುವ ಧಾವಂತದಲ್ಲಿದ್ದಾರೆ. ಸಿನಿಮಾ, ಫ್ಯಾಮಿಲಿ, ಫ್ರೆಂಡ್ಸ್ ಹಾಗು ತಾನು ಇಷ್ಟ ಪಡುವ ಮೂಕ ಪ್ರಾಣಿಗಳು ಹಾಗೂ ಪಕ್ಷಿಗಳೇ ಜೀವನ ಆಗಿಬಿಟ್ಟಿದೆ. ಈ ನಡುವೆ ಹತ್ತಾರು ವಿಘ್ನಗಳ ನಡುವೆಯೂ ಪ್ರಾಯಾಸದಿಂದ ಕೊನೆಯ ಹಂತಕ್ಕೆ ಬಂದು ನಿಂತಿದೆ ಡೆವಿಲ್ ಸಿನಿಮಾ.
ಯೆಸ್.. ಸಾಂಗ್ ಶೂಟ್‌ಗಾಗಿ ವಿದೇಶಕ್ಕೆ ತೆರಳಬೇಕಿದ್ದ ಡೆವಿಲ್ ಸಿನಿಮಾ ತಂಡ, ದರ್ಶನ್‌ಗೆ ಕಾನೂನು ಕಂಟಕ ಇರೋದ್ರಿಂದ ಕೋರ್ಟ್‌ನಿಂದ ಸ್ಪೆಷಲ್ ಪರ್ಮಿಷನ್ ಪಡೆದಿತ್ತು. ಒಂದಷ್ಟು ಖಡಕ್ ಕಂಡಿಷನ್ಸ್ ಮೇಲೆ ದರ್ಶನ್‌ಗೆ ಫಾರಿನ್‌ಗೆ ತೆರಳಲು ಅವಕಾಶ ನೀಡಿತ್ತು ಕೋರ್ಟ್. ಯೂರೋಪ್ ಹಾಗೂ ಬ್ಯಾಂಕಾಕ್‌ಗೆ ತೆರಳಲು 25ರಿಂದ ಒಂದು ತಿಂಗಳ ಕಾಲ ಕೋರ್ಟ್ ಅನುಮತಿ ಪಡೆದಿದ್ದ ಟೀಂ ಡೆವಿಲ್ 10 ದಿನಕ್ಕೆ ಆ ಟೂರ್‌ನ ಸೀಮಿತಗೊಳಿಸಿದೆ.
ಯೆಸ್.. ಮೊದಲಿಗೆ ಟ್ವಿಟ್ಜರ್ಲೆಂಡ್‌ಗೆ ತೆರಳಲು ವೀಸಾಗೆ ಅಪ್ಲೈ ಮಾಡಿತ್ತು ಟೀಂ. ನಟ ದರ್ಶನ್ ಮೇಲೆ ಕೊಲೆ ಆರೋಪ ಇರೋದ್ರಿಂದ ವೀಸಾ ನೀಡಲು ನಿರಾಕರಿಸಿದೆ ಸ್ವಿಟ್ಜರ್ಲೆಂಡ್. ಸೋ.. ಸ್ವಿಟ್ಜರ್ಲೆಂಡ್ ಬದಲಿಗೆ ಥಾಯ್ಲೆಂಡ್ ತೆರಳಲು ನಿರ್ಧರಿಸಿದ್ದು, ಇದೇ ಜುಲೈ 14ರಂದು ಥಾಯ್ಲೆಂಡ್ ಫ್ಲೈಟ್ ಏರುತ್ತಿದ್ದಾರೆ ದಾಸ ದರ್ಶನ್ ಹಾಗೂ ಟೀಂ ಡೆವಿಲ್.
ಥಾಯ್ಲೆಂಡ್ ಪ್ರವಾಸ ಜಸ್ಟ್ 10 ದಿನ ಅಷ್ಟೇ. ಅದರಲ್ಲೂ ಐದು ದಿನಗಳ ಕಾಲ ನಟಿ ರಚನಾ ರೈ ಜೊತೆ ದರ್ಶನ್ ಡುಯೆಟ್ ಸಾಂಗ್ ಚಿತ್ರಿಸಲಿದೆ. ಅದಾದ ಬಳಿಕ ಐದು ದಿನಗಳ ಕಾಲ ರೆಸ್ಟ್ ಪಡೆದು, ಜುಲೈ 24ರಂದೇ ವಾಪಸ್ ಆಗಲಿದೆಯಂತೆ ಚಿತ್ರತಂಡ. ಅಂದಹಾಗೆ ದರ್ಶನ್ ವಿದೇಶ ಪ್ರಯಾನ ಅಷ್ಟು ಸುಲಭವಾಗಿಲ್ಲ. ಕೋರ್ಟ್‌ನಲ್ಲಿ ಒಪ್ಪಿ ಕರೆದೊಯ್ಯುತ್ತಿರೋ ನಿರ್ಮಾಣ ಸಂಸ್ಥೆಗೆ ಹತ್ತಾರು ಸ್ಟ್ರಿಕ್ಟ್ ಕಂಡಿಷನ್ಸ್ ಹಾಕಿದೆ ಕೋರ್ಟ್.
ಕೋರ್ಟ್‌ನಿಂದ ಟೀಂ ಡೆವಿಲ್‌ಗೆ ಖಡಕ್ ಕಂಡಿಷನ್ಸ್
- ಆರೋಪಿ ದರ್ಶನ್ ಆರೋಗ್ಯದ ಬಗ್ಗೆ ನಿರ್ಮಾಣ ಸಂಸ್ಥೆ ಕಾಳಜಿ ವಹಿಸಬೇಕು.
- ಶೂಟಿಂಗ್ ವೇಳೆ ದರ್ಶನ್ ದೇಹಕ್ಕೆ ಯಾವುದೇ ಹಾನಿ ಆಗಬಾರದು.
- ನಿಗದಿತ ವೀಸಾದಂತೆ 10 ದಿನದಲ್ಲಿ ವಾಪಸ್ ಆಗಬೇಕು.
- ಹತ್ಯೆ ಪ್ರಕರಣದ ಸಾಕ್ಷಿನಾಶಕ್ಕೆ ರೂಪರೇಶೆ ಸಿದ್ದಪಡಿಸುವಂತಿಲ್ಲ.
- ಆರೋಪಿಯನ್ನ ಭದ್ರವಾಗಿ ವಾಪಸ್ ಕರೆತರಬೇಕು.
- ಶೂಟಿಂಗ್ ವೇಳೆ ಆರೋಪಿ ಯಾರೊಟ್ಟಿಗೂ ಜಗಳ ಮಾಡಿಕೊಳ್ಳುವಂತಿಲ್ಲ.
- ಆರೋಪಿಯ ಕಂಪ್ಲೀಟ್ ಜವಾಬ್ದಾರಿ ನಿರ್ಮಾಣ ಸಂಸ್ಥೆಯದ್ದು.
- ಮುಂದಿನ ವಿಚಾರಣೆಗೆ ತಪ್ಪದೆ ಹಾಜರಾಗತಕ್ಕದ್ದು.
- ವಿದೇಶಕ್ಕೆ ತೆರಳಲು ಬಾಂಡ್ ಹಾಗೂ ನಿರ್ಮಾಣ ಸಂಸ್ಥೆಯಿಂದ ಶ್ಯೂರಿಟಿ.
10.ಕೋರ್ಟ್ ಷರತ್ತುಗಳನ್ನ ಮೀರಿದ್ರೆ ಕಾನೂನು ಉಲ್ಲಂಘನೆ ಆಗಲಿದೆ.
ನೋಡಿದ್ರಲ್ಲಾ ಇವೆಲ್ಲಾ ಷರತ್ತುಗಳಿಗೆ ಒಪ್ಪಿಯೇ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್ ದರ್ಶನ್‌ರನ್ನ ಥಾಯ್ಲೆಂಡ್‌ಗೆ ಕರೆದೊಯ್ಯಲು ಸಜ್ಜಾಗಿದ್ದಾರೆ. ಅದೇನೇ ಇರಲಿ, ಕೆಟ್ಟ ಮೇಲೆ ಬುದ್ದಿ ಬರಲೇಬೇಕು ಅನ್ನೋ ಮಾತಿದೆ. ಅದ್ರಂತೆ ಬದಲಾಗಿರೋ ದರ್ಶನ್‌ಗೆ ಡೆವಿಲ್ ಸಿನಿಮಾದಿಂದ ಒಳಿತಾಗಬೇಕು. ಚಿತ್ರತಂಡಕ್ಕೂ ಜಾಸ್ತಿ ಶುಭವಾಗಬೇಕು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್