ಡಿಬಾಸ್ ದರ್ಶನ್‌ಗೆ ಮತ್ತಷ್ಟು ಸಂಕಷ್ಟ..ಸಾಕ್ಷಿ ಬೆದರಿಕೆ ಆರೋಪ

ಸಾಕ್ಷಿ ಸಂದೀಪ್‌ಗೆ ಆಕರ್ಷ್ ಮೂಲಕ ಅಪರಿಚಿತರ ಬೆದರಿಕೆ

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲು ಪಾಲಾಗಿರೋ ಡಿಬಾಸ್ ದರ್ಶನ್‌ಗೆ ಇನ್ನೊಂದು ವರ್ಷ ಬೇಲ್ ಸಿಗಲ್ಲ ಅನ್ನೋದು ಪಕ್ಕಾ ಆಗಿತ್ತು. ಆದ್ರೀಗ ಇತ್ತೀಚೆಗೆ ನಡೆದಿರೋ ಬೆಳವಣಿಗೆ ನೋಡ್ತಿದ್ರೆ ಪರ್ಮನೆಂಟ್ ಆಗಿ ಬೇಲ್ ಸಿಗೋದೇ ಡೌಟು ಅನಿಸ್ತಿದೆ. ಹೌದು.. ಸಾಕ್ಷಿ ಬೆದರಿಕೆ ಆರೋಪ ಕೇಳಿಬರ್ತಿದ್ದು, ಕಾನೂನು ಮತ್ತಷ್ಟು ಸ್ಟ್ರಿಕ್ಟ್ ಆಗ್ತಿದೆ. ಈ ಕುರಿತ ಒಂದು ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ..

ಆಪ್ತ ಗೆಳತಿ ಪವಿತ್ರಾ ಗೌಡಗಾಗಿ ಡಿಬಾಸ್ ದರ್ಶನ್ ಹೀರೋಯಿಸಂ ತೋರಿಸೋಕೆ ಮುಂದಾಗಿ, ಪರಪ್ಪನ ಅಗ್ರಹಾರದಲ್ಲಿ ಸುಮಾರು ಎರಡು ವರ್ಷಗಳಿಂದ ವಾಸ್ತವ್ಯ ಹೂಡುವಂತಾಗಿದೆ. ಹೌದು.. ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಜೈಲು ಹಕ್ಕಿ ಆಗಿರೋ ದರ್ಶನ್‌‌‌ಗೆ ಸುಪ್ರೀಂ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡಿತ್ತು. ಆದ್ರೀಗ ಒಂದು ವರ್ಷದೊಳಗೆ ಎಲ್ಲಾ ಸಾಕ್ಷಿಗಳ ವಿಚಾರಣೆ ಆಗದಿದ್ರೆ ಬೇಲ್‌ಗೆ ಅವರು ಅರ್ಹರು ಅಂದಿತ್ತು ಅದೇ ಸುಪ್ರೀಂ.

ಸುಪ್ರೀಂ ನಿರ್ದೇಶನದಂತೆ ಸದ್ಯ ಸೆಷನ್ ಕೋರ್ಟ್‌‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಸಾಕ್ಷಿಗಳ ವಿಚಾರಣೆ ವಾರಕ್ಕೆ ಐದು ದಿನ ನಡೆಯುತ್ತಿದೆ. ಕೋರ್ಟ್ ಟ್ರಯಲ್ಸ್‌‌ ನಡೆಯುತ್ತಿರೋ ಈ ಸಂದರ್ಭದಲ್ಲಿ ಅಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಟ್ರಯಲ್ಸ್ ವೇಳೆ ಸಾಕ್ಷಿಗಳಿಗೆ ಬೆದರಿಕೆ ಹಾಕೋ ಮೂಲಕ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ ಅಪರಿಚಿತರು. ಅಲ್ಲಿಗೆ ಆ ಅಪರಿಚಿತರು ದರ್ಶನ್ ಕಡೆಯವರೇ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಯೆಸ್.. ಪ್ರಾಸಿಕ್ಯೂಷನ್ ಸಾಕ್ಷಿ 17 ಸಂದೀಪ್‌ಗೆ ಪರಿಚಯ ಇರುವ ಆಕರ್ಷ್ ಎಂಬಾತನ ಮೂಲಕ ಅಪರಿಚಿತ ವ್ಯಕ್ತಿಗಳು ವಾಟ್ಸಪ್ ಮೂಲಕ ಕರೆ ಮಾಡಿಸಿದ್ದಾರೆ. ತುಮಕೂರಿನ ದುರ್ಗಾ ಬಾರ್ & ರೆಸ್ಟೋರೆಂಟ್‌‌ನ ಕ್ಯಾಷಿಯರ್ ಸಂದೀಪ್ ಆ ಸಾಕ್ಷಿ ಆಗಿದ್ರು. ಕರೆ ಮಾಡಿದವರು ಹೇಳಿಕೊಟ್ಟಂತೆ ಸಂದೀಪ್ ಸಾಕ್ಷಿ ನುಡಿಯಬೇಕು ಅಂತ ಬೆದರಿಕೆ ಒಡ್ಡಿ, ಸಾಕ್ಷ್ಯ ನಾಶಕ್ಕೆ ಮುಂದಾಗಿರೋದು ಕೋರ್ಟ್‌‌ನಲ್ಲಿ ಬಯಲಾಗಿದೆ ಅನ್ನೋದು ಅಚ್ಚರಿ. ಇಷ್ಟಕ್ಕೂ ಅಪರಿಚಿತರು ಬೆದರಿಕೆ ಹಾಕಿದ್ದಲ್ಲದೆ, ಒತ್ತಾಯ ಮಾಡಿದ್ದಾರೆ.

ಒತ್ತಾಯ ಮಾಡಿದ್ದು ಎನಂತ ಗೊತ್ತಾ..?

1.ಆರೋಪಿಗಳನ್ನು ಗುರುತಿಸಲು ಆಗುವುದಿಲ್ಲ ಎಂದು ಹೇಳು.

2. ದುರ್ಗಾ ಬಾರ್ ಬಳಿ ಇರುವ CCTVನ ಪೊಲೀಸರು ಎತ್ತುಕೊಂಡು ಹೋದ್ರು ಎಂದು ಹೇಳು.

3. ಕಿಡ್ನ್ಯಾಪ್ ಮಾಡಿದ ಆರೋಪಿಗಳನ್ನ ಗುರುತಿಸಲಾಗುವುದಿಲ್ಲ ಎಂದು ಹೇಳು.

4. ಪೊಲೀಸರ ಮಹಜರಿನಲ್ಲಿ ಏನಿದೆ ಎಂಬುವುದು ನನಗೆ ಗೊತ್ತಿಲ್ಲ.

ಹೀಗೆ ಈ ನಾಲ್ಕು ಸ್ಟೇಟ್ಮೆಂಟ್‌ಗಳನ್ನ ನೀಡಲು ಬೆದರಿಸಿದ್ದಾರೆ. ಈ ಬಗ್ಗೆ ನನಗೆ ಭಯವಾಗುತ್ತಿದೆ ನಮ್ಮ ಬಾರ್ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಟ ಮಾಡುತ್ತಿದ್ದಾರೆ. ಹೀಗಂತ ಟ್ರಯಲ್ ವೇಳೆ ನ್ಯಾಯಾಧೀಶರ ಮುಂದೆ ತನಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಇರುವುದರ ಬಗ್ಗೆ ಸಾಕ್ಷಿ ತಿಳಿಸಿದ್ದಾರೆ. ಸಾಕ್ಷ್ಯ ತಿರುಚಲು ಯತ್ನಿಸಿರುವುದಕ್ಕೆ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸುವಂತೆ ಸಾಕ್ಷಿಗೆ ಜಡ್ಜ್ ಸೂಚಿಸಿದ್ದಾರೆ. ಈ ಬಗ್ಗೆ ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ 59 CCH ನ್ಯಾಯಾಧೀಶೆ, ಅಗತ್ಯ ಭದ್ರತೆ ಒದಗಿಸುವಂತೆ ತನಿಖಾಧಿಕಾರಿಗೆ ಕೋರ್ಟ್ ಸೂಚಿಸಿದೆ.

ಟ್ರಯಲ್ಸ್ ವೇಳೆ ಹೀಗೆ ಎಡಬಿಡಂಗಿ ಕೆಲಸ ಕಾರ್ಯಗಳು ನಡೆದಲ್ಲಿ ದರ್ಶನ್‌ಗೆ ಒಂದು ವರ್ಷ ಅಲ್ಲ.. ಪರ್ಮನೆಂಟ್ ಆಗಿ ಬೇಲ್ ಸಿಗೋದು ಮಾತ್ರ ಹಂಡ್ರೆಡ್ ಪರ್ಸೆಂಟ್ ಡೌಟ್. ಈಗಲೂ ಕಾಲ ಮಿಂಚಿಲ್ಲ.. ಎಚ್ಚೆತ್ತುಕೊಂಡು ಜಾಗರೂಕತೆಯಿಂದ ಹೆಜ್ಜೆ ಹಾಕಿದ್ರೆ ದರ್ಶನ್‌ಗೆ ಒಳಿತಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version