ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್ ಬೇಲ್ ಸಿನಿಮಾ.. ಮಾಸ್ ಬ್ಯಾಟಿಂಗ್ ಮೂಲಕ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡ್ತಿದೆ. ಶಿವಣ್ಣ-ಪವನ್ ಒಡೆಯರ್ ಕಾಂಬೋ ಅಕ್ಷರಶಃ ಮೋಡಿ ಮಾಡ್ತಿದ್ದು, ವಿಜಯಯಾತ್ರೆ ಕೂಡ ಅದ್ಧೂರಿ ಹಾಗೂ ಅಭಿಮಾನೋತ್ಸವದಿಂದ ಕೂಡಿತ್ತು. ಇದೀಗ ಸಿನಿಮಾದ ಎಕ್ಸ್‌ಕ್ಲೂಸಿವ್ ಮೇಕಿಂಗ್ ಕೂಡ ಹೊರಬಿದ್ದಿದ್ದು, ಒಂದೊಂದು ಸೀನ್ ಕೂಡ ಎಷ್ಟು ಅರ್ಥಪೂರ್ಣವಾಗಿ ರೂಪುಗೊಂಡಿತ್ತು ಅನ್ನೋದನ್ನ ಮಾವು ಹೇಳೋದಕ್ಕಿಂತ ನೀವೇ ಕಣ್ತುಂಬಿಕೊಳ್ಳಿ.
- ‘ಬೇಲ್’ ಬಾಕ್ಸ್ ಆಫೀಸ್ ಬ್ಯಾಂಗ್.. Exclusive ಮೇಕಿಂಗ್.!
- ಶಿವಣ್ಣ-ಪವನ್ ಜೋಡಿ ಮೋಡಿ.. ಮಾಸ್ ಬ್ಯಾಟಿಂಗ್ ಜೋರು
- ಬೇಲ್ ಅದ್ಧೂರಿ ವಿಜಯಯಾತ್ರೆ.. ಎಲ್ಲೆಲ್ಲೂ ಅಭಿಮಾನೋತ್ಸವ
- ದಿನದಿಂದ ದಿನಕ್ಕೆ ಮುಗಿಲೇರುತ್ತಿದೆ ದೊಡ್ಮನೆ ದೊರೆಯ ಕ್ರೇಜ್
ಕಥೆ ಚೆನ್ನಾಗಿದ್ದು, ಪಾತ್ರಗಳು ಜೀವಂತಿಕೆ ಪಡೆದು, ಮೇಕಿಂಗ್ ವ್ಹಾವ್ ಫೀಲ್ ತರಿಸಿದ್ರೆ ಸಾಕು.. ಆ ಸಿನಿಮಾ ಸೂಪರ್ ಹಿಟ್. ಸದ್ಯ ಶಿವರಾಜ್‌ಕುಮಾರ್ ನಟನೆಯ ಬೇಲ್ ಸಿನಿಮಾ ಈ ಎಲ್ಲಾ ಆ್ಯಂಗಲ್‌ನಿಂದ ಭೇಷ್ ಅನಿಸಿಕೊಂಡಿದೆ. ಪವನ್ ಒಡೆಯರ್ ನಿರ್ದೇಶನದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದು, ರಾಜ್ಯದಾದ್ಯಂತ ಎಲ್ಲೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇನ್ ಫ್ಯಾಕ್ಟ್ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್‌ಗೂ ಇದೊಂಥರಾ ಮೊದಲ ಹಿಟ್ ಮೂವಿ.
ಯಶಸ್ವಿ ಎರಡನೇ ವಾರಕ್ಕೆ ಕಾಲಿಡ್ತಿರೋ ಬೇಲ್.. ಬಿಗ್ಗೆಸ್ಟ್ ಮಲ್ಟಿಸ್ಟಾರ್ ಸಿನಿಮಾ ಕೂಡ ಹೌದು. ಶಿವಣ್ಣ ಜೊತೆ ಸಾಯಿಕುಮಾರ್, ಜಯರಾಮ್, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಸಂಗೀತಾ, ರಮೇಶ್ ಇಂದಿರ, ಗೋಪಾಲಕೃಷ್ಣ ದೇಶಪಾಂಡೆ ಹೀಗೆ ದೊಡ್ಡ ತಾರಾ ದಂಡಿದೆ. ಸಿನಿಮಾಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದ್ದಂತೆ ಬೆಂಗಳೂರಲ್ಲಿ ಥಿಯೇಟರ್ ರೌಂಡ್ಸ್ ಹಾಕಿದ ಟೀಂ, ಅದಾದ ಬಳಿಕ ತುಮಕೂರು, ಬಳ್ಳಾರಿ ಹಾಗೂ ಹೊಸಪೇಟೆಗೆ ತೆರಳಿತ್ತು. ಹೋದಲ್ಲೆಲ್ಲಾ ಶಿವಣ್ಣ-ದೀಕ್ಷಿತ್ ಶೆಟ್ಟಿ ಹಾಗೂ ಪವನ್ ಒಡೆಯರ್‌ಗೆ ಅದ್ದೂರಿ ಸ್ವಾಗತ, ಅಭಿಮಾನೋತ್ಸವದ ಹೊಳೆ ಹರಿಸಿದ್ರು ಫ್ಯಾನ್ಸ್.
ನಂತ್ರ ಹುಬ್ಬಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಭೇಟಿ ನೀಡಿದ ಟೀಂಗೆ ಅಲ್ಲಿಯೂ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿತು. ಅದ್ರಲ್ಲೂ ಶಿವಣ್ಣನ ಎಂಟ್ರಿಗೆ ಕ್ರ್ಯಾಕರ್ಸ್ ಅಳವಡಿಸಲಾಗಿದ್ದು, ಅವು ಸಿಡಿದ ಏಟಿಗೆ ಶಿವಣ್ಣನೇ ಬೆಚ್ಚಿ ಬೀಳುವಂತಾಯ್ತು. ಅದೃಷ್ಟವಶಾತ್ ಅಲ್ಲಿ ಶಿವಣ್ಣನ ಮುಖಕ್ಕೆ ಏನೂ ಆಗಲಿಲ್ಲ ಅನ್ನೋದು ಖುಷಿಯ ವಿಚಾರ. ಬುಕ್ ಮೈ ಶೋನಲ್ಲಿ 9.6 ರೇಟಿಂಗ್‌ನೊಂದಿಗೆ ಮಾಸ್ ಬ್ಯಾಟಿಂಗ್ ಮುಂದುವರೆದಿದ್ದು, ಕೋಟಿ ಕೋಟಿ ಲೂಟಿ ಮಾಡ್ತಿದೆ ಬೇಲ್.
ಮೇಕಿಂಗ್‌ನಲ್ಲಿ ಪವನ್ ಒಡೆಯರ್ ಒಂಥರಾ ಮಾಸ್ಟರ್. ಸಿನಿಮಾದ ಕಥೆಗೆ ಪೂರಕವಾಗಿ ಅದನ್ನ ಬಹಳ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆ. ಒಂದೊಂದು ದೃಶ್ಯ ಕೂಡ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಅವುಗಳ ಹಿಂದಿನ ತಯಾರಿ ರೋಚಕವಾಗಿದೆ. ಆನ್ ಸ್ಪಾಟ್‌ನಲ್ಲೇ ಡೈಲಾಗ್ ಶೀಟ್‌ನ ಕಲಾವಿದರಿಗೆ ನೀಡಿ, ಶೂಟ್ ಮಾಡೋದು ತಮಾಷೆಯ ಮಾತಲ್ಲ. ಅದ್ರಲ್ಲೂ ಜಿಮ್ಮಿ ಹಾಕಿಕೊಂಡು ರೋಡ್‌ನಲ್ಲಿ ಮೂವಿಂಗ್ ಶಾಟ್ಸ್ ಕೂಡ ಚಿತ್ರಿಸಲಾಗಿದೆ. ಮೇಕಿಂಗ್‌ನಲ್ಲಿ ಅದೆಲ್ಲಾ ರಿವೀಲ್ ಆಗಿದೆ.
ನೋಡುಗರಿಗೆ ವ್ಹಾವ್ ಫೀಲಗ ತರಿಸೋ ಅದೆಷ್ಟೋ ದೃಶ್ಯಗಳ ಹಿಂದೆ ಸಾಕಷ್ಟು ಮಂದಿ ಶ್ರಮ ಇರಲಿದೆ. ಕ್ಯಾಪ್ಟನ್ ಆಫ್ ದಿ ಶಿಪ್ ಪವನ್ ಅದನ್ನೆಲ್ಲಾ ಹೇಗೆ ನಿಭಾಯಿಸಿದ್ರು ಅನ್ನೋದು ಇಲ್ಲಿ ಕಾಣ್ತಿದೆ. ಕ್ಯಾಮೆರಾ ಟೀಂ, ಲೈಟಿಂಗ್ ಟೀಂ, ಸೆಟ್ ಪ್ರಾಪರ್ಟೀಸ್, ಆನ್ & ಆಫ್ ಸ್ಕ್ರೀನ್ ಹಂಗಾಮ ಎಲ್ಲವೂ ಇಂಪ್ರೆಸ್ಸೀವ್. ಒಟ್ಟಾರೆ ಬೇಲ್ ಪ್ರೇಕ್ಷಕರ ದಿಲ್ ದೋಚಿ, ಯಶಸ್ವಿ ಪ್ರದರ್ಶನ ಕಾಣ್ತಿರೋದು ಗ್ರೇಟ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
