ಅಯೋಗ್ಯ ಸಾರಥಿ.. ಫೈಟರ್ ಅನ್ನದಾತ.. ಚಿಕ್ಕು ನ್ಯೂ ಪ್ರಾಜೆಕ್ಟ್‌‌

ಕಳೆದ ವರ್ಷ ಉಪಾಧ್ಯಕ್ಷ.. ಈ ವರ್ಷ ಡಬ್ಕಿ ಡಬಲ್ ಧಮಾಕ

Untitled design (49)

ಮದುವೆ ಫಿಕ್ಸ್ ಆಗ್ತಿದ್ದಂತೆ ಚಿಕ್ಕಣ್ಣನ ಸಿನಿಮೋತ್ಸಾಹ ಡಬಲ್ ಆಗಿಬಿಟ್ಟಿದೆ. ಹೌದು, ಲಕ್ಷ್ಮೀಪುತ್ರ ಚಿತ್ರದ ಶೂಟಿಂಗ್‌‌ನಲ್ಲಿ ಬ್ಯುಸಿ ಇರೋ ಚಿಕ್ಕಣ್ಣ, ಮತ್ತೊಂದು ಮೆಗಾ ಕಾಂಬೋ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಷ್ಟಕ್ಕೂ ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಇನ್ಮೇಲೆ ಕಮೆಡಿಯನ್ ಆಗಿ ನಟಿಸಲ್ವಾ ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕಳೆದ ವರ್ಷ ಉಪಾಧ್ಯಕ್ಷರ ಆಗಮನದಿಂದ ಸ್ಯಾಂಡಲ್‌ವುಡ್ ರಂಗೇರಿತ್ತು. ಹೌದು, ಚಿಕ್ಕಣ್ಣ ಹೀರೋ  ಆಗಿ ನಟಿಸಿದ್ದ, ಉಮಾಪತಿ ಶ್ರೀನಿವಾಸ್ ನಿರ್ಮಾಣದ ಉಪಾಧ್ಯಕ್ಷ ಚಿತ್ರ, ಬಿಗ್ಗೆಸ್ಟ್ ಹಿಟ್ ಮೂಲಕ ನ್ಯೂ ಇಯರ್‌‌ನ ಶುಭಾರಂಭ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಉಪಾಧ್ಯಕ್ಷ. ಅದಾದ ಬಳಿಕ ಕಥೆಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿರೋ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡ್ತಿದ್ದಾರೆ. ಅವುಗಳಿಗೆ ಗ್ರೀನ್ ಸಿಗ್ನಲ್ ಕೂಡ ನೀಡ್ತಿದ್ದಾರೆ.

ಅದರಲ್ಲೂ ಮದುವೆ ಫಿಕ್ಸ್ ಆದ ಮೇಲೆ ಅಂತೂ ಚಿಕ್ಕಣ್ಣನ ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಿದೆ. ಪಾವನಾ ಗೌಡ ಅನ್ನೋ ಮಂಡ್ಯ ಹೈದೆಯ ಕೈ ಹಿಡಿಯುತ್ತಿರೋ ಚಿಕ್ಕು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಇದ್ರಿಂದ ಚಿಕ್ಕು ಸಿನಿಮೋತ್ಸಾಹದ ಜೊತೆ ಜೀವನೋತ್ಸಾಹ ಕೂಡ ಹೆಚ್ಚಿರೋದು ಎದ್ದು ಕಾಣ್ತಿದೆ.

ಸದ್ಯ ಎ.ಪಿ. ಅರ್ಜುನ್‌‌ ನಿರ್ಮಾಣದ ಲಕ್ಷ್ಮೀಪುತ್ರ ಸಿನಿಮಾದಲ್ಲಿ ಬ್ಯುಸಿ ಇರೋ ಚಿಕ್ಕಣ್ಣ, ಅದರ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾಗೆ ಓಕೆ ಅಂದಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ತಿರೋ ಚಿಕ್ಕು, ಅಷ್ಟೇ ವಿಭಿನ್ನ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದೇಸಿ ಸೊಗಡಿನ ಈ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಯೋಗ್ಯ ಹಾಗೂ ಮದಗಜ ಅನ್ನೋ ಹಿಟ್ ಚಿತ್ರಗಳನ್ನ ನೀಡಿರೋ ಮಹೇಶ್, ಸದ್ಯ ಅಯೋಗ್ಯ-2 ಚಿತ್ರದ ಶೂಟಿಂಗ್ ಕೂಡ ಬಹುತೇಕ ಮುಗಿಸಿದ್ದಾರೆ.

ಇದೀಗ ಚಿಕ್ಕಣ್ಣ ನಾಯಕನಟನಾಗಿ ಬಣ್ಣ ಹಚ್ಚಲಿರೋ ಮೂರನೇ ಸಿನಿಮಾಗೆ ಮಹೇಶ್ ನಿರ್ದೇಶನ ಮಾಡಲಿದ್ದಾರೆ. ಇದು ಅಯೋಗ್ಯ ಫೇಮ್ ಮಹೇಶ್ ನಾಲ್ಕನೇ ಸಿನಿಮಾ. ಅಂದಹಾಗೆ ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರವನ್ನು ನಿರ್ಮಿಸಿದ್ದ ಕಟ್ಟಿಗೇನಹಳ್ಳಿ ಸೋಮಶೇಖರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ  ಮುಹೂರ್ತ ಅಕ್ಟೋಬರ್‌‌ನಲ್ಲಿ ನೆರವೇರಲಿದ್ದು, ಅದೇ ದಿನ ಶೀರ್ಷಿಕೆ ಕೂಡ ಅನಾವರಣಗೊಳ್ಳಲಿದೆಯಂತೆ. ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್‌‌ನಡಿ ಫೈಟರ್ ಸೋಮಣ್ಣ ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳಿದ್ದಾರೆ.

ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ವಿ. ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಸಂಭಾಷಣೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಉಳಿದ ಸ್ಟಾರ್‌ಕಾಸ್ಟ್ ಹಾಗೂ ಟೆಕ್ನಿಕಲ್ ಟೀಂ ಮಾಹಿತಿ ಸದ್ಯದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಮಹೇಶ್ ಏನೇ ಮಾಡಿದ್ರೂ ಅರ್ಥಪೂರ್ಣವಾಗಿ ಮಾಡ್ತಾರೆ. ಹಾಗಾಗಿಯೇ ಒಂದೊಳ್ಳೆ ವಿಡಿಯೋ ಮೂಲಕ ಚಿಕ್ಕಣ್ಣ-ಸೋಮಣ್ಣನ ಜೊತೆ ಕೈ ಜೋಡಿಸಿದ್ದಾರೆ.

Exit mobile version