ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!

ಹಣಕ್ಕಾಗಿ ಕೈ ಬಿಡೋ ಫ್ಯಾಮಿಲಿ ನಮ್ಮದಲ್ಲ ಎಂದ ಧ್ರುವ ಸರ್ಜಾ..!

Untitled design 2026 04 25T154942.729

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಸ್ಯಾಂಡಲ್‌ವುಡ್‌ನ ‘ಡಿ ಬಾಸ್’ ಮತ್ತು ‘ಆ್ಯಕ್ಷನ್ ಪ್ರಿನ್ಸ್’ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಜಗಜ್ಜಾಹೀರು. ಒಂದಾನೊಂದು ಕಾಲದಲ್ಲಿ ಅಣ್ಣ-ತಮ್ಮನಂತಿದ್ದ ದರ್ಶನ್ ಮತ್ತು ಧ್ರುವ ಸರ್ಜಾ ಈಗ ಮುಖಾಮುಖಿಯಾದ್ರೂ ಮಾತನಾಡಲ್ಲ. ಈ ಮುನಿಸಿಗೆ ‘ಪ್ರೇಮ ಬರಹ’ ಸಿನಿಮಾದ ಹಣಕಾಸಿನ ವ್ಯವಹಾರವೇ ಕಾರಣ ಅನ್ನೋ ಗಾಸಿಪ್ ದಟ್ಟವಾಗಿತ್ತು. ಆದ್ರೆ, ಈ ಎಲ್ಲಾ ಚರ್ಚೆಗಳಿಗೆ  ಧ್ರುವ ಈಗ ‘ಗ್ಯಾರಂಟಿ ನ್ಯೂಸ್’ ಮೂಲಕವೇ ಸ್ಪೋಟಕ ಕ್ಲಾರಿಟಿ ಕೊಟ್ಟಿದ್ದಾರೆ. ಹಾಗಾದ್ರೆ ದರ್ಶನ್-ಧ್ರುವ ನಡುವಿನ ಅಸಲಿ ಮ್ಯಾಟರ್ ಏನು? ಸರ್ಜಾ ಫ್ಯಾಮಿಲಿ ದೂರವಾಗಿದ್ದು ಯಾಕೆ? ಅನ್ನೋದ್ರ ಫುಲ್‌ ಡಿಟೇಲ್ಸ್‌ ಇಲ್ಲಿದೆ ನೋಡಿ..

ಸ್ಯಾಂಡಲ್‌ವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದ್ರೆ ಅದು ದರ್ಶನ್ ಮತ್ತು ಧ್ರುವ ಸರ್ಜಾ ನಡುವಿನ ವೈಮನಸ್ಸು. ಒಂದು ಕಾಲದಲ್ಲಿ ದರ್ಶನ್ ಅವರನ್ನ ಕಂಡರೆ ಧ್ರುವ ಅವರಿಗೆ ಎಲ್ಲಿಲ್ಲದ ಗೌರವವಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆ ಮಾತುಕತೆ ಬಂದ್ ಆಗಿದೆ. ಕಾವೇರಿ ಪ್ರತಿಭಟನೆಯಂತಹ ದೊಡ್ಡ ವೇದಿಕೆಯಲ್ಲೂ ಪರಸ್ಪರ ಹಾಯ್ ಎನ್ನದ ಮಟ್ಟಿಗೆ ಈ ಇಬ್ಬರು ನಟರು ದೂರವಾಗಿದ್ದು ಸಿನಿರಂಗದಲ್ಲಿ ಕುತೂಹಲ ಮೂಡಿಸಿತ್ತು. ಈ ಮುನಿಸಿಗೆ ಪ್ರೇಮ ಬರಹ ಚಿತ್ರದ ಡೇಟ್ಸ್ ಮತ್ತು ಹಣದ ವಿಚಾರವೇ ಮೂಲ ಕಾರಣ ಎಂಬ ಮಾತುಗಳು ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿತ್ತು.

​ಈ ವಿವಾದಕ್ಕೆ ಈಗ ನಾಪತ್ತೆಯಾಗಿದ್ದ  ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಎಂಟ್ರಿ ಕೊಟ್ಟಿದ್ದಾರೆ. ಏಳು ವರ್ಷಗಳ ಸುದೀರ್ಘ ವನವಾಸದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಲ್ಲಿಕಾರ್ಜುನ, ದರ್ಶನ್ ಮತ್ತು ಧ್ರುವ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. “ನಾನು ಊರು ಬಿಡುವ ಮೊದಲು ಅವರಿಬ್ಬರೂ ಅಣ್ಣ-ತಮ್ಮಂದಿರಂತೆ ಚೆನ್ನಾಗಿದ್ದರು. ‘ಪ್ರೇಮ ಬರಹ’ ಸಿನಿಮಾ ದರ್ಶನ್ ಸರ್ ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ, ಆದರೆ ಹಣಕಾಸಿನ ವಿಚಾರದಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾದವು” ಎಂದಿದ್ದಾರೆ ಮಲ್ಲಿಕಾರ್ಜುನ್.

ಮಲ್ಲಿಕಾರ್ಜುನ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇತ್ತ ‘ಕೆಡಿ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ಧ್ರುವ ಸರ್ಜಾ ಈ ಬಗ್ಗೆ ಅಂತಿಮ ಕ್ಲಾರಿಟಿ ನೀಡಿದ್ದಾರೆ. ‘ಗ್ಯಾರಂಟಿ ನ್ಯೂಸ್’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಧ್ರುವ, ಈ ವಿವಾದದ ಬಗ್ಗೆ ನೇರವಾಗಿಯೇ ಉತ್ತರಿಸಿದ್ದಾರೆ. ದುಡ್ಡಿಗೋಸ್ಕರ ಸರ್ಜಾ ಫ್ಯಾಮಿಲಿ ಅಥವಾ ನಾನು ದರ್ಶನ್ ಅವರಿಂದ ದೂರವಾಗಿಲ್ಲ. ದುಡ್ಡಿನಿಂದಾಗಿ ನಮ್ಮ ನಡುವೆ ಬಿರುಕು ಬಂತು ಅನ್ನೋದು ನೂರಕ್ಕೆ ನೂರರಷ್ಟು ಸುಳ್ಳು ಎಂದು ಹೇಳುವ ಮೂಲಕ ಹಣದ ವಿಚಾರವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಧ್ರುವ ಸರ್ಜಾ ಅವರ ಈ ಹೇಳಿಕೆ ಈಗ ಹೊಸ ಸಂಚಲನ ಮೂಡಿಸಿದೆ. ಹಣದ ವಿಚಾರವಲ್ಲದಿದ್ದರೆ, ಅಸಲಿಗೆ ಈ ಇಬ್ಬರು ಘಟಾನುಘಟಿ ನಟರ ನಡುವೆ ಮನಸ್ತಾಪ ಉಂಟಾಗಲು ಕಾರಣವಾದ ಆ ‘ವೈಯಕ್ತಿಕ’ ವಿಚಾರವಾದರೂ ಏನು? ಅನ್ನೋ ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿದೆ. “ಕೋರ್ಟ್‌ನಲ್ಲಿ ಕೇಸ್ ಇರೋದ್ರಿಂದ ನಾನು ಜಾಸ್ತಿ ಮಾತನಾಡಲು ಸಾಧ್ಯವಿಲ್ಲ” ಎಂದು ಧ್ರುವ ಹೇಳಿರುವುದು ಈ ವಿವಾದದ ಗಂಭೀರತೆಯನ್ನು ಎತ್ತಿ ತೋರಿಸುತ್ತಿದೆ. ಮನಸ್ತಾಪ ಇರುವುದು ನಿಜ, ಆದರೆ ಅದಕ್ಕೆ ಕಾರಣ ಹಣವಲ್ಲ ಎಂದು ಧ್ರುವ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.

ಹಿಂದೆ ದರ್ಶನ್ ಬಗ್ಗೆ ಕೇಳಿದಾಗ ನಾನು ದರ್ಶನ್ ಅವರಿಗೆ 3 ಪ್ರಶ್ನೆ ಕೇಳಬೇಕು, ಡೈರೆಕ್ಟ್ ಆಗಿ ಮಾತಾಡಬೇಕು ಎಂದು ಧ್ರುವ ಹೇಳಿದ್ದು ಈಗ ಮತ್ತೆ ನೆನಪಾಗುತ್ತಿದೆ. ಮಲ್ಲಿಕಾರ್ಜುನ ಬಂದು ಹೋದ ಮೇಲೆ ಈ ಪ್ರಕರಣಕ್ಕೆ ಜೀವ ಬಂದಂತಾಗಿದ್ದು, ಧ್ರುವ ಅವರ ಈ ಲೇಟೆಸ್ಟ್ ಸ್ಟೇಟ್‌ಮೆಂಟ್ ದರ್ಶನ್ ಅಭಿಮಾನಿಗಳಲ್ಲೂ ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ ಹಣಕ್ಕಾಗಿ ಈ ಇಬ್ಬರ ನಡುವೆ ಮಾತು ಕಥೆ ನಿಂತಿಲ್ಲ ಅನ್ನೋದು ಪಕ್ಕಾ ಆಗಿದೆ, ಆದರೆ ಆ ರಹಸ್ಯಮಯ  ಪ್ರಶ್ನೆಗಳು ಏನು ಅನ್ನೋದು ಮಾತ್ರ ಇಂದಿಗೂ ಸ್ಯಾಂಡಲ್‌ವುಡ್‌ನ ದೊಡ್ಡ ಮಿಸ್ಟರಿಯಾಗಿಯೇ ಉಳಿದಿದೆ.

 

Exit mobile version