ದರ್ಶನ್‌ಗೆ ಬಾರೀ ಹಿನ್ನಡೆ.. ಇನ್ನೂ ಸಿಗದ ಬೆಡ್, ದಿಂಬು!

Untitled design (1)

ಹಗಲಿನ ದರ್ಶನ ಇಲ್ಲದೆ ಕ್ವಾರಂಟೈನ್ ಸೆಲ್‌‌ನಲ್ಲಿ ಬಂಧಿಯಾಗಿರೋ ನಟ ದರ್ಶನ್‌‌ಗೆ ಕೋರ್ಟ್‌ನಲ್ಲಿ ಹಿನ್ನಡೆಯೇ ಆಗ್ತಿದೆ. ಅವರ ಸದ್ಯದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನ್ನುವಂತಾಗಿದೆ. ಆದ್ರೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ದಚ್ಚು ಸಹೋದರ ದಿನಕರ್ ಮಾತ್ರ ಮೌನಕ್ಕೆ ಜಾರಿದ್ದಾರೆ. ಇಷ್ಟಕ್ಕೂ ಡಿಬಾಸ್ ಅಳಿಯ ಹೇಳಿದ್ದೇನು ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.

ಒಂದ್ಕಡೆ ದರ್ಶನ್ ಅನುಪಸ್ಥಿತಿಯಲ್ಲಿ ಡೆವಿಲ್ ಸಿನಿಮಾದ ರಿಲೀಸ್‌ಗೆ ಯೋಜನೆಗಳು ನಡೆಯುತ್ತಿವೆ. ಮತ್ತೊಂದ್ಕಡೆ ಮೂಲಭೂತ ಹಕ್ಕುಗಳಿಗಾಗಿ ದರ್ಶನ್ ಜೈಲಲ್ಲಿ ಇದ್ದುಕೊಂಡೇ ಕೋರ್ಟ್‌ ಮೊರೆ ಹೋಗಿದ್ದಾರೆ. ಎಕ್ಸ್‌‌ಟ್ರಾ ಬೆಡ್ಡು, ತಲೆದಿಂಬು ಬೇಕು. ಕ್ವಾರಂಟೈನ್ ಸೆಲ್‌ನಿಂದ ಹೊರಬಂದು ಬಿಸಿಲಿನ ದರ್ಶನ ಪಡೆಯಬೇಕು. ಇತರೇ ಕೈದಿಗಳಂತೆ ಓಡಾಡಬೇಕು ಅಂತ ದರ್ಶನ್ ಗೋಗರೆಯುತ್ತಿದ್ದಾರೆ.

ದರ್ಶನ್‌ಗೆ ಬಾರೀ ಹಿನ್ನಡೆ.. ಇನ್ನೂ ಸಿಗದ ಬೆಡ್, ದಿಂಬು!

ಮೌನಕ್ಕೆ ಜಾರಿದ ದಿನಕರ್.. ದಚ್ಚು ಅಳಿಯ ಹೇಳಿದ್ದೇನು..?

ಕೋರ್ಟ್‌ನಲ್ಲಿ ಕೂಡ ದರ್ಶನ್‌ಗೆ ಬಾರೀ ಹಿನ್ನಡೆಯಾಗಿದ್ದು, ಇನ್ನೂ ಸಿಕ್ಕಿಲ್ಲ ಬೆಡ್ಡು, ದಿಂಬು ಅನ್ನೋದೇ ಅಚ್ಚರಿ. ಹೀಗೆ ಬದುಕೋಕೆ ಆಗ್ತಿಲ್ಲ. ಅದರ ಬದಲಿಗೆ ಒಂದು ತೊಟ್ಟು ವಿಷ ಕೊಡಿಸಿ ಸ್ವಾಮಿ ಅಂತ ನ್ಯಾಯಾಧೀಶರ ಬಳಿ, ಬಹಳ ಹತಾಶನಾಗಿ ದರ್ಶನ್ ಕೇಳಿಕೊಂಡಿರೋದುಂಟು. ಸದ್ಯ ಈ ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ದಿನಕರ್ ತೂಗುದೀಪ ಮೌನಕ್ಕೆ ಜಾರಿದ್ದಾರೆ. ಮಾಧ್ಯಮಗಳ ಮುಂದೆ ಬಂದರಾದ್ರೂ ಆ ಬಗ್ಗೆ ಏನೂ ಮಾತಾಡದೆ ಎಸ್ಕೇಪ್ ಆಗಿದ್ದಾರೆ.

 

ದರ್ಶನ್ ಅಳಿಯನ ಗಾರ್ಡನ್ ಚಿತ್ರಕ್ಕೆ ದಿನಕರ್ ಕ್ಲಾಪ್

ಕೋಲಾರ ಡೈರೆಕ್ಟರ್ ಆರ್ಯ ಮಹೇಶ್ ಆ್ಯಕ್ಷನ್ ಕಟ್

ಆದ್ರೆ ದರ್ಶನ್ ಅಳಿಯ ಟಕ್ಕರ್ ಖ್ಯಾತಿಯ ಮನೋಜ್ ಮಾತ್ರ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಂಬರೀಶ, ಚಕ್ರವರ್ತಿ ಚಿತ್ರಗಳಲ್ಲಿ ದರ್ಶನ್ ಜೊತೆ ಕೆಲಸ ಮಾಡಿರೋ ಮನೋಜ್, ದರ್ಶನ್ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ ಒಳ್ಳೆಯದು ಆಗಬೇಕು ಅಂತ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಯೆಸ್.. ಇದು ಗಾರ್ಡನ್ ಚಿತ್ರದ ಮುಹೂರ್ತ ಸಮಾರಂಭ. ಈ ಹಿಂದೆ ಕೋಲಾರ ಅನ್ನೋ ಸಿನಿಮಾ ಮಾಡಿದ್ದ ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯಲ್ಲಿ ಈ ಚಿತ್ರ ಸೆಟ್ಟೇರಿದೆ. ನೋಡೋಕೆ ದರ್ಶನ್ ತರಹಾನೇ ಇರೋ ಮನೋಜ್‌ಗೆ ಸಾಕಷ್ಟು ಮಂದಿ ಜೂನಿಯರ್ ದರ್ಶನ್ ಅಂತಲೂ ಕರೆಯೋದುಂಟು. ಗಾರ್ಡನ್ ಸಿನಿಮಾಗೆ ದರ್ಶನ್ ಅನುಪಸ್ಥಿತಿಯಲ್ಲಿ, ದಿನಕರ್ ತೂಗುದೀಪ ಬಂದು ಕ್ಲಾಪ್ ಮಾಡಿ, ಶುಭ ಹಾರೈಸಿದ್ದಾರೆ.

ಈ ಗಾರ್ಡನ್ ಸಿನಿಮಾ, ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನಲಾಗಿದೆ. ಮನೋಜ್ ನಮ್ಮ ಮನೆ ಹುಡುಗ. ಸಿನಿಮಾ ಬಗ್ಗೆ ಅಪಾರವಾದ ಒಲವು ಇಟ್ಟುಕೊಂಡಿದ್ದಾನೆ. ಈ ಚಿತ್ರದ ಎಳೆಯನ್ನು ಕೇಳಿದ್ದೀನಿ. ಮನೋಜ್‌ಗೆ ಹೇಳಿ ಮಾಡಿಸಿದಂತಹ ಪಾತ್ರವನ್ನು ನಿರ್ದೇಶಕ ಮಹೇಶ್ ರಚಿಸಿದ್ದಾರೆ ಅಂತ ದಿನಕರ್ ಹರಿಸಿದ್ರು.

ಈ ಚಿತ್ರದಲ್ಲಿ ಇಬ್ಬರು ಹುಡುಗಿಯರು ನಾಯಕಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅನು ಪ್ರೇಮಾ ಮತ್ತು ಸೋನಮ್ ರೈ ಇಬ್ಬರೂ ಮನೋಜ್‌ಗೆ ಜೊತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ರೆಗ್ಯುಲರ್ ಹೀರೋ ಹೀರೋಯಿನ್ ತರಹದ ಪಾತ್ರಗಳಿರೋದಿಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯ. ಒಳ್ಳೆಯ ಕಂಟೆಂಟ್ ಇಟ್ಕೊಂಡು ಸಮಾಜಕ್ಕೆ ಸಂದೇಶ ಸಾರುವಂತಹ ಸದಭಿರುಚಿಯ ಚಿತ್ರ ಮಾಡೋಕೆ ಮುಂದಾಗಿದೆ ಟೀಂ. M R ಸಿನಿಮಾಸ್ ಬ್ಯಾನರ್ ಮೂಲಕ ಜಿ ಮುನಿರಾಜು ನಿರ್ಮಿಸ್ತಿರೋ ಗಾರ್ಡನ್ ಚಿತ್ರ, ಇದೇ ತಿಂಗಳಾಂತ್ಯಕ್ಕೆ ಅಥವಾ ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿತ್ರೀಕರಣಕ್ಕೆ ತೆರಳಲಿದೆ.

 

 

 

Exit mobile version