ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್‌ಗಾಗಿ ಸಿಂಧೂರ ಲಕ್ಷ್ಮಣ ಸ್ಕ್ರಿಪ್ಟ್ ರೆಡಿ ಮಾಡ್ಕೊಂಡು, ಕಾಯ್ತಿದ್ದಾರೆ ಡೈರೆಕ್ಟರ್ ತರುಣ್ ಸುಧೀರ್. ಹೌದು, ಏಳುಮಲೆ ಸಕ್ಸಸ್ ಖುಷಿಯಲ್ಲಿರೋ ತರುಣ್, ತನ್ನ ನೆಚ್ಚಿನ ನಾಯಕನಟ ಕಮ್ ಗೆಳೆಯ ದಚ್ಚು ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇಷ್ಟಕ್ಕೂ ಏನು ಹೇಳಿದ್ರು..? ಅವರದ್ದು ಎಂತಹ ಸ್ನೇಹ ಅನ್ನೋದ್ರ ಅಸಲಿ ಕಥೆ ಇಲ್ಲಿದೆ ನೋಡಿ.
- ದಚ್ಚುಗೆ ಸಿಂಧೂರ ಲಕ್ಷ್ಮಣ ಸ್ಕ್ರಿಪ್ಟ್ ರೆಡಿ.. ತರುಣ್ ಅಪ್ಡೇಟ್ಸ್
- ವಿಷ ಕೊಡಿ ಅಂದಿದ್ದಾರಂದ್ರೆ ಎಷ್ಟು ನೊಂದಿರ್ತಾರೆ ದರ್ಶನ್?
- ಡಿಬಾಸ್ ಅಪರಾಧಿ ಅಲ್ಲ.. ಆಪಾದಿತ ಅಷ್ಟೇ ಎಂದ ಗೆಳೆಯ
- ಡೆವಿಲ್ ಬಗ್ಗೆ ನಿರೀಕ್ಷೆ ಹೆಚ್ಚಿದೆ.. ಸಿನಿಮಾ ಪಕ್ಕಾ ಸಕ್ಸಸ್ ಆಗುತ್ತೆ
ಏಳುಮಲೆ ಇತ್ತೀಚೆಗೆ ತೆರೆಕಂಡ ರಾಣಾ-ಪ್ರಿಯಾಂಕಾ ಜೋಡಿಯ ಈ ಸಿನಿಮಾ ಥಿಯೇಟರ್‌ನಲ್ಲಿ ಸಿಕ್ಕಾಪಟ್ಟೆ ಮೋಡಿ ಮಾಡ್ತಿದೆ. ಪುನೀತ್ ರಂಗಸ್ವಾಮಿ ನಿರ್ದೇಶನದ ಹಾಗೂ ತರುಣ್ ಸುಧೀರ್ ನಿರ್ಮಾಣದ ಏಳುಮಲೆ, ಔಟ್ ಅಂಡ್ ಔಟ್ ಥ್ರಿಲ್ಲರ್ ಪ್ರೇಮ್ ಕಹಾನಿಯಾಗಿ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇದ್ರ ಸಕ್ಸಸ್ ಸಂಭ್ರಮ ಇತ್ತೀಚೆಗೆ ಎಂಎಂಬಿ ಲೆಗಸಿಯಲ್ಲಿ ನಡೆಯಿತು. ಇಡೀ ಚಿತ್ರತಂಡ ಆ ಸಾರ್ಥಕ ಜರ್ನಿ ಬಗ್ಗೆ ಹಾಗೂ ಅಭೂತಪೂರ್ವ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿತು.
ಆದ್ರೀಗ ಆ ಚಿತ್ರದ ಸ್ಕ್ರಿಪ್ಟ್ ರೆಡಿ ಆಗಿದೆ. ನಿರ್ಮಾಪಕರು ಯಾವಾಗ ಓಕೆ ಅಂತಾರೋ ಆಗ ನಾನು ರೆಡಿ ಅಂದಿದ ್ದಾರೆ ತರುಣ್. ಅದೇ ಸಂದರ್ಭದಲ್ಲಿ ತಮ್ಮ ಗೆಳೆಯ ದರ್ಶನ್ ಕುರಿತು ತರುಣ್ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಏನೇ ನೋವು ಇದ್ರೂ ತೋರಿಸಿಕೊಳ್ಳಲ್ಲ. ಅವರೇ ಅನುಭವಿಸ್ತಾರೆ. ತುಂಬಾ ಸ್ಟ್ರಾಂಗ್ ಪರ್ಸನ್ ಅವರು. ವಿಷ ಕೊಡಿ ಅಂತ ಕೇಳಿದ್ದಾರಂದ್ರೆ ಎಷ್ಟು ನೊಂದಿರಬಹುದು? ದರ್ಶನ್ ಅಪರಾಧಿ ಅಲ್ಲ ಆಪಾದಿತ ಅಷ್ಟೇ. ಮಾನವ ಹಕ್ಕುಗಳ ಕಡೆಯಿಂದ ಅವರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನ ನೀಡಬೇಕು ಎಂದಿದ್ದಾರೆ.
