ನಟ ದರ್ಶನ್‌ಗಿಂದು 49ನೇ ವರ್ಷದ ಹುಟ್ಟುಹಬ್ಬ: ಈ ಬಾರಿಯೂ ‘ಡೆವಿಲ್‌’ಗೆ ಇಲ್ಲ ಸಂಭ್ರಮ!

ಕನ್ನಡ ಚಿತ್ರರಂಗದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ತೂಗುದೀಪ ಅವರಿಗೆ ಇಂದು 49ನೇ ಹುಟ್ಟುಹಬ್ಬ. ಆದರೆ ಈ ಬಾರಿ ಸಂಭ್ರಮಕ್ಕೆ ಅವಕಾಶವಿಲ್ಲ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುವಾಸದಲ್ಲಿರುವ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಏಕಾಂತದಲ್ಲಿ ದಿನ ಕಳೆಯುತ್ತಿದ್ದಾರೆ.

ಜೈಲಿನಲ್ಲೇ ಏಕಾಂತದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದರ್ಶನ್‌. ಸಾಮಾನ್ಯವಾಗಿ ಅಭಿಮಾನಿಗಳ ಜೊತೆಗಿನ ಭವ್ಯ ಸಂಭ್ರಮದಲ್ಲಿ ಕೇಕ್ ಕಟ್ ಮತ್ತು ಫ್ಯಾನ್ ಮೀಟ್‌ಗಳೊಂದಿಗೆ ಆಚರಿಸುತ್ತಿದ್ದ ದರ್ಶನ್ ಈ ಬಾರಿ ಮೌನವಾಗಿ ದಿನ ಕಳೆಯುತ್ತಿದ್ದಾರೆ. ಬ್ಯಾರಕ್‌ನಲ್ಲಿ ಏಕಾಂಗಿಯಾಗಿ ಕುಳಿತು ಚಿಂತಾಕ್ರಾಂತರಾಗಿ, ಯಾರೊಂದಿಗೂ ಹೆಚ್ಚು ಮಾತನಾಡದೇ ಬೇಸರದ ಮೌನಕ್ಕೆ ಶರಣಾಗಿದ್ದಾರೆ . ದೇವರ ಫೋಟೋಗೆ ನಮಸ್ಕರಿಸಿ ಕೆಲಹೊತ್ತು ವಾಕ್ ಮಾಡುತ್ತಾ, ಕುಟುಂಬ ಮತ್ತು ಅಭಿಮಾನಿಗಳನ್ನು ನೆನೆಯುತ್ತಿದ್ದಾರೆ. ಇದು ದರ್ಶನ್‌ಗೆ ಜೈಲಿನಲ್ಲಿ ಎರಡನೇ ಹುಟ್ಟುಹಬ್ಬವಾಗಿದ್ದು, ಸಂಭ್ರಮಕ್ಕೆ ಅವಕಾಶವಿಲ್ಲದೇ ವಿಷಾದದ ದಿನವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿರುವ ಫ್ಯಾನ್ಸ್‌‌ಗಳು. ಫ್ಯಾನ್‌ಗಳು, ಸ್ನೇಹಿತರು ಮತ್ತು ಸಹ ನಟರು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಶುಭಾಶಯಗಳನ್ನು  ಹೇಳುತ್ತಿದ್ದಾರೆ.

ನಟಿ ರಕ್ಷಿತಾ ಶೆಟ್ಟಿ ದರ್ಶನ್‌ರ ಬೆಸ್ಟ್ ಫ್ರೆಂಡ್ ಕಳೆದ ವರ್ಷದ ಫೋಟೋ ಹಂಚಿಕೊಂಡು “ಪ್ರತಿದಿನ ನಿನ್ನನ್ನ ಮಿಸ್ ಮಾಡಿಕೊಳ್ಳುತ್ತೇನೆ, ನಿನ್ನನ್ನ ಮತ್ತೆ ಸಂತೋಷದಿಂದ ನೋಡಬೇಕೆಂದು ಬಯಸುತ್ತೇನೆ. ಬೇಗ ಮನೆಗೆ ಬಾರೋ” ಎಂದು ಭಾವುಕ ಪೋಸ್ಟ್ ಮಾಡಿದ್ದಾರೆ.

ಪುತ್ರ ವಿನೀಶ್ ಇನ್‌ಸ್ಟಾಗ್ರಾಂನಲ್ಲಿ ಅಪ್ಪನ ಜೊತೆಗಿನ ಪೋಟೋ ಹಂಚಿಕೊಂಡು “ಹ್ಯಾಪಿ ಬರ್ತ್‌ಡೇ ಪಪ್ಪ, ಐ ಲವ್ ಯೂ, ಐ ಮಿಸ್ ಯೂ” ಎಂದು ವಿಡಿಯೋ ಪೋಸ್ಟ್ ಮಾಡಿ ಎಲ್ಲರ ಹೃದಯಕ್ಕೆ ತಟ್ಟಿದ್ದಾರೆ.

ಪತ್ನಿ ವಿಜಯಲಕ್ಷ್ಮಿ ಕೂಡ ಭಾವುಕ ಪೋಸ್ಟ್ ಮಾಡಿ ಶುಭಾಶಯ ಹೇಳಿದ್ದಾರೆ.

ದರ್ಶನ್ ಇಲ್ಲದೇ ಇದು ಅಭಿಮಾನಿಗಳಿಗೆ ಮೊದಲನೇ ಹುಟ್ಟುಹಬ್ಬವಾಗಿದ್ದು, ಸಾಮಾನ್ಯ ಸಂಭ್ರಮ ಬದಲು ಸಾಮಾಜಿಕ ಸೇವೆ, ದಾನ, ರಕ್ತದಾನ ಮತ್ತು ಅನ್ನದಾನದ ಮೂಲಕ ಆಚರಿಸುವ ಯೋಜನೆ ಹಾಕಿಕೊಂಡಿದ್ದಾರೆ. ‘ಡಿ ಉತ್ಸವ’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿವೆ.

ದರ್ಶನ್ ಅಭಿಮಾನಿಗಳು ಮತ್ತು ಕುಟುಂಬದವರು ಬೇಗನೆ ಮನೆಗೆ ಮರಳಲಿ ಎಂಬ ಆಶಯಗಳೊಂದಿಗೆ ಶುಭಾಶಯಗಳು ಸುರಿಯುತ್ತಿವೆ. ದರ್ಶನ್ ಆರೋಗ್ಯದ ಬಗ್ಗೆಯೂ ಚಿಂತೆ ವ್ಯಕ್ತವಾಗುತ್ತಿದೆ.

Exit mobile version