ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್

ಪಟ್ಟೆ ತಲೆ ಹೆಬ್ಬಾತು ಪ್ರಕರಣ (34)

ಮಾಫಿ ಸಾಕ್ಷಿ ಪ್ರದೋಷ್ ನಟ ದರ್ಶನ್‌ಗೆ ಕಂಟಕವಾಗ್ತಿರೋ ಬೆನ್ನಲ್ಲೇ ಕಾನೂನು ಹೋರಾಟದಲ್ಲಿ ಒಂದು ಸಣ್ಣ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ ದಾಸ ದಚ್ಚು. ವಿಚಾರಣೆ ವೇಳೆ ಖುದ್ದು ಕೋರ್ಟ್‌ಗೆ ಹಾಜರಾಗಲು ಹೈ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಮಾನ್ಯವಾಗಿದೆ.

ಡಿಬಾಸ್‌‌ ದಚ್ಚುಗೆ ರಿಲೀಫ್.. ಜೈಲ್ to ಕೋರ್ಟ್ ವಿಹಾರ..!

ಕೋರ್ಟ್‌ಗೆ ಖುದ್ದು ಹಾಜರಾತಿಗೆ ಜೈ.. ಆದ್ರೆ ಕಂಡಿಷನ್ ಅಪ್ಲೈ

‘ಪ್ರತಿ ವಿಚಾರಣೆಗೂ ಬರೋ ಅವಶ್ಯಕತೆ ಇಲ್ಲ’- ಹೈ ಕೋರ್ಟ್

7 ಮುಖ್ಯ ಸಾಕ್ಷಿಗಳ ಕ್ರಾಸ್ ಎಕ್ಸಾಮಿನ್ ವೇಳೆ ಮಾತ್ರ ಹಾಜರು

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಡಿಬಾಸ್ ದರ್ಶನ್‌ ಸದ್ಯಕ್ಕಂತೂ ಹೊರಗೆ ಬರುವ ಯಾವುದೇ ಸುಳಿವುಗಳು ಸಿಗ್ತಿಲ್ಲ. ಕುಟುಂಬಸ್ಥರ ಜೊತೆ ದರ್ಶನ್ ಹಿತೈಷಿಗಳು, ಸ್ನೇಹಿತರು ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ಇದೊಂಥರಾ ಶಾಕಿಂಗ್ ನ್ಯೂಸ್. ಚಿತ್ರರಂಗಕ್ಕೆ ಒಂಥರಾ ತುಂಬಲಾರದ ನಷ್ಟವೇ ಸರಿ. ಆದ್ರೆ ಪ್ರಕರಣ ಕೋರ್ಟ್‌‌ನಲ್ಲಿ ಇರೋದ್ರಿಂದ ಯಾವಾಗ ಏನಾಗುತ್ತೆ ಅಂತ ಊಹಿಸೋಕೆ ಆಗದಂತಾಗಿದೆ. ಅದ್ರಲ್ಲೂ ಮಾಫಿ ಸಾಕ್ಷಿ ಹೇಳಲು ಆರೋಪಿ ಪ್ರದೋಷ್ ಸಿದ್ಧವಾಗಿದ್ದು, ಕೋರ್ಟ್ ಕೂಡ ಅದನ್ನ ಅಂಗೀಕರಿಸಿದೆ. ಸೋ ಅದೇನಾದ್ರೂ ಪ್ರೂವ್ ಆದಲ್ಲಿ ದಚ್ಚುಗೆ ಜೈಲೇ ಖಾಯಂ ನಿವಾಸ ಆಗಲಿದೆ.

ಇದರ ನಡುವೆ ಹೈ ಕೋರ್ಟ್‌‌ನಲ್ಲಿ ನಟ ದರ್ಶನ್‌ಗೆ ಒಂದು ಸಣ್ಣ ರಿಲ್ಯಾಕ್ಸ್ ಸಿಕ್ಕಂತಾಗಿದೆ. ಸೆಷನ್ಸ್ ಕೋರ್ಟ್‌‌ ನಲ್ಲಿ ನಡೆಯುತ್ತಿರೋ ಕೇಸ್ ಟ್ರಯಲ್ಸ್ ವೇಳೆ, ಕೋರ್ಟ್‌‌ಗೆ ಖುದ್ದು ಹಾಜರಾತಿಗಾಗಿ ಹೈ ಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿದ್ರು ದಾಸ ದರ್ಶನ್. ಈ ಕುರಿತು ವಾದ, ಪ್ರತಿವಾದಗಳನ್ನ ಆಲಿಸಿರೋ ನ್ಯಾಯಾಧೀಶರು. ವಿಚಾರಣೆ ವೇಳೆ ಜೈಲಿಂದ ಕೋರ್ಟ್‌‌ಗೆ ಬಿಗಿ ಬಂದೋಬಸ್ತ್ ಮೂಲಕ ಕರೆತರಲು ಅನುಮತಿ ನೀಡಿ ಆದೇಶ ನೀಡಿದ್ದಾರೆ. ಆದ್ರೆ ಅದಕ್ಕೆ ಕಂಡಿಷನ್ಸ್ ಅಪ್ಲೈ ಆಗ್ತಿದೆ. ದರ್ಶನ್ ವಿಚಾರಣೆ ಇದ್ದಾಗಲೆಲ್ಲಾ ಕೋರ್ಟ್‌ಗೆ ಖುದ್ದು ಹಾಜರಾಗಲು ಅವಕಾಶ ಇಲ್ಲ.

ಪ್ರಾಸಿಕ್ಯೂಷನ್ ಪರ SPP ಪ್ರಸನ್ನ ಕುಮಾರ್ ವಾದ ಮಂಡಿಸಿ, NIA ಪ್ರಕರಣಗಳ ಕೈದಿಗಳೂ ಇದನ್ನೇ ಕೇಳಿದರೆ ಕಷ್ಟ. ಸುಮಾರು 1616 ಕೇಸ್‌‌ಗಳ ಕೈದಿಗಳ ಟ್ರಯಲ್ಸ್ ನಡೆಯುತ್ತಿದೆ. ಇತರೇ ಆರೋಪಿಗಳೂ ಇದನ್ನೇ ಕೇಳಿದರೆ ಸಮಸ್ಯೆ. ಇ‌ ಮುಲಾಕತ್ ಸೌಲಭ್ಯದಡಿ ಆರೋಪಿಯೊಂದಿಗೆ ಸಂಭಾಷಣೆ ನಡೆಸಬಹುದು. ಆರೋಪಿಗಳ ಖುದ್ದು ಹಾಜರಿ ಬೇಕಿಲ್ಲವೆಂದಿದ್ದರು. ಹಾಗಾಗಿ ಹೈ ಕೋರ್ಟ್ ಬರೀ 7 ಮುಖ್ಯ ಸಾಕ್ಷಿಗಳ ವಿಚಾರಣೆಯ ಕ್ರಾಸ್ ಎಕ್ಸಾಮಿನೇಷನ್ ವೇಳೆ ಮಾತ್ರ ಹಾಜರಾತಿಗೆ ಅವಕಾಶ ನೀಡಿದೆ. ಉಳಿದ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಭಾಗಿಯಾಗಬೇಕಿದೆ.

ಪ್ರಾಸಿಕ್ಯೂಷನ್ 1 ವರ್ಷದಲ್ಲಿ 60 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಬೇಕು. 7 ಮುಖ್ಯ ಸಾಕ್ಷಿಗಳ ವಿಚಾರಣೆಯೂ ಇದರಲ್ಲಿ ಸೇರಿರಬೇಕು. ಮುಖ್ಯ ವಿಚಾರಣೆ ಬಳಿಕ ಕ್ರಾಸ್ ಎಗ್ಸಾಮಿನೇಷನ್‌‌‌ಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಬೇಕು. ಈ ವೇಳೆ ಸರ್ಕಾರ ಸೂಕ್ತ ಭದ್ರತೆ ಒದಗಿಸಿ ದರ್ಶನ್ ಕರೆತರಬೇಕು. ಅವಶ್ಯವಿದ್ದರೆ ಇನ್ ಕ್ಯಾಮೆರಾ ವಿಚಾರಣೆ ನಡೆಸಬೇಕು ಅಂತ ಆದೇಶಿಸಿದೆ. ಆದ್ರೆ ಈ ಆದೇಶವನ್ನು ಇತರೇ ಕೇಸ್‌‌ಗೆ ಮಾದರಿಯಾಗಿ ಪರಿಗಣಿಸಬಾರದು ಅಂತ ಹೈ ಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಪೀಠ ಆದೇಶಿಸಿದೆ. ಹಾಗಾಗಿ ಜೈಲಿನ ಪಂಜರದಿಂದ ಆಗಾಗ ಹೊರ ಬರಲು ನಟ ದರ್ಶನ್‌ಗೆ ಇದೊಂದು ಸಣ್ಣ ರಿಲೀಫ್ ಅಷ್ಟೇ.

 

 

Exit mobile version