ಡೆವಿಲ್ ಪ್ರಮೋಷನ್ಸ್ ಸ್ಟಾರ್ಟ್‌.. ಡಿ ಬಾಸ್ ಫ್ಯಾನ್ಸ್‌‌ಗೆ ಹಬ್ಬ

ಜು-19ಕ್ಕೆ ಡೆವಿಲ್ ಮೋಷನ್ ಪೋಸ್ಟರ್.. ಡಿ ನ್ಯೂ ಇನ್ನಿಂಗ್ಸ್

0 (2)

ಕತ್ತಲಾದ ಮೇಲೆ ಬೆಳಕು ಹರಿಯಲೇಬೇಕು. ಅದು ಪ್ರಕೃತಿಯ ನಿಯಮ. ಅದ್ರಂತೆ ಒಂದು ಕೆಟ್ಟ ಹಂತವನ್ನು ದಾಟಿ, ಒಳ್ಳೆಯ ದಿನಗಳತ್ತ ಹೆಜ್ಜೆ ಹಾಕ್ತಿದ್ದಾರೆ ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್. ಡೆವಿಲ್ ಸಿನಿಮಾಗಾಗಿ ಫಾರಿನ್‌‌ಗೆ ತೆರಳಿರೋ ದಚ್ಚು, ವಾಪಸ್ ಬರೋದ್ರ ಒಳಗೆ ಅದ್ರ ಪ್ರಮೋಷನ್ಸ್‌ಗೂ ಮುಹೂರ್ತ ಇಟ್ಟಿದೆ ಟೀಂ. ಇದು ದಚ್ಚು ಫ್ಯಾನ್ಸ್‌ಗೆ ಹಬ್ಬದ ಫೀಲ್ ತಂದು ಕೊಡಲಿದೆ.

ಹೌದು, ರಾಬರ್ಟ್‌ ಹಾಗೂ ಕಾಟೇರ ಸಿನಿಮಾಗಳ ಬಳಿಕ ಡಿಬಾಸ್ ದರ್ಶನ್ ನಟನೆಯ ಡೆವಿಲ್ ಸಿನಿಮಾ ತೆರೆಗೆ ಬರೋಕೆ ಸಜ್ಜಾಗ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಂತಹ ನಟ ದರ್ಶನ್, ಇದೀಗ ಆ ಸಿನಿಮಾನ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ. ಸದ್ಯ ಥಾಯ್ಲೆಂಡ್ ಶೆಡ್ಯೂಲ್‌‌ನಲ್ಲಿ ಬ್ಯುಸಿಯಾಗಿರೋ ದಾಸ, ಸಾಂಗ್ ಶೂಟ್‌ನೊಂದಿಗೆ ಸಿನಿಮಾಗೆ ಕುಂಬಳಕಾಯಿ ಒಡೆಯಲಿದೆ.

ADVERTISEMENT
ADVERTISEMENT

ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸ್ತಿರೋ ಡೆವಿಲ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೊಲಿಟಿಷಿಯನ್ ರೋಲ್ ಜೊತೆ ಗ್ಯಾಂಗ್‌ಸ್ಟರ್ ಆಗಿಯೂ ಕಾಣಿಸಿಕೊಳ್ಳೋ ಸೂಚನೆ ನೀಡಿದ್ದಾರೆ. ಕನ್ನಡದಿಂದ ಬಾಲಿವುಡ್‌‌ವರೆಗೆ ಒಳ್ಳೊಳ್ಳೆ ಕಲಾವಿದರ ದಂಡಿರೋ ಡೆವಿಲ್, ಟೀಸರ್ ಹಾಗೂ ಸ್ಟಿಲ್ ಫೋಟೋಗಳಿಂದ ಸಿನಿಮಾಗೆ ಸಿಕ್ಕಾಪಟ್ಟೆ ಹೈಪ್ ನೀಡಿದೆ.

ದಚ್ಚು ನಗಾಡುವ ಸ್ಟೈಲ್ ಜೊತೆ ಮಾಸ್ ಡೈಲಾಗ್ ಸಖತ್ ಕಿಕ್ ಕೊಟ್ಟಿದೆ. ರಚನಾ ರೈ ನಾಯಕನಟಿಯಾಗಿ ಬಣ್ಣ ಹಚ್ಚಿದ್ದು, ಡೆವಿಲ್ ಅಸಲಿ ಆಟ ಶುರುವಾವಗಿದೆ. ಹೌದು, ಸಿನಿಮಾನ ಮಾಡೋದಕ್ಕಿಂತ ಹೆಚ್ಚಾಗಿ ಆ ಸಿನಿಮಾನ ದೊಡ್ಡ ಮಟ್ಟಕ್ಕೆ ಪ್ರಮೋಟ್ ಮಾಡಬೇಕು. ಆ ನಿಟ್ಟಿನಲ್ಲಿ ಡೆವಿಲ್ ಚಿತ್ರದ ಪ್ರಚಾರ ಕಾರ್ಯಗಳು ಇದೇ ಜುಲೈ 19ರಿಂದ ಶುಭಾರಂಭ ಆಗ್ತಿವೆ. ಜುಲೈ 19ರ ಶನಿವಾರದಂದು ರಾತ್ರಿ 8 ಗಂಟೆಗೆ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗ್ತಿದೆ.

ತಮ್ಮ ನೆಚ್ಚಿನ ನಾಯಕ ನಟನ ಕಷ್ಟದ ದಿನಗಳನ್ನು ನೋಡಿರೋ ದಚ್ಚು ಫ್ಯಾನ್ಸ್, ಇದೀಗ ಅವ್ರು ಜೈಲಿಗೆ ಹೋಗಿ ಬಂದ ಬಳಿಕ ರಿಲೀಸ್ ಆಗ್ತಿರೋ ಸಿನಿಮಾ ಆಗಿರೋದ್ರಿಂದ, ಡೆವಿಲ್ ಪ್ರಮೋಷನ್ಸ್ ನೆಕ್ಸ್ಟ್ ಲೆವೆಲ್‌ಗೆ ಮಾಡೋಕೆ ಪ್ಲ್ಯಾನ್ಸ್ ಮಾಡ್ತಿದ್ದಾರೆ. ಹಬ್ಬದ ರೀತಿ ಬಾಕ್ಸ್ ಆಫೀಸ್ ಸುಲ್ತಾನನನ್ನು ಬರಮಾಡಿಕೊಳ್ಳೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಒಂದಷ್ಟು ದೇವಸ್ಥಾನಗಳನ್ನೆಲ್ಲಾ ಸುತ್ತಿ, ಪಾಪ ಪುಣ್ಯಗಳ ಲೆಕ್ಕವನ್ನು ದೇವರಿಗೆ ಒಪ್ಪಿಸಿರೋ ದರ್ಶನ್, ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಲಗಾಮು ಹಾಕಿಕೊಂಡು ಮುನ್ನುಗ್ಗುತ್ತಿದ್ದಾರೆ. ಡೆವಿಲ್ ಸಿನಿಮಾ ಬಾಕ್ಸ್ ಆಫೀಸ್ ವಿಚಾರದಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಸೂಚನೆ ಇದೆ. ಅದಕ್ಕೆ ಕಾರಣ ಡೈರೆಕ್ಟರ್ ಮೇಲೆ ಇರೋ ಭರವಸೆ ಹಾಗೂ ದರ್ಶನ್ ಫ್ಯಾನ್ಸ್ ಬೇಸ್. ಕಥೆ ಸುಮಾರಾಗಿದ್ದು, ಮೇಕಿಂಗ್‌‌ ಚೆನ್ನಾಗಿ ಮಾಡಿಬಿಟ್ಟಿದ್ರೆ, ಡೆವಿಲ್‌ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.

Exit mobile version