ಜೈಲಲ್ಲಿದ್ರೂ ಕೂಡ ಒಂದಿಲ್ಲೊಂದು ಕಾರಣಕ್ಕೆ ನಟ ದರ್ಶನ್ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಾರ್ಮ್ ಕಳೆದುಕೊಂಡ ಅವ್ರ ಫೋಟೋ ವೈರಲ್ ಆಗಿತ್ತು. ದರ್ಶನ್ ಭೇಟಿಯಿಂದ ಕೊಟ್ಟಿಯೂರು ಟೆಂಪಲ್‌ನಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗ್ತಿದೆ. ಅದರ ಜೊತೆ ಸಿಎಂ ಡಿಕೆಶಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಆಡಿದ ಆ ಒಂದು ಮಾತು ಎಲ್ಲೆಡೆ ಸಂಚಲನ ಮೂಡಿಸಿದೆ. ಅದೇನು ಅನ್ನೋದಕ್ಕೆ ಈ ಸ್ಪೆಷಲ್ ಸ್ಟೋರಿ ನೋಡಿ.
- ಡಿಬಾಸ್ ಅಂದವ್ರಿಗೆ ಮಾತಲ್ಲೇ ಗೂಸಾ ಕೊಟ್ಟಿದ್ಯಾಕೆ ಸಿಎಂ DK?
- ನಟ ದರ್ಶನ್‌ನ ಬಿಡಿಸಿ ಎಂದು ಕೂಗಿದ ದಚ್ಚು ಅಭಿಮಾನಿಗಳು
- ಏಯ್ ಯಾವ್ ಡಿ ಬಾಸೂ ಇಲ್ಲ ಸುಮ್ನಿರಯ್ಯಾ ಎಂದ ಡಿಕೆಶಿ
- ಸಿಎಂ ಯಾತ್ರೆಯಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಹೆಸರು
ಕರ್ನಾಟಕ ರಾಜ್ಯದ ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿರೋ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಗದ್ದುಗೆಗೆ ಏರಿದ ಬಳಿಕ ತಮ್ಮ ಮನೆ ದೇವರು, ಕನಕಪುರ ಹಾಗೂ ತಮ್ಮ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ್ರು. ಹೋದಲ್ಲೆಲ್ಲಾ ನೂತನ ಸಿಎಂಗೆ ನಿರೀಕ್ಷೆಗೂ ಮೀರಿದ ಅದ್ಧೂರಿ ಸ್ವಾಗತ ಸಿಕ್ಕಿತು. ಎಲ್ಲೆಲ್ಲೂ ಜನವೋ ಜನ. ಅಕ್ಷರಶಃ ಜನ ಸಾಗರ ಹರಿದುಬಂದಿತ್ತು.
ಹೀಗೆ ದೊಡ್ಡ ಆಲಹಳ್ಳಿಯಲ್ಲಿ ಜನರನ್ನ ಉದ್ದೇಶಿಸಿ ಮಾತಾಡ್ತಾ, ಅವರಿಗೆ ಧನ್ಯವಾದ ಹೇಳ್ತಿದ್ದ ಸಿಎಂ ಡಿಕೆ ಶಿವಕುಮಾರ್ ಅವರಿಗೆ, ಆ ಜನಸಂದಣಿಯಿಂದ ಡಿ ಬಾಸ್ ಡಿ ಬಾಸ್ ಅಂತ ದರ್ಶನ್ ಅಭಿಮಾನಿಗಳು ಕೂಗಿದ್ದಾರೆ. ಅಷ್ಟೇ ಅಲ್ಲ, ಡಿ ಬಾಸ್‌ನ ಬಿಡಿಸಿ ಸಿಎಂ ಸರ್ ಅಂತ ಕೂಗಿದ್ದಾರೆ ದಚ್ಚು ಡೈ ಹಾರ್ಡ್ ಫ್ಯಾನ್ಸ್. ಅದಕ್ಕೆ ಖಡಕ್ ಉತ್ತರ ನೀಡಿದ ಸಿಎಂ, ಏಯ್.. ಯಾವ ಡಿ ಬಾಸೂ ಇಲ್ಲ ಸುಮ್ನಿರಯ್ಯಾ ಅಂತ ಗದರಿಸಿ, ಗತ್ತಲ್ಲೇ ಗೂಸಾ ಕೊಟ್ಟಿದ್ದಾರೆ.
ಅಂದಹಾಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿರೋ ನಟ ದರ್ಶನ್ ಒಂಥರಾ ಪಂಜರದ ಪಕ್ಷಿ ಆಗಿ ಬಿಟ್ಟಿದ್ದಾರೆ. ಹಲ್ಲು ಕಿತ್ತ ಹಾವಿನಂತಾಗಿ, ನಾಲ್ಕು ಗೋಡೆ ಮಧ್ಯೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ದಚ್ಚು ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು. ಅಯ್ಯೋ ದೇವರೇ.. ದಚ್ಚು ನಿಜಕ್ಕೂ ಇಷ್ಟು ಸಣ್ಣ ಆಗಿಬಿಟ್ರಾ..? ಇಷ್ಟು ಒಣಗಿಹೋಗಿರೋದಾದ್ರೂ ಯಾಕೆ ಅಂತ ಸಾಕಷ್ಟು ಚರ್ಚೆಗಳು ಕೂಡ ನಡೆದವು.
ಅದಷ್ಟೇ ಅಲ್ಲ.. ಸದ್ಯ ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ಬೇಲ್ ಮೇಲೆ ಹೊರಗಿದ್ದಾಗ ನಟ ದರ್ಶನ್ ಭೇಟಿ ನೀಡಿದ್ರು. ದಚ್ಚು ಅಲ್ಲಿಗೆ ಹೋಗಿ ಬಂದ ಬಳಿಕ ಆ ಆಲಯ ಮತ್ತಷ್ಟು ಫೇಮಸ್ ಆಯ್ತು. ಕರ್ನಾಟಕದಿಂದ ಅಲ್ಲಿಗೆ ಹೋಗುವ ಭಕ್ತಾಧಿಗಳ ಸಂಖ್ಯೆ ಕೂಡ ಹೆಚ್ಚಾಯ್ತು. ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಕನ್ನಡಿಗರಿಗೆ ಗೌರವ ಸಿಗದೆ ಸದ್ಯ ಬಹುದೊಡ್ಡ ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟಿದೆ ಕೊಟ್ಟಿಯೂರು.
ಒಟ್ಟಾರೆ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಒಂದಿಲ್ಲೊಂದು ವಿಷಯಕ್ಕಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಅವರಿಗೆ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋದು ನಿಜ. ಹಾಗಂತ ಕಾನೂನಿನ ಬಲೆಯಿಂದ ಬಿಡಿಸಿಕೊಳ್ಳೋದು ಅಷ್ಟು ಸುಲಭವಾಗಿಲ್ಲ ಅನ್ನೋದು ಕೂಡ ಅಷ್ಟೇ ಸ್ಪಷ್ಟ. ಕೋರ್ಟ್ ಟ್ರಯಲ್ಸ್ ನಡೆಯುತ್ತಿದ್ದು, ಇನ್ನೂ ಒಂದು ವರ್ಷ ಬೇಲ್‌ಗೆ ಅಪ್ಲೈ ಕೂಡ ಮಾಡುವಂತಿಲ್ಲ ಅನ್ನೋದು ಕುಟುಂಬಸ್ಥರಿಗೆ ಹಾಗೂ ಫ್ಯಾನ್ಸ್‌ಗೆ ನುಂಗಲಾರದ ತುತ್ತಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
