ಚಿಕ್ಕಣ್ಣನ ಕಥೆ..ಕಿಚ್ಚ-ಶಿವಣ್ಣ, ಡಿಕೆ ಬ್ರದರ್ಸ್ ಜೊತೆ..!

ಅಕ್ಟೋಬರ್ 5ಕ್ಕೆ ಒಂದೇ ವೇದಿಕೆಯಲ್ಲಿ ದಿಗ್ಗಜರ ಸಂಗಮ

Untitled design 2025 09 19t172559.878

ಜೋಡೆತ್ತು ಅಂದಾಕ್ಷಣ ಥಟ್ ಅಂತ ನೆನಪಿಗೆ ಬರೋದೇ ಯಶ್-ದರ್ಶನ್. ಹೌದು.. ಮಂಡ್ಯ ಎಂಪಿ ಎಲೆಕ್ಷನ್ಸ್ ಟೈಮ್ನಲ್ಲಿ ಸುಮಕ್ಕನ ಬೆನ್ನಿಗೆ ನಿಂತಿತ್ತು ಜೋಡೆತ್ತು. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಅಂಥದ್ದೊಂದು ಸಿನಿಮಾ ಬರ್ತಿದ್ದು, ಅದ್ರ ಫಸ್ಟ್ ಲುಕ್ ಟೀಸರ್ ಲಾಂಚ್ ಇವೆಂಟ್‌ಗೆ ಚಿತ್ರರಂಗ ಹಾಗೂ ರಾಜಕಾರಣದ ಸೂಪರ್ ಜೋಡಿಗಳ ಸಮಾಗಮ ಆಗ್ತಿದೆ. ಡಿಕೆ ಬ್ರದರ್ಸ್ ಹಾಗೂ ಕಿಚ್ಚ-ಶಿವಣ್ಣನ ಸ್ಪೆಷಲ್ ಖಬರ್ ಇಲ್ಲಿದೆ.

ರೈತ.. ಈ ದೇಶದ ಬೆನ್ನೆಲುಬು. ಆಪ್ತಮಿತ್ರ. ಅವರು ಇಲ್ಲ ಅಂದ್ರೆ ಕಷ್ಟ ಕಷ್ಟ. ಈಗೀಗ ತಂತ್ರಜ್ಞಾನ ಬೆಳೆದಂತೆ ಸಾವಯವ ಕೃಷಿ ಕಡಿಮೆ ಆಗಿ, ಟ್ರ್ಯಾಕ್ಟರ್, ಟಿಲ್ಲರ್ಗಳಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.

ಅರೇ ಕೃಷಿಕನ ಬಗ್ಗೆ ಯಾಕ್ ಹೇಳ್ತಿದ್ದೀವಿ ಅಂತೀರಾ..? ಕಂಡಿತಾ ಹೌದು. ನಾವ್ ಹೇಳೋಕೆ ಹೊರಟಿರೋ ಈ ಸ್ಟೋರಿಗೂ ಕೃಷಿಕನಿಗೂ ಲಿಂಕ್ ಇದೆ. ಟಿಪಿಕಲ್ ಹಳ್ಳಿ ಸೊಗಡಿನ ಚಿತ್ರ ಇದಾಗಲಿದ್ದು, ಉಪಾಧ್ಯಕ್ಷ ಚಿಕ್ಕಣ್ಣ ಈ ಚಿತ್ರದ ನಾಯಕನಟ.

ಅಯೋಗ್ಯ ಖ್ಯಾತಿಯ ಎಸ್ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾಗೆ ಫೈಟರ್ ಚಿತ್ರದ ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಶೇಖರ್ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಈ ವಿಷಯ ಹೊರಬಿದ್ದಿತ್ತು. ಆದ್ರೆ ಆ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಇದೇ ಅಕ್ಟೋಬರ್ 5ಕ್ಕೆ ಧಾಮ್ ಧೂಮ್ ಅಂತ ದೊಡ್ಡದಾಗಿ ನಡೆಯಲಿದೆ. ಅಂದೇ ಟೀಸರ್ ಜೊತೆ ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆ.

ಅಂದಹಾಗೆ ಚಿತ್ರದ ಟೀಸರ್ ಲಾಂಚ್ ಫಂಕ್ಷನ್ ರಾಜಕೀಯ ಹಾಗೂ ಚಿತ್ರರಂಗದ ಮಹಾನ್ ಕುಚಿಕುಗಳಿಂದ ರಂಗೇರಲಿದೆ. ಹೌದು.. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಇಬ್ಬರೂ ಕನಕಪುರದ ಬಂಡೆಗಳು. ಕಾಂಗ್ರೆಸ್ ಪಕ್ಷಕ್ಕೆ ಈ ಡಿಕೆ ಬ್ರದರ್ಸ್ ಒಂಥರಾ ರೈಟ್ ಬ್ರದರ್ಸ್. ಅದೇ ರೀತಿ ಶಿವರಾಜ್ಕುಮಾರ್- ಸುದೀಪ್ ಕೂಡ ಸಿಕ್ಕಾಪಟ್ಟೆ ಆತ್ಮೀಯರು. ಒಟ್ಟಿಗೆ ಒಂದೇ ಸಿನಿಮಾ ಮಾಡಿದ್ರೂ ಸಹ, ಇವರಿಬ್ಬರ ನಡುವೆ ಒಂದೊಳ್ಳೆ ಬಾಂಡಿಂಗ್ ಇದೆ. ಹಾಗಾಗಿ ಈ ನಾಲ್ಕೂ ಮಂದಿ ಚಿಕ್ಕಣ್ಣನ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರಂತೆ.

ಅಯೋಗ್ಯ, ಅಯೋಗ್ಯ-2 ಹಾಗೂ ಮದಜಗ ಫೇಮ್ ಡೈರೆಕ್ಟರ್ ಮಹೇಶ್ ಕುಮಾರ್ ಏನೇ ಮಾಡಿದ್ರೂ ಡಿಫರೆಂಟ್ ಆಗಿ ಮಾಡ್ತಾರೆ. ಇದೀಗ ಈ ರಾಜಕೀಯ ಹಾಗೂ ಚಿತ್ರರಂಗದ ಸ್ಟಾರ್ ಗಳನ್ನ ಕರೆಸಿ, ಚಿಕ್ಕಣ್ಣ ನಟನೆಯ ಬಹುನಿರೀಕ್ಷಿತ ಚಿತ್ರದ ಟೀಸರ್ ಲಾಂಚ್ ಮಾಡಿಸ್ತಿರೋದು ಇಂಟರೆಸ್ಟಿಂಗ್. ನಮ್ಮ ಹಳ್ಳಿಗಳ ಸೊಬಗು, ರೈತ ಕುಟುಂಬದ ಸೊಗಡು ಇರೋ ಈ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಹಳ್ಳಿಯೊಂದರ ಜೊತೆಗಿನ ಸಂಬಂಧವನ್ನು ತೋರಿಸಲಾಗುತ್ತಂತೆ. ಆ ನಿಟ್ಟಿನಲ್ಲಿ ಚಿತ್ರದ ಶೂಟಿಂಗ್ ಶುರುವಾಗೋಕೆ ಮೊದಲೇ ಟಾಕ್ ಆಫ್ ದಿ ಟೌನ್ ಆಗಿದೆ ಈ ಸಿನಿಮಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version