ದುಬೈನಲ್ಲಿ ಮಲಯಾಳಂ ಸಿಂಗರ್ ಬಾಯಲ್ಲಿ ಡಿಬಾಸ್ ಸಾಂಗ್

7ವಾರದಲ್ಲಿ 85ಕೋಟಿ.. ಥಿಯೇಟರ್‌‌ನಲ್ಲಿ ನಿಲ್ಲದ ಡೆವಿಲ್ ಆಟ

BeFunky collage 2026 01 29T143946.174

ಡಿಬಾಸ್ ದರ್ಶನ್ ಒಳಗಿರಲಿ ಅಥ್ವಾ ಹೊರಗಿರಲಿ..ಅದು ಬರೀ ಹೆಸರಲ್ಲ..ಒಂಥರಾ ಬ್ರ್ಯಾಂಡ್. ಅವ್ರ ಕ್ರೇಜ್ ಮಾತ್ರ ಎಂದಿಗೂ ಕಮ್ಮಿ ಆಗಿಲ್ಲ. ಅದಕ್ಕೆ ಡೆವಿಲ್ ಸಿನಿಮಾ ಹಾಫ್ ಸೆಂಚುರಿ ಬಾರಿಸಿರೋದೇ ಸಾಕ್ಷಿ. ಅಷ್ಟೇ ಅಲ್ಲ, ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 85 ಕೋಟಿ ಗಳಿಸೋ ಮೂಲಕ ಯಶಸ್ವಿ ನೂರು ಕೋಟಿ ಕ್ಲಬ್‌ನತ್ತ ಮುನ್ನುಗ್ಗಿದೆ. ಇದರೊಟ್ಟಿಗೆ ದುಬೈ ಲೈವ್ ಕಾನ್ಸರ್ಟ್‌ನಲ್ಲಿ ದಚ್ಚು ಸಾಂಗ್ ಹಾಡಿದ ಪರಭಾಷಾ ಸಿಂಗರ್‌‌ ಝಲಕ್ ಇಲ್ಲಿದೆ ನೋಡಿ.

ಡೆವಿಲ್..ಹೀರೋ ಆಗೋ ವಿಲನ್ ಎರಡೂ ಶೇಡ್‌‌ಗಳಿರೋ ಡಿಬಾಸ್ ದರ್ಶನ್ ನಟನೆಯ ಸಿನಿಮಾ. ಇದು ಡಿಸೆಂಬರ್ 11ಕ್ಕೆ ತೆರೆಕಂಡ ಚಿತ್ರವಾದ್ರೂ, ಓಟಿಟಿಗೆ ಈಗಾಗ್ಲೇ ಎಂಟ್ರಿ ಕೊಟ್ಟಿದ್ದರೂ ಸಹ ಇಂದಿಗೂ ಥಿಯೇಟರ್‌‌ಗಳಲ್ಲಿ ಡಿಮ್ಯಾಂಡ್ ಉಳಿಸಿಕೊಂಡಿರೋದು ಖುಷಿಯ ವಿಚಾರ. ಒಬ್ಬ ಸೂಪರ್ ಸ್ಟಾರ್ ಹಾಗೂ ಆತನ ಚಿತ್ರಕ್ಕಿರೋ ಮಹತ್ವ ಅಂಥದ್ದು. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸಿರೋ ಡೆವಿಲ್ ಸದ್ಯ ಯಶಸ್ವಿ 50ದಿನ ಕಂಪ್ಲೀಟ್ ಮಾಡೋ ಮೂಲಕ ಭರ್ಜರಿ ಹಾಪ್ ಸೆಂಚುರಿ ಬಾರಿಸಿದೆ.

ದುಬೈನಲ್ಲಿ ಮಲಯಾಳಂ ಸಿಂಗರ್ ಬಾಯಲ್ಲಿ ಡಿಬಾಸ್ ಸಾಂಗ್

7ವಾರದಲ್ಲಿ 85ಕೋಟಿ.. ಥಿಯೇಟರ್‌‌ನಲ್ಲಿ ನಿಲ್ಲದ ಡೆವಿಲ್ ಆಟ

ಅಷ್ಟೇ ಅಲ್ಲ, ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 85 ಕೋಟಿಗೂ ಅಧಿಕ ರೂಪಾಯಿಗಳನ್ನ ಗಳಿಸೋ ಮೂಲಕ ಹಂಡ್ರೆಡ್ ಕ್ರೋರ್ ಕ್ಲಬ್ ಸೇರುವ ಮುನ್ಸೂಚನೆ ಕೂಡ ನೀಡಿದೆ. ಇದೇ ಮೊದಲ ಬಾರಿಗೆ ತುಂಬಾ ಪ್ರಯೋಗಾತ್ಮಕ ಪಾತ್ರ ಮಾಡಿರೋ ಚಾಲೆಂಜಿಂಗ್ ಸ್ಟಾರ್, ತಮ್ಮ ಸ್ಟಾರ್‌‌ಡಮ್‌ನಿಂದ ಫ್ಯಾನ್ಸ್ ಜೊತೆ ಚಿತ್ರಪ್ರೇಮಿಗಳಿಗೂ ಥ್ರಿಲ್ ನೀಡಿರೋದು ಇಂಟರೆಸ್ಟಿಂಗ್.

ಡೆವಿಲ್‌ಗೆ 50ಡೇಸ್..OTT ಬಂದ್ರೂ ಥಿಯೇಟರ್‌‌ ಡಿಮ್ಯಾಂಡ್

ಒಳಗಿರಲಿ ಅಥ್ವಾ ಹೊರಗಿರಲಿ..ದಚ್ಚು ಕ್ರೇಜ್ ಕಾ ಬಾಪ್ ಗುರು..!

ಅಂದಹಾಗೆ ಡಿಬಾಸ್ ದರ್ಶನ್ ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಆದ್ರೆ ಅವರು ಒಳಗಿರಲಿ ಅಥ್ವಾ ಹೊರಗೇ ಇರಲಿ. ಕ್ರೇಜ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಯಾಕಂದ್ರೆ ಸದ್ಯ ಕರ್ನಾಟಕದಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ನಟ ದರ್ಶನ್ ಒಬ್ಬರೇ ಅನ್ನೋದನ್ನ ವಿಶೇಷವಾಗಿ ಹೇಳಬೇಕಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಡೆವಿಲ್ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆದ ಬಹುಭಾಷಾ ಚಿತ್ರವಲ್ಲ. ಕನ್ನಡದಲ್ಲೇ ಎಲ್ಲೆಡೆ ತೆರೆಕಂಡು ರಂಜಿಸ್ತಿರೋ ಸಿನಿಮಾ.

ಇನ್ನೂ ದುಬೈನ ಮ್ಯೂಸಿಕಲ್ ಲೈವ್ ಕಾನ್ಸರ್ಟ್ ಒಂದರಲ್ಲಿ ದರ್ಶನ್ ಹಾಡೊಂದನ್ನ ಮಲಯಾಳಂ ಗಾಯಕ ಹಾಡುವ ಮೂಲಕ ಅಲ್ಲಿರೋ ದಚ್ಚು ಫ್ಯಾನ್ಸ್‌ ದಿಲ್ ದೋಚಿದ್ದಾರೆ. ಸಖತ್ ಆಗವ್ಳೆ.. ಸುಮ್ನೆ ನಗ್ತಾಳೆ ಅನ್ನೋ ಪೊರ್ಕಿ ಚಿತ್ರದ ಹಾಡು ಆ ದೊಡ್ಡ ವೇದಿಕೆಯಲ್ಲಿ ಮಾರ್ದನಿಸಿದೆ. ಈ ಮೂಲಕ ದೇಶ ವಿದೇಶಗಳಲ್ಲೂ ಡಿಬಾಸ್‌‌ಗಿರೋ ಕ್ರೇಜ್ ಎಂಥದ್ದು ಅನ್ನೋದಕ್ಕೆ ಇದು ಜ್ವಲಂತ ಸಾಕ್ಷಿಯಾಗಿದೆ.

 

 

 

Exit mobile version