ಬೆಂಗಳೂರು: ನಟ ದರ್ಶನ್, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿಯೇ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿದಂತೆ ಕೆಲವು ಸವಲತ್ತುಗಳನ್ನು ನೀಡುವಂತೆ ನೀಡಲಾಗಿದ್ದ ನ್ಯಾಯಾಲಯದ ಆದೇಶವನ್ನು ಜೈಲ್ ಅಧಿಕಾರಿಗಳು ಪಾಲಿಸಿಲ್ಲ ಎಂದು ಆರೋಪಿಸಲಾಗಿದೆ.
ಈ ಆರೋಪಗಳ ಹಿನ್ನೆಲೆಯಲ್ಲಿ, ದರ್ಶನ್ ಪರ ವಕೀಲರು ಬೆಂಗಳೂರಿನ 57ನೇ ಸಿವಿಲ್ ಕೋರ್ಟ್ (ಸಿಸಿ ಹೆಚ್ ಕೋರ್ಟ್)ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ, ಜೈಲ್ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದುತಿಳಿಸಿದ್ದಾರೆ. ದರ್ಶನ್‌ಗೆ ಯಾವುದೇ ರೀತಿಯ ಸವಲತ್ತು ನೀಡಲಾಗಿಲ್ಲ ಎಂಬ ವಿಷಯವನ್ನು ಖುದ್ದು ಜೈಲಿನಲ್ಲಿ ಪರಿಶೀಲಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಕೋರ್ಟ್‌ನಲ್ಲಿ ಕೋರಿಕೆ ನೀಡಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ.
ವಕೀಲ ಸುನೀಲ್ ,ಸಿಆರ್ ಪಿಸಿ ಸೆಕ್ಷನ್ 310 ರ ಅಡಿಯಲ್ಲಿ ಸಲ್ಲಿಸಿದ ಈ ಅರ್ಜಿಯು, ದರ್ಶನ್‌ಗೆ ಸವಲತ್ತುಗಳನ್ನು ನೀಡುವಂತೆ ನೀಡಲಾಗಿದ್ದ ನ್ಯಾಯಾಲಯದ ಆದೇಶವನ್ನು ಜೈಲ್ ಅಧಿಕಾರಿಗಳು ಪೂರ್ತಿ ನಿರ್ಲಕ್ಷಿಸಿದ್ದಾರೆ ಎಂಬುದು ಅರ್ಜಿಯ ಮುಖ್ಯ ವಾದವಾಗಿದೆ. ಜೈಲು ನಿಯಮಾವಳಿಗಳು ಮತ್ತು ಕೈದಿಗಳ ಹಕ್ಕುಗಳ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶಗಳನ್ನು ಪಾಲಿಸುವುದು ಜೈಲ್ ಆಡಳಿತದ ಕಡ್ಡಾಯ ಕರ್ತವ್ಯವಾಗಿದೆ.