ಕೂಲಿ ಲೋಕ ರಿವೀಲ್.. ಒಬ್ಬೊಬ್ಬರು ಒಂದೊಂದು ಮುತ್ತು

ತಲೈವಾ ರಜನಿ ಎದುರು ನಾಗಾರ್ಜುನ್ ಖಡಕ್ ವಿಲನ್

Untitled design 2025 08 03t154107.996

ದಿ ವೆಯ್ಟ್ ಈಸ್ ಓವರ್.. ಕೂಲಿ ವರ್ಲ್ಡ್‌ ಕೊನೆಗೂ ಅನಾವರಣಗೊಂಡಿದೆ. ಬಿಗ್ಗೆಸ್ಟ್ ಮಲ್ಟಿಸ್ಟಾರರ್‌ನಲ್ಲಿ ಒಬ್ಬೊಬ್ಬರೂ ಒಂದೊಂದು ಮುತ್ತುಗಳಾಗಿ ಹೊಳೆಯುತ್ತಿದ್ದಾರೆ. ಇಷ್ಟಕ್ಕೂ ಕಥೆ ಏನು..? ಮೇಕಿಂಗ್ ಹೇಗಿದೆ..? ಬ್ಯಾಗ್ರೌಂಡ್ ಖದರ್ ಜೊತೆ ಕೂಲಿಗಳ ರಿಯಲ್ ಖದರ್ ಹೇಗಿದೆ..? ನಮ್ಮ ಉಪ್ಪಿ-ರಚ್ಚು ರೋಲ್ಸ್ ಏನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.

ಇದು ಮೋಸ್ಟ್ ಅವೈಟೆಡ್ ಮೂವಿ ಆಫ್ ದಿ ಇಯರ್ ಕೂಲಿಯ ಹೈ ವೋಲ್ಟೇಜ್ ಟ್ರೈಲರ್ ಝಲಕ್. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ 171ನೇ ಸಿನಿಮಾ, ಸೌತ್‌ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಅನಿಸಿಕೊಂಡಿದೆ. ಸೌತ್‌ನಿಂದ ಬಾಲಿವುಡ್‌‌ವರೆಗೆ ಬೇರೆ ಬೇರೆ ಚಿತ್ರರಂಗಗಳ ಅತ್ಯದ್ಭುತ ಕಲಾವಿದರ ಸಮಾಗಮದಿಂದ ರಂಗೇರಿದೆ ಕೂಲಿ. ಅದ್ರಲ್ಲೂ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮತ್ತೊಂದು ಮೆಗಾ ಆ್ಯಕ್ಷನ್ ಎಂಟರ್‌ಟೈನರ್ ಆಗಿರೋದ್ರಿಂದ ಸಹಜವಾಗಿಯೇ ನೋಡುಗರ ನಾಡಿಮಿಡಿತ ಹೆಚ್ಚಿದೆ.

ಒಬ್ಬ ಹುಟ್ಟುತ್ತಲೇ ಆತ ಯಾರ ಕೈಯಲ್ಲಿ ಸಾಯಬೇಕು ಅನ್ನೋದು ಆತನ ತಲೆಯ ಮೇಲೆಯೇ ಬರೆದಾಗಿರುತ್ತದೆ. ಒಬ್ಬ ವ್ಯಕ್ತಿಯನ್ನ ಈ ಲೋಕದಿಂದ ಟ್ರೇಸ್ ಮಾಡೋಕೆ ಆಗದೇ ಇರೋ ರೇಂಜ್‌ಗೆ ನೆಲಸಮಾಧಿ ಮಾಡ್ತಾರೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದೂ ಇಲ್ಲ. ಕೇವಲ ಒಂದು ದೊಡ್ಡ ಕಂಪೆನಿ ನಡೆಸಿದ ಮಾತ್ರಕ್ಕೆ, ಅದೇ ನೆಟ್ವರ್ಕ್‌ನಿಂದ ಮಾಲೀಕರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯೋಕೆ ಸಾಧ್ಯವಿಲ್ಲ. ಯಾರಿಗೂ ತಿಳಿಯದಂತೆ ಅವರು ಬೇರೇನೋ ಅಲ್ಲಿ ಮಾಡ್ತಿದ್ದಾರೆ. ಅಲ್ಲಿರೋ 14 ಸಾವಿರದ 400 ಮಂದಿ ಕೂಲಿಗಳ ಪೈಕಿ ಒಬ್ಬೇ ಒಬ್ಬ ಕೂಲಿ ಅದನ್ನ ಕಂಡುಹಿಡಿಯೋ ಸಾಹಸ ಮಾಡ್ತಾನೆ. ಅದೇ ಕೂಲಿ ಚಿತ್ರದ ಒನ್‌ಲೈನ್ ಸ್ಟೋರಿ.

ಇಲ್ಲಿ 14,400 ಮಂದಿಗೆ ಒಬ್ಬೇ ಒಬ್ಬ ಕೂಲಿ ಗ್ಯಾಂಗ್‌ ಲೀಡರ್. ಆತನೇ ದೇವ ಅಲಿಯಾಸ್ ತಲೈವಾ ರಜನೀಕಾಂತ್. ಯೆಸ್.. ಹೀರೋ ಆಗಿ ಸೂಪರ್ ಸ್ಟಾರ್ ಮಿಂಚ್ತಿದ್ರೆ, ಖಡಕ್ ಖಳನಾಯಕನಾಗಿ ಟಾಲಿವುಡ್ ಕಿಂಗ್ ನಾಗಾರ್ಜುನ್ ಖದರ್ ಸಖತ್ ಜೋರಿದೆ. ಆತನ ಪಾರ್ಟನರ್ ಆಗಿ ಮೈಯೆಲ್ಲಾ ಟ್ಯಾಟೂಗಳಿಂದ ದಹಾ ಅನ್ನೋ ಪಾತ್ರದಲ್ಲಿ ಆಮೀರ್ ಖಾನ್ ಕಣ್ಣು ಕುಕ್ಕುವಂತೆ ಕಾಣಸಿಗ್ತಿದ್ದಾರೆ.

ಮಲಯಾಳಂನ ಸೌಬಿನ್, ತಮಿಳಿನ ಸತ್ಯರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದು, ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಲಿ ವರ್ಲ್ಡ್‌ನಲ್ಲಿ ಕಾಲೇಶನಾಗಿ ಕಮಾಲ್ ಮಾಡ್ತಿದ್ದಾರೆ. ಉಪ್ಪಿಯ ಖದರ್ ಟಾಲಿವುಡ್‌ನ ಸನ್ ಆಫ್ ಸತ್ಯಮೂರ್ತಿ ಚಿತ್ರದ ದೇವರಾಜ್ ನಾಯ್ಡು ಪಾತ್ರಕ್ಕಿಂತ ಜೋರಿದ್ದು, ಕಣ್ಣಲ್ಲೇ ತಮ್ಮ ನಟನಾ ಗಮ್ಮತ್ತು ತೋರಿದ್ದಾರೆ ನಮ್ಮ ಆಲ್‌ಟೈಂ ಬುದ್ದಿವಂತ ಉಪ್ಪಿ.

ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಟ್ರೈಲರ್‌‌ನ ಒಂದು ಸೀಕ್ವೆನ್ಸ್‌‌ನಲ್ಲಿ ಕಾಣಸಿಕೊಂಡಿದ್ದು, ತಾನು ಮಾಡಿರೋ ರಿಸರ್ಚ್‌ ಫೈಲ್‌ವೊಂದನ್ನು ಹಿಡಿದು ಕಂಪೆನಿಯಿಂದ ಹೊರಗೆ ಬರ್ತಿರುವಂತೆ ಕಾಣ್ತಾರೆ. ರಚಿತಾ ರೋಲ್ ಇಲ್ಲಿಯವರೆಗೂ ಗೌಪ್ಯವಾಗಿಟ್ಟಿದ್ದ ಟೀಂ, ಇದೀಗ ಟ್ರೈಲರ್ ಜೊತೆಗೆ ವಿಕಿಪೀಡಿಯಾ ಪೇಜ್‌ನಲ್ಲೂ ಅಪ್ಡೇಟ್ ಮಾಡಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್‌‌ನಡಿ ತಯಾರಾಗ್ತಿರೋ ಬಿಗ್ಗೆಸ್ಟ್ ಸಿನಿಮಾ ಇದಾಗಿದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದೆ.

ಕಮಲ್ ಹಾಸನ್ ಪುತ್ರ ಶ್ರುತಿ ಹಾಸನ್ ಇಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದು, ರಜನೀಕಾಂತ್- ಕಮಲ್ ಸ್ನೇಹದ ಪ್ರತೀಕ ಅನ್ನುವಂತೆ ಚಿತ್ರದ ಕಥೆಯಲ್ಲೂ ಅದೇ ರಿಯಾಲಿಟಿ ಎತ್ತಿಹಿಡಿಯಲಾಗಿದೆ. ಇನ್ನು ಕಿಂಗ್ ನಾಗಾರ್ಜುನ್ ಇತ್ತೀಚೆಗೆ ಕುಬೇರ ಚಿತ್ರದಿಂದ ಎಲ್ಲರ ಮನೆ ಮಾತಾಗಿದ್ದರು. ಅದರ ಬೆನ್ನಲ್ಲೀಗ ಕೂಲಿಯಿಂದ ಮತ್ತೊಮ್ಮೆ ಬಾಕ್ಸ್ ಆಫೀಸ್‌‌ ಟಾಕ್ ಆಗುವ ಸೂಚನೆ ನೀಡಿದ್ದಾರೆ.

ಇಷ್ಟು ಮಂದಿ ಸ್ಟಾರ್‌‌ಗಳಿರೋ ಈ ಸಿನಿಮಾದಲ್ಲಿ ಕನ್ನಡತಿ ಪೂಜಾ ಹೆಗ್ಡೆ ಕೂಡ ಮೋನಿಕಾ ಸಾಂಗ್‌ನಿಂದ ಚಿತ್ರದ ಗ್ಲಾಮರ್ ಹೆಚ್ಚಿಸಿದ್ದಾರೆ. ಆ ಸಾಂಗ್ ಈಗಾಗ್ಲೇ ಎಲ್ಲರೂ ಗುನುಗುವಂತಾಗಿದ್ದು, ಅನಿರುದ್ದ್ ರವಿಚಂದರ್ ಮ್ಯೂಸಿಕ್ ಸಖತ್ ಕಿಕ್ ಕೊಡ್ತಿದೆ. ಪವರ್ ಹೌಸ್ ಸಾಂಗ್ ಸಹ ಹಿಟ್ ಆಗಿದ್ದು, ಟ್ರೈಲರ್‌‌ನಲ್ಲಿರೋ ಬ್ಯಾಗ್ರೌಂಡ್ ಮ್ಯೂಸಿಕ್ ಮಜಬೂತಾಗಿದೆ. ಗಿರೀಶ್ ಗಂಗಾಧರನ್ ಸಿನಿಮಾಟೋಗ್ರಫಿ ಚಿತ್ರಕ್ಕೆ ಹೈಲೆಟ್ ಆಗಿದ್ದು, ಸುಮಾರು 400 ಕೋಟಿ ಬಜೆಟ್‌‌ನಲ್ಲಿ ಕೂಲಿ ತಯಾರಾಗಿದೆ ಎನ್ನಲಾಗ್ತಿದೆ.

ಅಂದಹಾಗೆ ಕೂಲಿ ಸಿನಿಮಾದ ಬಹುತೇಕ ಬಜೆಟ್ ಚಿತ್ರದಲ್ಲಿರೋ ಸ್ಟಾರ್‌ಗಳ ಸಂಭಾವನೆಗೆ ಮುಡಿಪಾಗಿಡಲಾಗಿದೆ ಎನ್ನಲಾಗ್ತಿದೆ. ಹೌದು.. ಸುಮಾರು 10 ಮಂದಿ ಬಿಗ್ ಸ್ಟಾರ್ಸ್‌ ಇರೋ ಸಿನಿಮಾದಲ್ಲಿ ಅವರುಗಳ ರೆಮ್ಯುನರೇಷನ್‌ಗಾಗಿಯೇ ನಿರ್ಮಾಣ ಸಂಸ್ಥೆ, ಮೇಕಿಂಗ್‌ಗಿಂತ ಹೆಚ್ಚಿನ ಹಣ ವ್ಯಯಿಸಿದೆಯಂತೆ. ಹಾಗಂತ ನಿರ್ದೇಶಕ ಲೋಕೇಶ್ ಕನಕರಾಜ್ ಸಿನಿಮಾ ಮೇಕಿಂಗ್‌ನ ಏನೂ ಕಳಪೆ ಮಾಡಿಲ್ಲ. ತುಂಬಾ ರಿಚ್ ಆಗಿ ಮೂಡಿಬಂದಿದ್ದು, ಇದೇ ಆಗಸ್ಟ್ 14ಕ್ಕೆ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ ಕೂಲಿ.

ಕೂಲಿ ಸಿನಿಮಾ ದಿನಗೂಲಿ ಮಾಡುವ ಅಥ್ವಾ ಸಣ್ಣಪುಟ್ಟ ಕಂಪೆನಿಗಳಲ್ಲಿ ಕೆಲಸ ಮಾಡುವಂತಹ ಎಲ್ಲರಿಗೂ ಕನೆಕ್ಟ್ ಆಗಲಿದ್ದು, ಇತ್ತೀಚೆಗೆ ನಡೆದ ಅನ್‌ಲೀಶ್ ಕೂಲಿ ಫಂಕ್ಷನ್‌‌ನಲ್ಲಿ ತಲೈವಾ ರಜನೀಕಾಂತ್ ಜೊತೆ ಆಮೀರ್ ಖಾನ್, ನಾಗಾರ್ಜುನ್, ಉಪೇಂದ್ರ, ಶ್ರುತಿ ಹಾಸನ್, ಸೌಬಿನ್ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಫ್ಯಾನ್ಸ್ ಜೊತೆ ಚಿತ್ರಪ್ರೇಮಿಗಳಿಗೆ ದರ್ಶನ ನೀಡಿದ್ದಾರೆ. ಸಿನಿಮಾ ಕುರಿತು ಸಾಕಷ್ಟು ಇನ್‌ಸೈಡ್ ಮಾಹಿತಿಗಳನ್ನು ಕೂಡ ಹಂಚಿಕೊಂಡಿದ್ದಾರೆ. ಸನ್ ಪಿಕ್ಚರ್ಸ್‌ ಈ ಬಾರಿ ಕೂಡ ನೂರಾರು ಕೋಟಿ ಲೂಟಿ ಮಾಡಲಿದ್ದು, ವರ್ಲ್ಡ್‌ವೈಡ್ ತಲೈವಾ ಫ್ಯಾನ್ಸ್ ಕೂಲಿಯನ್ನ ಸ್ವಾಗತಿಸಲು ಸಜ್ಜಾಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version