ದಿ ವೆಯ್ಟ್ ಈಸ್ ಓವರ್.. ದರ್ಶನ್ ಸದ್ಯ ನಮ್ಮೊಟ್ಟಿಗೆ ಹೊರಗೆ ಇಲ್ಲ ಅನ್ನೋ ಕೊರಗಿನ ನಡುವೆ ಕೂಡ ಕನ್ನಡ ಚಿತ್ರಪ್ರೇಮಿಗಳಿಗೆ ಡಬಲ್ ಡೋಸ್ ನೀಡಿದೆ ಟೀಂ ಡೆವಿಲ್. ಯೆಸ್.. ಡೆವಿಲ್ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಸ್ಟೈಲಿಶ್ ಲುಕ್ಸ್‌ನಲ್ಲಿ ಸಖತ್ ಕಿಕ್ ಕೊಡ್ತಿದ್ದಾರೆ ಡಿಬಾಸ್. ಇಷ್ಟಕ್ಕೂ ಆ ಸಾಂಗ್ ಹೇಗಿದೆ..? ಸಿನಿಮಾ ಯಾವಾಗ ರಿಲೀಸ್ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
- 500 ಡ್ಯಾನ್ಸರ್ಸ್.. 5 ದಿನ.. ಡೆವಿಲ್ ದಚ್ಚು ಡ್ಯಾಶಿಂಗ್ ಲುಕ್ಸ್
- ಇದ್ರೆ ನೆಮ್ದಿಯಾಗ್ ಇರ್ಬೇಕ್ ಅಂದಿದ್ಯಾಕೆ ಗೊತ್ತಾ ಡಿಬಾಸ್?
- ಅಜನೀಶ್ ಟ್ಯೂನ್, ಅನಿರುದ್ದ್ ಶಾಸ್ತ್ರಿ ಲೈನ್, ದೀಪಕ್ ಕಂಠ
- ಒಂದು ಹಾಡಿಗೆ ಒಂದೂವರೆ ಕೋಟಿ.. ಸಿಕ್ಕಾಪಟ್ಟೆ ಲ್ಯಾವಿಶ್..!
ಯೆಸ್.. ಇದು ಡೆವಿಲ್ ಸಿನಿಮಾದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಾಂಗ್ ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್‌ನ ಲಿರಿಕಲ್ ವಿಡಿಯೋ. ದಿ ವೆಯ್ಟ್ ಈಸ್ ಓವರ್. ಆಗಸ್ಟ್ 15ಕ್ಕೆ ಲಾಂಚ್ ಆಗಬೇಕಿದ್ದ ಈ ಸಾಂಗ್, ಕೊಂಚ ಲೇಟ್ ಆದ್ರೂ ಲೇಟೆಸ್ಟ್ ಆಗಿ ಗ್ರ್ಯಾಂಡ್ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ಸುಲ್ತಾನ ಡಿಬಾಸ್ ದರ್ಶನ್ ಹೊರಗೆ ಇಲ್ಲ ಅನ್ನೋ ಕೊರಗು ಇದ್ದೇ ಇರುತ್ತೆ. ಆದ್ರೆ ಅವ್ರು ಸಖತ್ ಸ್ಟೈಲಿಶ್ ಲುಕ್ಸ್‌ನಿಂದ ಕಣ್ಣು ಕುಕ್ಕುವಂತೆ ಕಾಣ್ತಿರೋದು ಹೈಲೈಟ್.
ಇದ್ರೆ ನೆಮ್ದಿಯಾಗ್ ಇರ್ಬೇಕ್ ಅನ್ನೋದು ಪತ್ನಿಗೆ ಕುಡಿದ ಅಮಲಿನಲ್ಲಿ ದಚ್ಚು ಬೈದ ಬೈಗುಳದ ಪದಪುಂಜದಿಂದ ಹುಟ್ಟಿದ ಸಾಲಾಗಿದೆ. ಆದ್ರೆ ಈ ಹಾಡನ್ನ ಅನೌನ್ಸ್ ಮಾಡಿದಾಗ ಎಷ್ಟು ಮಂದಿ ಪಾಸಿಟಿವ್ ಆಗಿ ತಗೊಂಡ್ರೋ, ಅದಕ್ಕಿಂತ ಜಾಸ್ತಿ ಮಂದಿ ಇಂಥದ್ದೊಂದು ಸಾಂಗ್ ಬೇಕಿತ್ತಾ ಅಂದಿದ್ದೇ ಹೆಚ್ಚು. ಆದ್ರೀಗ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಗಿವೆ. ಸಾಂಗ್ ಸೂಪರ್ ಆಗಿದೆ. ಕಣ್ಮನ ತಣಿಸುತ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಡೆವಿಲ್ ಫಸ್ಟ್ ಸಾಂಗ್ ಇದಾಗಿದ್ದು, ಗಾಯಕ ಅನಿರುದ್ದ್ ಶಾಸ್ತ್ರಿ ಈ ಹಾಡಿಗೆ ಸಾಹಿತ್ಯ ಪೋಣಿಸಿದ್ದಾರೆ. ಇನ್ನು ದೀಪಕ್ ಬ್ಲೂ ಗಾಯನದಲ್ಲಿ ಅಷ್ಟೇ ಜೋಶ್‌ಫುಲ್ ಆಗಿ ಮೂಡಿಬಂದಿದೆ. ಅಂದಹಾಗೆ ರಾಬರ್ಟ್ ಸಿನಿಮಾ ಖ್ಯಾತಿಯ ಸಂತು ಮಾಸ್ಟರ್ ಕೊರಿಯೋಗ್ರಾಫಿ ಇರೋ ಈ ಹಾಡು ಹೀರೋ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಸಿಕ್ಕಾಪಟ್ಟೆ ಕಲರ್‌ಫುಲ್ ಹಾಗೂ ರಿಚ್ ಆಗಿ ತಯಾರಾಗಿದೆ.
ನೆಲಮಂಗಲದ ಬಳಿ ಮೋಹನ್ ಬಿ ಕೆರೆ ಕಲಾಕುಂಚದಲ್ಲಿ ತಯಾರಾದ ಬೃಹತ್ ಹಾಗೂ ವ್ಹಾವ್ ಫೀಲ್ ಕೊಡೋ ಸೆಟ್‌ಗಳಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್ ಚಿತ್ರಿಸಲಾಗಿದೆ. ಸುಮಾರು 500ಕ್ಕೂ ಅಧಿಕ ಡ್ಯಾನ್ಸರ್ಸ್ ಜೊತೆ ನಾಲ್ಕೈದು ದಿನಗಳ ಕಾಲ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್ ಇದನ್ನ ಸಿದ್ದಗೊಳಿಸಿರೋದು ಇಂಟರೆಸ್ಟಿಂಗ್. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋದು ಡಿಬಾಸ್ ದರ್ಶನ್. ಅವ್ರನ್ನ ಸಖತ್ ಸ್ಟೈಲಿಶ್ ಆಗಿ ತೋರಿಸಿರೋ ದಚ್ಚು ಫೇವರಿಟ್ ಸಿನಿಮಾಟೋಗ್ರಾಫರ್ ಸುಧಾಕರ್ ಕ್ಯಾಮೆರಾ ಕೈಚಳಕ ಮೆಚ್ಚುವಂತಿದೆ.
ನಿರ್ದೇಶಕ ಪ್ರಕಾಶ್ ವೀರ್ ಪತ್ನಿ ಅಶ್ವಿನಿ ಅವರೇ ದರ್ಶನ್‌ಗೆ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು, ಸಖತ್ ಮುದ್ದಾಗಿ ಕಾಣ್ತಿದ್ದಾರೆ ಡೆವಿಲ್ ಹೀರೋ. ಅಂದಹಾಗೆ ಇದು ಡೆವಿಲ್ ಚಿತ್ರದ ದರ್ಶನ್ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ಮೊದಲಿನಿಂದ ಹಾಡಿನ ಕೊನೆಯವರೆಗೂ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರಂತೆ ದಚ್ಚು. ಸೆಟ್‌ಗೆ ಬಂದು ಆನ್ ಸ್ಪಾಟ್‌ನಲ್ಲೇ ಪ್ರಾಕ್ಟೀಸ್ ಮಾಡ್ತಿದ್ದ ದರ್ಶನ್, ಬಹಳ ದಿನಗಳ ನಂತ್ರ ಅದ್ಭುತವಾಗಿ ಕುಣಿದಿದ್ದಾರೆ. ಬೆನ್ನು ನೋವಿನ ಹೊರತಾಗಿಯೂ ಕೂಡ ಇಷ್ಟು ಜೋಶ್‌ನಿಂದ ಕುಣಿದಿರೋ ದಾಸ, ಒಮ್ಮೆ ನೋವಿನಿಂದ ಕೆಳಗೆ ಬಿದ್ದಿದ್ದೂ ಉಂಟಂತೆ.
ಫ್ಯಾನ್ಸ್‌ಗೆ ಈ ಸಾಂಗ್ ಥಿಯೇಟರ್‌ನಲ್ಲಿ ಹಬ್ಬದ ಫೀಲ್ ಕೊಡಲಿದ್ದು, ಶಿಳ್ಳೆ ಚಪ್ಪಾಳೆಯಿಂದ ಹುಚ್ಚೆದ್ದು ಕುಣಿಯೋದು ಗ್ಯಾರಂಟಿ. ಸುಮಾರು ಒಂದೂವರೆ ಕೋಟಿಯಷ್ಟು ಹಣ ಖರ್ಚು ಮಾಡಿ ಈ ಹಾಡನ್ನ ಸಿದ್ಧಗೊಳಿಸಿರೋ ನಿರ್ಮಾಪಕರ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತೆ. ಇನ್ನೂ ಈ ಹಿಂದೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಹಾಗೂ ಬಾ ಬಾ ಬಾ ನಾ ರೆಡಿ ಸಾಂಗ್ ಕೊರಿಯೋಗ್ರಾಫಿ ಮಾಡಿದ್ದ ಸಂತು ಮಾಸ್ಟರ್, ಕ್ರಾಂತಿ ಚಿತ್ರದಲ್ಲೂ ದಚ್ಚು ಜೊತೆ ಕೆಲಸ ಮಾಡಿದ್ರು. ಇಲ್ಲಿ ಇದೊಂದೇ ಸಾಂಗ್ ಅಲ್ಲ, ಇನ್ನೂ ಮೂರು ಸಾಂಗ್ಸ್‌ಗೆ ಸ್ಟೆಪ್ಸ್ ಹಾಕಿಸಿದ್ದಾರೆ ಸಂತು.
ಹೌದು.. ಡೆವಿಲ್ ಸಿನಿಮಾ ಇಲ್ಲಿಯವರೆಗೂ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗ್ತಿತ್ತು. ಆದ್ರೀಗ ಸಾಂಗ್ ಜೊತೆ ರಿಲೀಸ್ ಡೇಟ್ ಕೂಡ ಲಾಕ್ ಮಾಡಿದೆ ಚಿತ್ರತಂಡ. ಇದೇ ಡಿಸೆಂಬರ್ 12ರಂದು ತಲೈವಾ ರಜನೀಕಾಂತ್ ಬರ್ತ್ ಡೇ ಪ್ರಯುಕ್ತ ಬೆಳ್ಳಿತೆರೆ ಬೆಳಗಲಿದೆ. ಅಂದಹಾಗೆ ಕಾಟೇರ ಸಿನಿಮಾ ಕೂಡ ಡಿಸೆಂಬರ್ 29ಕ್ಕೆ ಬಿಡುಗಡೆಗೊಂಡಿತ್ತು. ಡಿಸೆಂಬರ್ ಒಂಥರಾ ಚಿತ್ರರಂಗದ ಪಾಲಿಗೆ ಲಕ್ಕಿ ಮಂಥ್ ಆಗಿದ್ದು, ಡೆವಿಲ್ ನಿರ್ಮಾಪಕರಿಗೂ ವರದಾನವಾಗುತ್ತಾ ಅನ್ನೋದು ನಿರೀಕ್ಷಿಸಬೇಕಿದೆ.
ಅಂದಹಾಗೆ ಡಿಸೆಂಬರ್ 25ಕ್ಕೆ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಮಲ್ಟಿ ಸ್ಟಾರರ್ 45 ಸಿನಿಮಾ ರಿಲೀಸ್ ಆಗ್ತಿದೆ. ಅದಕ್ಕೂ ಎರಡು ವಾರಗಳ ಮುನ್ನ ಡೆವಿಲ್ ತೆರೆಗೆ ಬರ್ತಿದ್ದು, ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಕ್ಲ್ಯಾಶ್ ಕೂಡ ತಪ್ಪಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್