‘ಕಂಗ್ರಾಜುಲೇಷನ್ಸ್ ಬ್ರದರ್’.. ರಿಯಲ್ ಬ್ರದರ್ ಜಮೀರ್

ಮಗನ ಚಿತ್ರಕ್ಕೆ ಶುಭ ಕೋರದ ಜಮೀರ್‌‌ ಉದಾರತೆ ನೋಡಿ

Untitled design (81)

ಕಂಗ್ರಾಜುಲೇಷನ್ಸ್ ಬ್ರದರ್.. ಜಮೀರ್ ಹೇಳಿದ್ದ ಡೈಲಾಗ್ ಇಂದು ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಇತ್ತೀಚೆಗೆ ಟ್ರೈಲರ್ ಕೂಡ ಲಾಂಚ್ ಆಗಿದ್ದು, ಇಬ್ಬರು ನಟಿಯರ ಜೊತೆ ಹೀರೋ ರೊಮ್ಯಾನ್ಸ್ ಮಾಡೋ ಯೂತ್‌‌ಫುಲ್ ಸಬ್ಜೆಕ್ಟ್‌ಗೆ ಸ್ವತಃ ರಿಯಲ್ ಬ್ರದರ್ ಜಮೀರ್ ಸಾಥ್ ನೀಡಿದ್ದಾರೆ. ಟ್ರೈಲರ್ ಜೊತೆ ಜಮೀರ್ ಖಾನ್ ಹೇಳಿದ್ದೇನು ಅನ್ನೋ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.

ಕಂಗ್ರಾಜುಲೇಷನ್ಸ್ ಬ್ರದರ್.. ವಿಧಾನಸೌಧದ ಮುಂದೆ ಎಣ್ಣೆ ಬಾಟಲ್ ಮಾದರಿಯ ಫ್ಲೆಕ್ಸ್ ಹಿಡಿದು, ಪ್ರಮೋಷನ್ಸ್ ಮಾಡಲಿ ಹೋಗಿ ಫಜೀತಿ ಮಾಡಿಕೊಂಡಿದ್ದ ಚಿತ್ರತಂಡ. ಪ್ರತಾಪ್ ಗಂಧರ್ವ ನಿರ್ದೇಶನದ ಈ ಸಿನಿಮಾಗೆ ಸ್ಟೇಟ್ ಅವಾರ್ಡ್‌ ವಿನ್ನರ್ ಅಲೆಮಾರಿ ಸಂತು ಕಥೆ ಬರೆದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಕ್ಷಿತ್ ನಾಗ್ ಈ ಚಿತ್ರದಿಂದ ಬೆಳ್ಳಿಪರದೆಯಲ್ಲಿ ಹೀರೋ ಆಗಿ ಮಿಂಚಲು ಬರ್ತಿರೋದು ವಿಶೇಷ.

‘ಕಂಗ್ರಾಜುಲೇಷನ್ಸ್ ಬ್ರದರ್’.. ರಿಯಲ್ ಬ್ರದರ್ ಜಮೀರ್

ಯೂತ್‌‌ಫುಲ್ ಟ್ರೈಲರ್‌ಗೆ ಜಮೀರ್ ಖಾನ್ ಫುಲ್ ಫಿದಾ

ಪಕ್ಕಾ ಯೂತ್‌‌ಫುಲ್ ಎಂಟರ್‌ಟೈನರ್ ಸಿನಿಮಾ ಇದಾಗಿದ್ದು, ಇಂದಿನ ಹದಿಹರೆಯದ ಮನಸ್ಸುಗಳ ಯಂಗ್ ಜನರೇಷನ್ ಈ ಚಿತ್ರದ ಟಾರ್ಗೆಟ್ ಆಡಿಯೆನ್ಸ್. ಹೌದು.. ಲವ್, ಡೇಟ್, ಮದ್ವೆ, ಡಬಲ್ ಡೇಟ್, ಡಬಲ್ ಮದ್ವೆ ಹೀಗೆ ಸಾಕಷ್ಟು ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಸಂಜನಾ ಡೋಸ್ ಹಾಗೂ ಅನುಷಾ ಇಬ್ಬರಿಬ್ಬರು ನಟಿಮಣಿಯರಿದ್ದು, ಇಬ್ಬರ ಜೊತೆ ರಕ್ಷಿತ್ ಡಬಲ್ ರೊಮ್ಯಾನ್ಸ್ ಮಾಡಲಿದ್ದಾರೆ.

ಈಗಾಗ್ಲೇ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಎಲ್ಲರ ದಿಲ್ ದೋಚಿದ್ದು, ಇತ್ತೀಚೆಗೆ ರಿಯಲ್ ಬ್ರದರ್ ಜಮೀರ್ ಖಾನ್ ಕೂಡ ಟ್ರೈಲರ್ ನೋಡಿ, ಚಿತ್ರತಂಡಕ್ಕೆ ಕಂಗ್ರಾಜುಲೇಷನ್ಸ್ ಬ್ರದರ್ಸ್‌ ಎಂದಿದ್ದಾರೆ.

ಮಗನ ಚಿತ್ರಕ್ಕೆ ಶುಭ ಕೋರದ ಜಮೀರ್‌‌ ಉದಾರತೆ ನೋಡಿ

ಇಬ್ಬರಿಬ್ಬರು ಚೆಲುವೆಯರ ಜೊತೆ ರಕ್ಷಿತ್ ಡಬಲ್ ಧಮಾಕ

ಯೆಸ್.. ತಮ್ಮ ಮಗ ಝೈದ್ ಖಾನ್ ಚಿತ್ರಕ್ಕೆ ಕೂಡ ಶುಭ ಕೋರದ ಜಮೀರ್ ಖಾನ್ ಅವರು, ಈ ಕಂಗ್ರಾಜುಲೇಷನ್ಸ್ ಬ್ರದರ್ ಟೀಂಗೆ ಶುಭ ಹಾರೈಸಿ, ಸಿನಿಮಾ ನೋಡ್ತೀನಿ ಅಂದಿರೋದು ಇಂಟರೆಸ್ಟಿಂಗ್ ಅನಿಸಿದೆ. ಮನೆ ಮಗನಿಗಿಂತ ಇತರರಿಗೆ ಅದ್ರಲ್ಲೂ ಹೊಸಬರಿಗೆ ಬೆನ್ನು ತಟ್ಟುವ ಜಮೀರ್ ಉದಾರತೆ ನಿಜಕ್ಕೂ ಮೆಚ್ಚುವಂತದ್ದು.

ಅಂದಹಾಗೆ ಈ ಸಿನಿಮಾದ ಮೂಲಕ ಸೀರಿಯಲ್‌ ಹೀರೋ ರಕ್ಷಿತ್ ನಾಗ್ ಚಿತ್ರರಂಗಕ್ಕೆ ಬರೀ ಹೀರೋ ಆಗಿ ಲಾಂಚ್ ಆಗ್ತಿಲ್ಲ. ಬದಲಿಗೆ ಇಡೀ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಾಂಗ್ಸ್ ಬರೆದಿದ್ದಾರೆ. ಅವುಗಳನ್ನ ಹಾಡಿದ್ದಾರೆ ಕೂಡ. ಇಷ್ಟು ಟ್ಯಾಲೆಂಟ್ ಇರೋ ರಕ್ಷಿತ್‌ಗೆ ಜನ ಕೈ ಹಿಡಿಯಬೇಕಿದೆ. ಅಂದಹಾಗೆ ನಮ್ಮ ಕನ್ನಡಿಗರು ಸದಭಿರುಚಿಯ ಚಿತ್ರಗಳನ್ನ ಎಂದೂ ಬಿಟ್ಟುಕೊಟ್ಟಿಲ್ಲ.

ಹಾಗಾಗಿ ಇದನ್ನ ಕೂಡ ಕೈಹಿಡಿಯುತ್ತಾರೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ. ಪೆನ್ ಅಂಡ್ ಪೇಪರ್ ಸ್ಟುಡಿಯೋಸ್ ಬ್ಯಾನರ್‌‌ ಜೊತೆ ಕಲ್ಲೂರ್ ಸಿನಿಮಾಸ್ ಕೂಡ ಕೈ ಜೋಡಿಸಿ ತಯಾರಿಸಿರೋ ಈ ಚಿತ್ರ ನವೆಂಬರ್ 21ಕ್ಕೆ ತೆರೆಗಪ್ಪಳಿಸುತ್ತಿದೆ.

 

 

 

Exit mobile version