ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲೊಳಗಿರೋ ಡಿಬಾಸ್ ದರ್ಶನ್ ಹಾಗೂ ಡಿಗ್ಯಾಂಗ್ನ ಇತರೇ ಆರೋಪಿಗಳ ನಡುವೆಯೂ ಹೊಂದಾಣಿಕೆ, ಒಗ್ಗಟ್ಟು ಇಲ್ಲ. ಇತ್ತ ದರ್ಶನ್ ನಂಬಿದ ಅವ್ರ ಕುಟುಂಬ, ಆಪ್ತರ ನಡುವೆಯೂ ಒಂದೇ ನಿಲುವು ಇಲ್ಲ. ಇದ್ರಿಂದ ಲಾಸ್ ಆಗ್ತಿರೋದು ಮಾತ್ರ ಒನ್ & ಓನ್ಲಿ ದಾಸ ದರ್ಶನ್ಗೆ ಅನ್ನೋದು ಗೊತ್ತಿದ್ದೂ ಸಹ ಹೀಗೆ ಕೆಸರೆರಚಾಡುವುದು ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ..? ಇತ್ತೀಚೆಗೆ ಧನ್ವೀರ್ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವೆ ನಡೆಯುತ್ತಿರೋ ಕೋಲ್ಡ್ ವಾರ್ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ…
- ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ.. ಪೋಸ್ಟ್ಗಳಲ್ಲೇ ಟಾಂಗ್, ಟಕ್ಕರ್
- ಶಕುನಿ, ಸಂತ್ರಸ್ತ, ಸ್ವಹಿತ ಸಾಧನೆ.. ಏನು ಈ ಮಾತುಗಳ ಗೂಢಾರ್ಥ..?
- ಮಾತು ಮನೆ ಕೆಡಿಸಿತು.. ತೂತು ಒಲೆ ಕೆಡಿಸಿತು.. ಇದೆಲ್ಲಾ ಬೇಕಾ..?
- ಒಟ್ಟಾರೆ ದಾಸ ದರ್ಶನ್ಗೆ ಜೈಲೂಟ ಫಿಕ್ಸ್.. ಬೇಲ್ ಸಿಗಲ್ಲ ಗ್ಯಾರಂಟಿ
ಸುಖದ ಸುಪ್ಪೊತ್ತಿಗೆಯಲ್ಲಿ ರಾಯಲ್ ಲೈಫ್ ಲೀಡ್ ಮಾಡಬೇಕಿದ್ದ ನಟ ದರ್ಶನ್.. ಪರಪ್ಪನ ಅಗ್ರಹಾರದ ಜೈಲಿನ ನಾಲ್ಕು ಗೋಡೆ ನಡುವೆ ಏಕಾಂಗಿ ಜೀವನ ನಡೆಸುವಂತಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿರೋ ದಾಸ ದರ್ಶನ್ಗೆ ಜೈಲಲ್ಲಿ ಎಲ್ಲಾ ಕೈದಿಗಳಿಗೆ ಸಿಗುವ ಮೂಲಭೂತ ಸೌಕರ್ಯಗಳಷ್ಟೇ ಸಿಕ್ಕಿವೆ. ಹೆಚ್ಚುವರಿಯಾಗಿ ಏನೂ ಸಿಕ್ಕಿಲ್ಲ. ಸಿಗೋದೂ ಇಲ್ಲ. ಜೈಲಿನ ಕೈಪಿಡಿಯಲ್ಲಿರುವಂತೆ ಜೈಲಾಧಿಕಾರಿಗಳು ಊಟ, ತಿಂಡಿ, ಸೌಕರ್ಯಗಳನ್ನ ನೀಡಿದ್ದಾರಷ್ಟೇ.
ಸುಪ್ರೀಂ ಕೋರ್ಟ್ನಲ್ಲೇ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಪಾಲಾದ ದಾಸನ ಸ್ಥಿತಿ ಬಹಳ ಹದಗೆಟ್ಟಿದೆ. ಹೊರಗೆ ಬರುವ ಯಾವುದೇ ಮುನ್ಸೂಚನೆ ಅಂತೂ ಸದ್ಯಕ್ಕೆ ಇಲ್ಲ. ಇತ್ತ ಅವ್ರ ಅಭಿಮಾನಿಗಳು ಹಾಗೂ ಅತ್ಯಾಪ್ತರಿಗೇ ಅದ್ಯಾಕೋ ದರ್ಶನ್ ಹೊರಗೆ ಬರೋದು ಇಷ್ಟವಿಲ್ಲ ಅನಿಸ್ತಿದೆ. ಅದೇ ಕಾರಣದಿಂದ ಆತ ಪರ್ಮನೆಂಟ್ ಆಗಿ ಒಳಗೆ ಇರೋಕೆ ಏನೆಲ್ಲಾ ಬೇಕೋ ಅದನ್ನೇ ಮಾಡ್ತಿರೋದು ಅಚ್ಚರಿ. ಅದ್ರಲ್ಲೂ ವಿಜಯಲಕ್ಷ್ಮೀ ದರ್ಶನ್ ಹಾಗೂ ದಚ್ಚು ಭಂಟ ಧನ್ವೀರ್ ಗೌಡ ನಡುವಿನ ಶೀತಲ ಸಮರ ತಾರಕ್ಕಕೇರಿದೆ.
ಒಂದ್ಕಡೆ ದರ್ಶನ್ಗೆ ತನ್ನ ಡಿ ಗ್ಯಾಂಗ್ ಮಂದಿಯೇ ಮುಳುವಾಗ್ತಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿ ನುಡಿದು ಎಸ್ಕೇಪ್ ಆಗೋಕೆ ನೋಡ್ತಿದ್ದಾರೆ. ಮತ್ತೊಂದ್ಕಡೆ ದಾಸನನ್ನ ಸೇಫ್ ಆಗಿ ಹೊರಗೆ ತರೋ ಜವಾಬ್ದಾರಿ ಇರುವ ಪತ್ನಿ-ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಡುವ ಮೂಲಕ ಇಡೀ ಕರ್ನಾಟಕವೇ ಮಾತನಾಡಿಕೊಳ್ಳುವಂತಾಗಿದೆ.
ಹೌದು.. ಬೇಲ್ ಮೇಲೆ ದರ್ಶನ್ನ ಹೊರಗೆ ಕರೆತರುವ ವಿಚಾರದಲ್ಲಿ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮೀ ನಡುವೆ ಮನಸ್ತಾಪ ಉಂಟಾಗಿದೆ. ಅದೇ ವಿಚಾರದಲ್ಲಿ ವಕೀಲರ ಫೀಸ್ ವಿಷಯಕ್ಕೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಹಣಕಾಸಿನ ವಿಷಯದಲ್ಲೇ ಧನ್ವೀರ್ ಕೊಂಚ ಡಿಬಾಸ್ ಹಾಗೂ ವಿಜಿ ದರ್ಶನ್ಗೆ ದೂರವಾಗಿದ್ದಾರೆ ಎನ್ನಲಾಗಿತ್ತು. ಆ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಆಗ್ತಿದ್ದಂತೆ ಧನ್ವೀರ್-ವಿಜಿ ಇಬ್ಬರೂ ಪರಸ್ಪರ ಇನ್ಸ್ಟಾ ಪೋಸ್ಟ್ಗಳ ಮೂಲಕ ಕೋಳಿ ಜಗಳ ಆಡಿದ್ರು. ಇದೀಗ ದಸರಾ ಹಬ್ಬದ ವಿಶೇಷ ಆ ಜಗಳ ಮತ್ತಷ್ಟು ತಾರಕಕ್ಕೇರಿದೆ.
‘ನಿಮ್ಮ ಡಿಬಾಸ್ ಹೆಸರು ಮೆಚ್ಚುಗೆಗಿರಲಿ.. ಟೀಕೆಗಿರಲಿ.. ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ. ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು’.. ಹೀಗಂತ ವಿಜಯಲಕ್ಷ್ಮೀ ದರ್ಶನ್ ಇನ್ಸ್ಟಾ ಸ್ಟೋರಿ ಪೋಸ್ಟ್ ಮೂಲಕ ಹಬ್ಬಕ್ಕೆ ಶುಭ ಕೋರಿದ್ರು.
ಅದರ ಬೆನ್ನಲ್ಲೇ ನಟ ಧನ್ವೀರ್ ಕೂಡ.. ‘ಕೆಲವರಿರುತ್ತಾರೆ ಶಕುನಿ ಅಂತವರು. ಕೊನೆವರೆಗೂ ಆಟವಾಡಿ ಕೊನೆಗೆ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವತ್ತೂ ಸಾಕ್ಷಿ ಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತೆ. ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು’.. ಹೀಗೆ ವಿಜಯಲಕ್ಷ್ಮೀ ದರ್ಶನ್ ಪೋಸ್ಟ್ಗೆ ಕೌಂಟರ್ ನೀಡಿ ಪೋಸ್ಟ್ ಹಾಕ್ತಾರೆ ನಟ ಧನ್ವೀರ್.
ಅಂದಹಾಗೆ ಇದಕ್ಕೆಲ್ಲಾ ಕಾರಣ ಆಗಿರೋದು ಇತ್ತೀಚೆಗೆ ಮೈಸೂರಿನ ಚಾಮರಾಜನಗರದ ದಸರಾ ಉತ್ಸವದಲ್ಲಿ ನಟ ಧನ್ವೀರ್ ಗೌಡ ಆಡಿದ ಮಾತುಗಳು. ಸರ್ಕಾರ ಆಯೋಜಿಸಿದ್ದ ಸರ್ಕಾರಿ ವೇದಿಕೆಯಲ್ಲೇ ನಾಯಿ, ನರಿ ಅಂತೆಲ್ಲಾ ಕಾನೂನು, ನ್ಯಾಯಾಂಗ ಹಾಗೂ ಸರ್ಕಾರದ ವ್ಯವಸ್ಥೆಗಳನ್ನ ಟೀಕಿಸುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ರು ನಟ ಧನ್ವೀರ್. ಅದೇ ಕಾರಣದಿಂದ ವಿಜಯಲಕ್ಷ್ಮೀ ದರ್ಶನ್ ಆ ರೀತಿ ಪೋಸ್ಟ್ ಹಾಕಿದ್ದಾರೆ ಅನ್ನೋದು ಸದ್ಯದ ಟಾಕ್. ಇಲ್ಲಿ ಧನ್ವೀರ್ ಸ್ವಹಿತ ಸಾಧನೆಗೆ ದರ್ಶನ್ ಹೆಸರನ್ನ ಸಾಧನವಾಗಿಸಿಕೊಂಡ್ರಾ..? ಧನ್ವೀರ್ ಹೇಳಿದ ಶಕುನಿ ಯಾರು..? ಸಂತ್ರಸ್ತ ಯಾರು..? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತಿವೆ.
ಅದೇನೇ ಇರಲಿ.. ದರ್ಶನ್ ನಂಬಿಕೊಂಡಿರುವವರೇ ಹೀಗೆ ಪರಸ್ಪರ ಜಗಳ ಆಡ್ತಿರೋದು ಮಾತ್ರ ದಾಸನಿಗೆ ಬಿಗ್ ಎಫೆಕ್ಟ್ ಆಗ್ತಿದೆ. ಆತನ ಕೇಸ್ ಮತ್ತಷ್ಟು ಹಳ್ಳ ಹಡಿಯೋಕೆ ಕಾರಣವಾಗ್ತಿದೆ. ಇಂಡಸ್ಟ್ರಿಗೆ ಆಸರೆಯಾಗಿದ್ದಂತಹ ಆ ದೈತ್ಯ ಪ್ರತಿಭೆಯನ್ನ ಹೊರಗೆ ತಂದು, ಮತ್ತೆ ಆತ ರಾರಾಜಿಸೋದನ್ನ ನೋಡಬೇಕಿದೆ. ಇವರುಗಳಿಗೆ ಹೇಳೋರು ಕೇಳೂರು ಯಾರೂ ಇಲ್ವಾ ಅನಿಸ್ತಿದೆ. ಸ್ವಂತ ಬುದ್ಧಿಯೂ ಇಲ್ಲ. ಬೇರೆ ಯಾರಾದ್ರೂ ಅಡ್ವೆಸ್ ಮಾಡೋ ಅಂತಹ ಬುದ್ದಿ ಜೀವಿಗಳೂ ಜೊತೆಗಿಲ್ಲ. ಈ ವಿಷಯದಲ್ಲಿ ಇವರುಗಳು ಬೇಗ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದ್ರೆ ಭವಿಷ್ಯ ಬಹಳ ಕಷ್ಟವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
