ಒಬ್ಬ ಲೆಜೆಂಡರಿ ಡೈರೆಕ್ಟರ್ ಬಗ್ಗೆ ಮತ್ತೊಬ್ಬ ಲೆಜೆಂಡ್ ಮಾತನಾಡಿದ್ದಾರೆ. ಅದೇ ಲಿವಿಂಗ್ ಲೆಜೆಂಡ್ ಬಗ್ಗೆ ಆ ಡೈರೆಕ್ಟರ್ ಕೂಡ ಕೊಂಡಾಡಿದ್ದಾರೆ. ಅದು ಬೇರಾರೂ ಅಲ್ಲ ತಲೈವಾ ರಜನೀಕಾಂತ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ. ಯೆಸ್.. ಕೂಲಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಆ ಎಕ್ಸ್‌ಕ್ಲೂಸಿವ್ ಲೆಜೆಂಡ್ ಟಾಕ್‌ನ ಡೀಟೇಲ್ಸ್ ಇಲ್ಲಿದೆ.
- ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’
- ಅಬ್ಬಬ್ಬಾ.. ಉಪ್ಪಿ ಡೈರೆಕ್ಷನ್‌ನ ಕೊಂಡಾಡಿದ ತಲೈವಾ ರಜನಿ
- ಲೋಕೇಶ್ ಕನಕರಾಜ್ ಶೈಲಿಯನ್ನ ಉಪ್ಪಿ ಆಗ್ಲೇ ಮಾಡಿದ್ರು
- ಇಂಡಿಯಾದ ಬುದ್ಧಿವಂತ ನಿರ್ದೇಶಕರಿಗೆಲ್ಲಾ ಉಪ್ಪಿ ಸ್ಫೂರ್ತಿ
ಕೂಲಿ.. ಇದೇ ಆಗಸ್ಟ್ 14ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸುತ್ತಿರೋ ಆ್ಯಕ್ಷನ್ ಥ್ರಿಲ್ಲರ್ ಎಂಟರ್‌ಟೈನರ್. ತಲೈವಾ ರಜನೀಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿದೆ. ಈ ಹೈ ವೋಲ್ಟೇಜ್ ಮಾಸ್ ಸಿನಿಮಾದ ಸ್ಟ್ರೆಂಥ್ ಸ್ಟಾರ್‌ಕಾಸ್ಟ್. ಹೌದು.. ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಬಾಲಿವುಡ್ ಆಮೀರ್ ಖಾನ್, ನಮ್ಮ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್, ಟಾಲಿವುಡ್‌ನ ಕಿಂಗ್ ನಾಗಾರ್ಜುನ್, ಮಲಯಾಳಂನ ಸೌಬಿನ್ ಶಾಹಿರ್, ಶ್ರುತಿ ಹಾಸನ್, ಕಟ್ಟಪ್ಪ ಸತ್ಯರಾಜ್ ಹೀಗೆ ದೊಡ್ಡ ತಾರಾದಂಡಿದೆ.
ಕೂಲಿ ಸಿನಿಮಾ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು, ಇಲ್ಲಿ ಎಲ್ಲರೂ ಒಳ್ಳೆಯ ಮಾರ್ಕ್ಸ್ ಸ್ಕೋರ್ ಮಾಡಿದಂತಿದೆ. ಸ್ಯಾಂಪಲ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಸಿನಿಮಾ ಕಣ್ತುಂಬಿಕೊಳ್ಳೋಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಅಂದಹಾಗೆ ಚಿತ್ರತಂಡ ರಿಲೀಸ್‌ಗೂ ಮೊದಲು ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಿದೆ. ಅದರಲ್ಲಿ ನಮ್ಮ ಬುದ್ಧಿವಂತ ಉಪೇಂದ್ರ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ.
‘ಉಪೇಂದ್ರ.. ಇಡೀ ಇಂಡಿಯಾದಲ್ಲಿರೋ ಬಹುತೇಕ ಎಲ್ಲಾ ಬುದ್ಧಿವಂತ ನಿರ್ದೇಶಕರಿಗೆ ಸ್ಫೂರ್ತಿ. ಹಿಂದಿ, ಮಲಯಾಳಂ, ತೆಲುಗು, ತಮಿಳು ಎಲ್ಲರೂ ಉಪೇಂದ್ರ ಕಡೆ ತಿರುಗಿ ನೋಡ್ತಾರೆ. ಅಂತಹ ನಿರ್ದೇಶಕ ಅವರು. ಅವರಿಗೆ ನಟನಾಗೋಕೆ ಇಷ್ಟವಿಲ್ಲ. ಡೈರೆಕ್ಷನ್ ಅವರ ಪ್ಯಾಷನ್. ಶಿವರಾಜ್‌ಕುಮಾರ್ ಅವರಿಗೆ ಓಂ ಅನ್ನೋ ಸಿನಿಮಾ ಮಾಡಿದ್ರು. ನನಗೆ ಬಾಷಾ ಹೇಗೋ ಅವ್ರಿಗೆ ಓಂ ಹಾಗೆ. ಆದ್ರೆ ನನ್ನ ಬಾಷಾಗಿಂತ ಓಂ ಸಿನಿಮಾ ಅಲ್ಲಿ ಹತ್ತು ಪಟ್ಟು ದೊಡ್ಡದು. ಅದಕ್ಕಾಗಿ ಅವರು ಒಂದೊಂದು ಕ್ಯಾರೆಕ್ಟರ್‌ನ ಕೂಡ ಅದ್ಭುತವಾಗಿ ಬರೆದಿದ್ದರು. ನಾನ್ ಲೀನಿಯರ್ ಸ್ಟೋರಿ ಟೆಲ್ಲಿಂಗ್‌ನ ಲೋಕೇಶ್ ಕನಕರಾಜ್ ಈಗ ಮಾಡ್ತಿದ್ದಾರೆ. ಆದ್ರೆ ಅದನ್ನ ಉಪೇಂದ್ರ ಆಗಲೇ ಮಾಡಿದ್ರು’ ಅಂತ ರಜನಿ ನಮ್ಮ ಉಪ್ಪಿಯ ಗುಣಗಾನ ಮಾಡಿದ ಪರಿ ವೆರಿ ವೆರಿ ಇಂಟರೆಸ್ಟಿಂಗ್.
ರಜನೀಕಾಂತ್ ಅಷ್ಟೇ ಅಲ್ಲ, ಕಮಲ್ ಹಾಸನ್ ಪುತ್ರಿ, ಬಹುಭಾಷಾ ನಟಿ ಶ್ರುತಿ ಹಾಸನ್ ಕೂಡ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಟ್ಯಾಲೆಂಟ್, ನಡತೆ ಬಗ್ಗೆ ಕೊಂಡಾಡಿದ್ದಾರೆ. ಕ್ಕ್ರಿಯೇಟಿವ್ ಜೀನಿಯಸ್ ಉಪೇಂದ್ರ ಅವ್ರ ಪ್ರೆಸೆನ್ಸ್ ನಿಜಕ್ಕೂ ನಂಬಲಾಗದಂತಿದೆ ಎಂದಿದ್ದಾರೆ. ಜೊತೆಗೆ ಉಪ್ಪಿಯಿಂದ ಕಲಿತದ್ದೇನು ಅನ್ನೋದನ್ನ ಕೂಡ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಯೆಸ್.. ನಮ್ಮ ಹೆಮ್ಮೆಯ ಕನ್ನಡಿಗ ಉಪ್ಪಿ ಸಹ ಲಿವಿಂಗ್ ಲೆಜೆಂಡ್ ರಜನೀಕಾಂತ್ ಬಗ್ಗೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. 25 ವರ್ಷಗಳ ಹಿಂದೆ ಮೊದಲ ಬಾರಿಗೆ ಅವ್ರನ್ನ ನಾ ನೋಡಿದೆ. ಅಂದಿನಿಂದ ಇಂದಿನವರೆಗೆ ಅವ್ರ ಎಲ್ಲಾ ನಡೆ, ನುಡಿ, ಆಚಾರ, ವಿಚಾರ, ಸಿನಿಮಾ ಕ್ಲಿಪಿಂಗ್ಸ್‌ನ ನೋಡ್ತಾ ಬರ್ತಿದ್ದೀನಿ. ಒಮ್ಮೆ ನೋಡಿದ್ರೆ 100 ಬಾರಿ ನೋಡಿದಂತಹ ಭಾವ. ಅಷ್ಟೇ ಅಲ್ಲ, ಅಂದಿನಿಂದ ನಾನು ಏಕಲವ್ಯನಾದ್ರೆ ಅವರು ನನ್ನ ಪಾಲಿಗೆ ದ್ರೋಣಾಚಾರ್ಯ. ಎರಡನೇ ಬಾರಿ ಅವ್ರನ್ನ ನಾ ಭೇಟಿ ಆದೆ. ಆ ದ್ರೋಣಾಚಾರ್ಯ ಏಕಲವ್ಯನ ಬೆರಳನ್ನ ಕೇಳಿದ್ರು. ಆದ್ರೆ ಈ ದ್ರೋಣಾಚಾರ್ಯ ನನ್ನ ಬೆರಳು ಹಿಡಿದು ಕೂಲಿ ಪ್ರಪಂಚಕ್ಕೆ ಕರೆದುಕೊಂಡು ಹೋದ್ರು ಅಂತ ಆ ಅನನ್ಯ ಕ್ಷಣಗಳನ್ನ ವಿವರಿಸಿದ್ರು.
ನಿಮ್ಮ ಜೇಬಲ್ಲಿ ಸಾವಿರ ಇದ್ರೆ ಮಾತ್ರ ಕೂಲಿ ಸಿನಿಮಾ ನೋಡಬಹುದು. ಹೌದು.. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗಲೇ ಇಲ್ಲ. ಸರ್ಕಾರ ಆರ್ಡರ್ ಪಾಸ್ ಮಾಡಿದ್ರೂ ಸಹ, ರಾಜ್ಯಪಾಲರಿಂದ ಅನುಮೋದನೆ ಆಗಿಲ್ಲ. ಹಾಗಾಗಿ ಇನ್ನೂ ನಮ್ಮ ಕರುನಾಡಲ್ಲಿ 200 ರೂಪಾಯಿ ಟಿಕೆಟ್ ಪ್ರೈಸ್ ಫಿಕ್ಸ್ ಆಗಿಲ್ಲ. ಸಿಂಗಲ್ ಸ್ಕ್ರೀನ್‌ಗಳಲ್ಲೇ ಟಿಕೆಟ್ ದರ 1000, 1200 ರೂಪಾಯಿ ಆಗಿದೆ. ಮುಕುಂದ ಥಿಯೇಟರ್‌ನಲ್ಲಿ 1200 ಕಮ್ಮಿ ಇಲ್ಲ ಟಿಕೆಟ್ ದರ. ತಾವರೆಕೆರೆ ಲಕ್ಷ್ಮೀ ಥಿಯೇಟರ್‌ನಲ್ಲಿ 1000 ರೂ ಡೈಮಂಡ್, 800 ರೂ ಸೆಕೆಂಡ್ ಕ್ಲಾಸ್ ಟಿಕೆಟ್ ಪ್ರೈಸ್ ಅಂದ್ರೆ ನೀವು ನಂಬಲೇಬೇಕು.
ಆಗಸ್ಟ್ 14ರಂದು ಮುಂಜಾನೆ 6.30ಕ್ಕೆ ಸ್ಪೆಷಲ್ ಫ್ಯಾನ್ಸ್ ಶೋಗಳು ಶುರುವಾಗಲಿದ್ದು, ಆನ್‌ಲೈನ್ ಟಿಕೆಟ್ ಬುಕಿಂಗ್ ನೀಡಿದ ಐದೇ ನಿಮಿಷದಲ್ಲಿ ಟಿಕೆಟ್ಸ್ ಎಲ್ಲಾ ಸೋಲ್ಡ್ ಔಟ್ ಆಗಿವೆ. ಇನ್ನು ಮಲ್ಟಿಪ್ಲೆಕ್ಸ್‌ನಲ್ಲಿ ಕೂಲಿ ವೀಕ್ಷಿಸಬೇಕು ಅಂದ್ರೆ ಕನಿಷ್ಟ 1500 ರೂಪಾಯಿ ಬೇಕು. ಕರ್ನಾಟಕದಲ್ಲಿ ಚೆನ್ನೈನ ಎವಿ ಮೀಡಿಯಾ ಸಂಸ್ಥೆ ಜೊತೆ ಜಯಣ್ಣ ಡಿಸ್ಟ್ರಿಬ್ಯೂಷನ್ ಮಾಡ್ತಿದ್ದು, ಪರಭಾಷಾ ಚಿತ್ರಗಳ ಹಾವಳಿ ದೀಪಾವಳಿಗಿಂತ ಜೋರು ಅನ್ನೋದು ಈ ಬಾರಿಯೂ ಪ್ರೂವ್ ಆಗ್ತಿದೆ.
ಅದೇನೇ ಇರಲಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರೋ ನಟ ರಜನೀಕಾಂತ್‌ಗೆ ಇಂದಿಗೂ ಅದೇ ಕ್ರೇಜ್, ಅದೇ ಡಿಮ್ಯಾಂಡ್. ಅವರೊಟ್ಟಿಗೆ ಪರಭಾಷಾ ಸೂಪರ್ ಸ್ಟಾರ್‌ಗಳ ದಂಡಿರೋದ್ರಿಂದ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಮಾತ್ರ ಗ್ಯಾರಂಟಿ ಎನ್ನಲಾಗ್ತಿದೆ. ಸೋ ಎಷ್ಟು ಕೋಟಿ ಲೂಟಿ ಮಾಡುತ್ತೆ ಅಂತ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್