ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿಸಿದ ನಟ ದರ್ಶನ್!

Film (14)

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಶೂಟಿಂಗ್ ಮತ್ತೆ ಆರಂಭವಾಗಿದೆ. ಈ ಮಧ್ಯೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಮಗ ಮತ್ತು ನಟ ಧನ್ವೀರ್ ಜೊತೆ ಕೇರಳದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ಪುರಾಣ ಪ್ರಸಿದ್ಧ ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನ ಇದೆ. ಇಲ್ಲಿಗೆ ಹಲವು ರಾಜಕಾರಣಿಗಳು ಶತ್ರು ಸಂಹಾರ ಪೂಜೆ ಮಾಡಿಸಲು ತೆರಳುತ್ತಾರೆ. ಈ ದೇವಾಲಯಕ್ಕೆ ನಟ ದರ್ಶನ್ ಕುಟುಂಬ ಸಮೇತ ತೆರಳಿದ್ದು, ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಾಲಯವು ಶತ್ರು ಸಂಹಾರ ಹೋಮಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಇದೀಗ ದರ್ಶನ್ ಅವರು ಕುಟುಂಬ ಸಮೇತ ಇಲ್ಲಿಗೆ ಬಂದಿರುವುದು ಸಹ ಶತ್ರು ಸಂಹಾರ ಹೋಮಕ್ಕಾಗಿಯೇ ಎನ್ನಲಾಗುತ್ತಿದೆ.

ಇದೀಗ ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನದಲ್ಲಿ ಪತ್ನಿ ವಿಜಯಲಕ್ಷ್ಮಿ, ಮಗ ಹಾಗೂ ನಟ ಧನ್ವೀರ್ ಜೊತೆ ವಿಜಯಲಕ್ಷ್ಮಿ ಅವರು ಆಗಮಿಸಿದ್ದಾರೆ.ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ದರ್ಶನ್ ಕುಟುಂಬ ಶತ್ರು ಸಂಹಾರ ಪೂಜೆ ಮಾಡಿಸಿ ದೇವರ ದರ್ಶನ ಪಡೆದಿದೆ ಎನ್ನಲಾಗಿದೆ.

ದರ್ಶನ್‌ಗೆ ದೇಶಾದ್ಯಂತ ಪ್ರಯಾಣಕ್ಕೆ ಹೈಕೋರ್ಟ್ ಅನುಮತಿ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ನಟ ದರ್ಶನ್ ಅವರಿಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಸಿ ತಮ್ಮ ‘ಡೆವಿಲ್’ ಚಿತ್ರದ ಶೂಟಿಂಗ್ ಮುಂದುವರೆಸಲು ಕೋರ್ಟ್ ಅನುಮತಿ ನೀಡಿದೆ. ಆದರೆ, ವಿದೇಶ ಪ್ರವಾಸಕ್ಕೆ ಮಾತ್ರ ಹೈಕೋರ್ಟ್ ಅನುಮತಿ ಕಡ್ಡಾಯವಾಗಿದ್ದು, ಅದಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ಕಾನೂನು ಹೋರಾಟ 

ಕಳೆದ ಜೂನ್‌ನಲ್ಲಿ ದರ್ಶನ್ ಜೈಲು ಸೇರಿದ್ದರಿಂದ ‘ಡೆವಿಲ್’ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಈಗ ಆರೋಗ್ಯ ಸುಧಾರಿಸಿಕೊಂಡು, ಬೆನ್ನು ಮತ್ತು ಕಾಲು ನೋವಿನಿಂದಾಗಿ ಫಿಸಿಯೋಥೆರಪಿ ತೆಗೆದುಕೊಳ್ಳುತ್ತಿರುವ ದರ್ಶನ್ ಮತ್ತೆ ಶೂಟಿಂಗ್‌ಗೆ ಸಿದ್ಧರಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನಿಂದ ಹೊರಗೆ ಪ್ರಯಾಣಿಸಲು ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ಅನುಮತಿ ದೊರಕಿದೆ. ಶೂಟಿಂಗ್ ಪೂರ್ಣಗೊಂಡರೆ 2024ರಲ್ಲೇ ‘ಡೆವಿಲ್’ ತೆರೆಕಾಣಲಿದೆ.

Exit mobile version