ನಟ ದರ್ಶನ್‌ಗೆ ಸದ್ಯಕ್ಕೆ ಜಾಮೀನು ನಿರಾಕರಣೆ: ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್

ನವದೆಹಲಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಖ್ಯ ಆರೋಪಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ಇದು ದೊಡ್ಡ ಶಾಕ್‌ ನೀಡಿದಂತಾಗಿದೆ.

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ದರ್ಶನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿ ತಿರಸ್ಕರಿಸಿದೆ. ಜಡ್ಜ್‌ಗಳು ದರ್ಶನ್ ಪರ ವಕೀಲರಿಗೆ “ಜಾಮೀನು ನೀಡಲು ತೀರಾ ಆತುರವಾಗುತ್ತಿದೆಯಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಕೋರ್ಟ್‌ನ ಮುಖ್ಯ ಸೂಚನೆಗಳು:

ಸುಪ್ರೀಂ ಕೋರ್ಟ್ “ಕೇಸ್ ಅನ್ನು ಬೇಗ ಮುಗಿಸುತ್ತೇವೆ. ಆದರೆ ಜಾಮೀನು ನೀಡುವುದು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.

ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ಜೈಲಿನಲ್ಲಿ ಇತರ ಖೈದಿಗಳಿಂದ ತೊಂದರೆಯಾಗುತ್ತಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರೂ, ಕೋರ್ಟ್ ಅದನ್ನು ಪರಿಗಣಿಸಲಿಲ್ಲ.

273 ಸಾಕ್ಷಿಗಳ ಪೈಕಿ ಇನ್ನೂ ಹಲವು ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಮಹತ್ವದ್ದಾಗಿದೆ.

ದರ್ಶನ್ ಈಗಾಗಲೇ 8 ತಿಂಗಳಿಂದ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳಲ್ಲಿ ನಿರಾಸೆ ವ್ಯಕ್ತವಾಗಿದೆ.

ಈ ಪ್ರಕರಣವು ಇನ್ನೂ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಂದಿನ ವಿಚಾರಣೆಗಳತ್ತ ಎಲ್ಲರ ಗಮನ ಕೇಂದ್ರೀಕರಣವಾಗಿದೆ. ಈ ರೀತಿಯಾಗಿ ಸುಪ್ರೀಂನಲ್ಲೂ ದರ್ಶನ್‌ಗೆ ನಿರಾಸೆಯಾಗಿದೆ. ಆದ್ದರಿಂದ ಬೇಲ್‌ ಸಿಗಬಹುದು ಎಂಬ ಒಂದು ಆಸೆಗೂ ಈಗ ತಣ್ಣೀರು ಎರಚಿದಂತಾಗಿದೆ.

ದರ್ಶನ್‌ಗೆ ಸುಪ್ರೀಂನಿಂದ ಒಂದು ಬೇಲ್‌ ಸಿಗಬಹುದು ಎಂಬ ನಿರೀಕ್ಷೆ ಈಗ ಸುಳ್ಳಾಗಿದೆ. ಅವರ ಆಸೆಗೆ ಈ ಬಾರಿಯೂ ಸಹ ನಿರಾಸೆಯುಂಟಾಗಿದೆ.

ಮಾಹಿತಿಗಳ ಪ್ರಕಾರ ದರ್ಶನ್‌ಗೆ ಇನ್ನೂ ಒಂದು ವರ್ಷ ಜಾಮೀನು ಸಿಗುವುದು ಬಹುತೇಕ ಡೌಟ್‌ ಎಂಬುದು ಖಾತರಿಯಾಗಿದೆ. ಏಕೆಂದರೆ ಜಾಮೀನು ತುಂಬಾ ಬೇಗ ಕೇಳುತ್ತಿದ್ದಿರಲ್ಲಾ ಎಂದು ಜಡ್ಜ್‌ ಪ್ರಶ್ನೆ ಎತ್ತಿದ್ದಾರೆ. ಆದ್ದರಿಂದ ಜಡ್ಜ್‌ ದರ್ಶನ್‌ ಅವರಿಗೆ ಒಂದು ವರ್ಷಗಳ ಡೆಡ್‌ಲೈನ್‌ ನೀಡಿದ್ದಾರೆ.

Exit mobile version