ಮ್ಯೂಸಿಕಲಿ ಮ್ಯಾಜಿಕ್ ಮಾಡ್ತಿರೋ ಗೋಲ್ಡನ್ ಮೆಗಾಸ್ಟಾರ್ ಗಣೇಶ್ ನಟನೆಯ ಬೃಂದಾವಿಹಾರಿ ಸಿನಿಮಾಗೆ ಸೆನ್ಸಾರ್ ಕ್ಲೀನ್ U/A ಸರ್ಟಿಫಿಕೇಟ್ ನೀಡಿದೆ. ಹಾಗಾದ್ರೆ ಎಷ್ಟು ಗಂಟೆ ಎಷ್ಟು ನಿಮಿಷ ರನ್ ಟೈಂ ಅನ್ನೋ ನಿಮ್ಮ ಕ್ಯೂರಿಯಾಸಿಟಿ ಜೊತೆಗೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿರೋ ಪ್ರೀ-ರಿಲೀಸ್ ಇವೆಂಟ್ ಧಮಾಕ ಅಪ್ಡೇಟ್ಸ್ ಇಲ್ಲಿದೆ ನೋಡಿ.
- ಬೃಂದಾವಿಹಾರಿಗೆ U/A ಪತ್ರ.. 2 ಗಂಟೆ 56 ನಿಮಿಷ ರನ್ ಟೈಂ
- ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್
- ಸಿನಿಮಾ ಸ್ಟಾರ್ಸ್ & ರಾಜಕಾರಣಿಗಳ ಸಮೃದ್ಧ ಸಮಾಗಮ..!
- ಮ್ಯೂಸಿಕಲಿ ಮ್ಯಾಜಿಕ್.. ನೋ ಟ್ರೈಲರ್.. ಸಾಂಗ್ಸ್ ಸಂಭ್ರಮ
ಬೃಂದಾವಿಹಾರಿ.. ಫ್ಯಾಮಿಲಿ ಆಡಿಯೆನ್ಸ್‌ಗೆ ಒಂದೊಳ್ಳೆ ಫೀಲ್ ಗುಡ್ ಅನುಭವ ನೀಡೋಕೆ ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಇಬ್ಬರಿಬ್ಬರು ನಟಿಮಣಿಯರ ಜೊತೆ ಬರ್ತಿರೋ ಸಿನಿಮಾ. ಇದೇ ಅಕ್ಟೋಬರ್ 16ಕ್ಕೆ ಚಿತ್ರ ವರ್ಲ್ಡ್‌ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಈಗಾಗ್ಲೇ ಐದೈದು ಹಾಡುಗಳಿಂದ ಸಿಕ್ಕಾಪಟ್ಟೆ ಮ್ಯಾಜಿಕ್ ಮಾಡ್ತಿದೆ. ಹೌದು.. ಶ್ರೀನಿವಾಸ್ ರಾಜು ಕೃಷ್ಣಂ ಪ್ರಣಯ ಸಖಿ ಬಳಿಕ ಗಣಿ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆಯ ಸಾಂಗ್ಸ್ ಸಖತ್ ಹಂಗಾಮ ಮಾಡ್ತಿವೆ.
ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಭಕ್ತಿ ಹಾಗೂ ಭಾವದ ಸಂಗಮದಿಂದ ಕೂಡಿದಂತಿವೆ. ಕಣ್ಮನ ತಣಿಸುವಂತಹ ಅದ್ಭುತ ಸಾಂಗ್ಸ್ ಬೃಂದಾವಿಹಾರಿಯ ಅಂದ ಚೆಂದ ಹೆಚ್ಚಿಸಿವೆ. ಗಣೇಶ್ ಜೊತೆ ಮಲಯಾಳಂ ಚೆಲುವೆ ಮಾಳವಿಕಾ ಶರ್ಮಾ ಹಾಗೂ ನಮ್ಮ ಕರಾವಳಿ ಸುಂದರಿ ದೇವಿಕಾ ಭಟ್ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ರಂಗಾಯಣ ರಘು, ಗಿರಿ, ಕುರಿ ಪ್ರತಾಪ್, ಅಚ್ಯುತ್ ಸೇರಿದಂತೆ ದೊಡ್ಡ ತಾರಾಗಣವಿರೋ ಬೃಂದಾವಿಹಾರಿ ಇತ್ತೀಚೆಗೆ ಸೆನ್ಸಾರ್ ಪಾಸ್ ಆಗಿದ್ದು, ಕ್ಲೀನ್ ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಅಂದಹಾಗೆ 2 ಗಂಟೆ 56 ನಿಮಿಷದಷ್ಟು ರನ್ ಟೈಂ ಈ ಸಿನಿಮಾ ಹೊಂದಿದೆ ಎನ್ನಲಾಗ್ತಿದೆ.
ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಅದ್ಧೂರಿ ಸಿನಿಮಾದ ಟ್ರೈಲರ್ ರಿಲೀಸ್ ಯಾವಾಗ..? ಪ್ರೀ ರಿಲೀಸ್ ಇವೆಂಟ್ ಡಿಟೈಲ್ಸ್ ಬಗ್ಗೆಯೂ ನಿಮಗೆಲ್ಲಾ ಕೌತುಕತೆ ಇದ್ದೇ ಇರುತ್ತೆ. ಆದ್ರೆ ಈ ಬಾರಿ ಟ್ರೈಲರ್ ಇಲ್ಲದೆಯೇ ಚಿತ್ರ ರಿಲೀಸ್ ಮಾಡಲು ಸಜ್ಜಾಗಿದೆ ಟೀಂ. ಹೌದು.. ಬೃಂದಾವಿಹಾರಿ ಬರೀ ಹಾಡುಗಳ ಮೂಲಕ ನಿಮಗೆ ಆಮಂತ್ರಣ ನೀಡಿ ಆಗಿದೆ. ಟ್ರೈಲರ್ ನ ನೀವು ನಿರೀಕ್ಷಿಸುವಂತಿಲ್ಲ.. ಯಾಕಂದ್ರೆ ದಸರಾ ವಿಶೇಷ ಸಿನಿಮಾನ ಡೈರೆಕ್ಟ್ ಆಗಿ ಬಿಗ್ ಸ್ಕ್ರೀನ್‌ಗೆ ತರ್ತಿದೆ ಚಿತ್ರತಂಡ.
ಇನ್ನೂ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಂದಾವಿಹಾರಿ ಸಿನಿಮಾದ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಸಿನಿಮಾ ಹಾಗೂ ರಾಜಕಾರಣಿಗಳ ಸಮಾಗಮದಲ್ಲಿ ವೇದಿಕೆ ರಂಗೇರಲಿದ್ದು, ಯಾರೆಲ್ಲಾ ಬರ್ತಾರೆ ಅನ್ನೋದು ಕೂಡ ಇಂಟರೆಸ್ಟಿಂಗ್ ವಿಷಯವಾಗಿದೆ. ಅನುಶ್ರೀ ನಿರೂಪಣೆಯಲ್ಲಿ ಇದೇ ಶನಿವಾರ ಅಂದ್ರೆ ಅಕ್ಟೋಬರ್ 10ರ ಸಂಜೆ 6 ಗಂಟೆಗೆ ಸಾವಿರಾರು ಮಂದಿ ಈ ಇವೆಂಟ್‌ಗೆ ಸಾಕ್ಷಿ ಆಗಲಿದ್ದಾರೆ. ಗಿಲ್ಲಿ ಕಾಮಿಡಿ ಸ್ಕಿಟ್ ಜೊತೆ ಬೃಂದಾವಿಹಾರಿ ಕ್ಲಾಸಿಕಲ್ ಸಾಂಗ್ಸ್‌ಗೆ ಲೈವ್ ಡಾನ್ಸ್ ಪರ್ಫಾಮೆನ್ಸ್ ಕೂಡ ಇರಲಿದೆ.
ಗೋಲ್ಡನ್ ಮೆಗಾಸ್ಟಾರ್ ಗಣೇಶ್, ನಾಯಕ ನಟಿಯರಾದ ದೇವಿಕಾ ಭಟ್, ಮಾಳವಿಕಾ ಶರ್ಮಾ, ರಂಗಾಯಣ ರಘು, ಕುರಿ ಪ್ರತಾಪ್, ಗಿರಿ, ಜಗಪ್ಪ ಜೊತೆ ಇಡೀ ಚಿತ್ರತಂಡ ಅಲ್ಲಿ ಕಾಣಸಿಗಲಿದೆ. ಅಲ್ಲದೆ ನಟ ಡಾರ್ಲಿಂಗ್ ಕೃಷ್ಣ, ಮಹೇಶ್ ಟೆಂಗಿನಕಾಯಿ, ಪ್ರಹ್ಲಾದ್ ಜೋಶಿ, ಸಂತೋಷ್ ಲಾಡ್.. ಹೀಗೆ ಸಾಕಷ್ಟು ಮಂದಿ ಗಣ್ಯರ ಉಪಸ್ಥಿತಿ ಕೂಡ ಇರಲಿದೆಯಂತೆ. ಒಟ್ಟಾರೆ ಹುಬ್ಬಳ್ಳಿಯಲ್ಲಿ ಬೃಂದಾವಿಹಾರಿ ಕಲರ್‌ಫುಲ್ ಹಾಗೂ ಐತಿಹಾಸಿಕ ಇವೆಂಟ್ ಮೂಲಕ ಚಿತ್ರಪ್ರೇಮಿಗಳಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಥಿಯೇಟರ್‌ಗೆ ಪ್ರೀತಿಯ ಆಮಂತ್ರಣ ನೀಡೋದು ಗ್ಯಾರಂಟಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
