ದರ್ಶನ್ ಜಾಮೀನು ರದ್ದಾಗ್ತಿದ್ದಂತೆ ಕಣ್ಣೀರಿಟ್ಟ ದಾಸನ ಪತ್ನಿ ವಿಜಯಲಕ್ಷ್ಮಿ..!

ಸುಪ್ರೀಂ ಶಾಕ್: ದರ್ಶನ್ ಗ್ಯಾಂಗ್ ಮತ್ತೆ ಜೈಲುಪಾಲು!

1 (21)

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಅವರ ಗ್ಯಾಂಗ್‌ಗೆ ಸಿಕ್ಕಿದ್ದ ಜಾಮೀನು ರದ್ದಾಗಿದೆ. ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳು ಮತ್ತೆ ಜೈಲು ಸೇರಬೇಕಾಗಿದೆ.

ಹೌದು, ತೀರ್ಪು ಹೊರಬೀಳುತ್ತಿದ್ದಂತೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿದ್ದು, ತೀರ್ಪು ಕೇಳಿ ತೀವ್ರ ದುಃಖಕ್ಕೊಳಗಾಗಿದ್ದಾರೆ. ದರ್ಶನ್ ಪ್ರಕರಣದಲ್ಲಿ ಸಿಲುಕಿದ್ದಾಗಿನಿಂದಲೂ ವಿಜಯಲಕ್ಷ್ಮೀ ಅವರು ಅವರನ್ನು ರಕ್ಷಿಸಲು ಅಪಾರ ಪ್ರಯತ್ನ ಮಾಡಿದ್ದರು. ಕಾನೂನು ಹೋರಾಟದ ಜೊತೆಗೆ ದೇವರ ಸೇವೆ ಮತ್ತು ಇತರ ಮಾರ್ಗಗಳ ಮೂಲಕ ಹೋರಾಡುತ್ತಿದ್ದರು.

ಹೈಕೋರ್ಟ್ ಜಾಮೀನು ನೀಡಿದ್ದರಿಂದ ನಿಟ್ಟುಸಿರು ಬಿಟ್ಟಿದ್ದ ವಿಜಯಲಕ್ಷ್ಮೀಗೆ ಸುಪ್ರೀಂ ಕೋರ್ಟ್ ತೀರ್ಪು ಆಘಾತ ನೀಡಿದೆ. ರಾಜ್ಯ ಸರ್ಕಾರದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನಲ್ಲಿ ದೋಷವಿದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠ ಈ ಆದೇಶ ನೀಡಿದೆ. ಈ ತೀರ್ಪು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಬೆಂಗಳೂರಿನಲ್ಲಿ 5 ಜನ ಮತ್ತು ಚಿತ್ರದುರ್ಗದಲ್ಲಿ ಇಬ್ಬರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಕೆಲವೇ ಕ್ಷಣಗಳಲ್ಲಿ ಕೋರ್ಟ್‌ಮುಂದೆ ಹಾಜರುಪಡಿಸಲಿರುವ ಪೊಲೀಸರು.

Exit mobile version