ಸ್ಯಾಂಡಲ್‌ವುಡ್ ಚಲನಚಿತ್ರ ನಟ ದರ್ಶನ್ ತೂಗುದೀಪ ಮತ್ತು ಅವರ ಕುಟುಂಬ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಪತ್ನಿಯನ್ನು ದರ್ಶನ್ “ಮುದ್ದು ರಾಕ್ಷಸಿ” ಎಂದು ಕರೆದು ಹಳೆಯ ನೆನಪನ್ನು ನೆನಪಿಸಿಕೊಂಡಿದ್ದಾರೆ. ಈ ವಿಷಯವನ್ನು ದರ್ಶನ್ ಅವರೇ ತಮ್ಮ ಬಾಯಿಂದಲೇ ಹೇಳಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
“ಅವಳು ಮನೆಯಲ್ಲಿ ಯಾವಾಗಲೂ ಕಯ್ಯ ಕಯ್ಯ ಅಂತ ಬರೋದು. ನಾನು ತಕ್ಷಣ ‘ಏ ಮುದ್ದು ರಾಕ್ಷಸಿಯೇ’ ಅಂತ ಹೇಳಿ ಕಾಡಸ್ತೀನಿ. ಅಷ್ಟರಲ್ಲಿ ಆಕೆ ನಗುತ್ತಾಳೆ,” ಎಂದು ದರ್ಶನ್ ತಮ್ಮ ಶೈಲಿಯಲ್ಲಿ ಹೇಳಿದರು. ಈ ಮಾತು ಅವರ ಫ್ಯಾನ್ಸ್ ಹೃದಯ ಗೆದ್ದಿದೆ. ಕೆಲವೇ ಗಂಟೆಗಳಲ್ಲಿ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ದರ್ಶನ್ “ಮುದ್ದು ರಾಕ್ಷಸಿಯೇ” ಎಂಬ ಹಾಡಿನ ಬಗ್ಗೆ ಪ್ರಸ್ತಾಪಿಸಿ ಹಾಡನ್ನು ತುಂಬಾ ಇಷ್ಟಪಟ್ಟಿದ್ದಾರೆ. “ಈ ಪದ ಎಲ್ಲಿ ಸಿಕ್ಕಿತು? ಎಷ್ಟು ಚೆನ್ನಾಗಿ ಬರೀತಾರೆ ನೋಡಿ” ಎಂದು ಹಾಡಿನ ಬರಹಗಾರರನ್ನು ಮೆಚ್ಚುಗೆ ಮಾತಗಳನ್ನಾಡಿದ್ದಾರೆ.
ಮುದ್ದು ರಾಕ್ಷಸಿ 🤩😊@dasadarshan
Boss God Of Fans “ಪುಣ್ಯಾತ್ಮ” 🙏#DBoss | #TheDevil |#BossOfSandalwood | #dbossfanforever | #Haveri | pic.twitter.com/7o5ZHkUl52— D Boss Samrajya Haveri (@ka_27_Gajapade) March 28, 2025
ಇನ್ನು ದರ್ಶನ್ ಅವರು ಇತ್ತೀಚೆಗೆ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನಲ್ಲಿ ಬಿಡುಗಡೆಯಾಗಿ ತಮ್ಮ ಹೊಸ ಸಿನಿಮಾ ‘ದಿ ಡೆವಿಲ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಆಗಮಿಸದಿದ್ದರೂ, ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಧನ್ವೀರ್ ಅಭಿನಯದ ಚಿತ್ರ ತಂಡಕ್ಕೆ ಶುಭಾಶಯ ಕೋರಿದರು.
ಅದರ ನಡುವೆ ದರ್ಶನ್ ತಮ್ಮ ಕುಟುಂಬದ ಜೊತೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಜಯಲಕ್ಷ್ಮೀ ಅವರು ಆಗಾಗ ತಮ್ಮ ಮಗನೊಂದಿಗೆ ತೆಗೆಸಿಕೊಂಡ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ.