ಬಾಲಿವುಡ್ ನಟ ಗೋವಿಂದ ಬಾಳಲ್ಲಿ ಬಿರುಗಾಳಿ.. ಆ ನಟಿಯೇ ಡಿವೋರ್ಸ್‌ಗೆ ಕಾರಣ!

ಬಾಲಿವುಡ್ ನಟ ಗೋವಿಂದ ಬಾಳಲ್ಲಿ ಬಿರುಗಾಳಿ..!

ಹೈದರಾಬಾದ್

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಸುದ್ದಿಗಳು ಹೆಚ್ಚುತ್ತಲೇ ಇದೆ. ಇದೀಗ ಬಾಲಿವುಡ್‌ ಸ್ಟಾರ್‌ ನಟನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಗೋವಿಂದ ಮತ್ತು ಅವರ ಪತ್ನಿ ಸುನಿತಾ ಅಹುಜಾ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಸಜ್ಜಾಗಿದ್ದಾರೆ.

1987ರಲ್ಲಿ ವಿವಾಹವಾದ ಈ ಜೋಡಿ, ಮೂವರು ಮಕ್ಕಳಿದ್ದಾರೆ. ಸುನೀತಾ ಅವರು ಕಳೆದ ಕೆಲವು ದಿನಗಳ ಹಿಂದೆ ಪ್ರತ್ಯೇಕವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಒಂದು ಸಂದರ್ಶನದಲ್ಲಿ, “ನಾನು ಹಾಗೂ ಗೋವಿಂದ ಒಟ್ಟಿಗೆ ವಾಸಿಸುವುದಿಲ್ಲ. ಅವರು ಮಕ್ಕಳೊಂದಿಗೆ ಒಂದು ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ, ನಾನು ಅದೇ ಕಟ್ಟಡದ ಮತ್ತೊಂದು ಬಂಗಲೆಯಲ್ಲಿ ವಾಸಿಸುತ್ತಿದ್ದೇನೆ,” ಎಂದು ಹೇಳಿದ್ದರು.

ADVERTISEMENT
ADVERTISEMENT

ವಿಚ್ಛೇದನಕ್ಕೆ ಕಾರಣಗಳು
ಗೋವಿಂದ-ಸುನಿತಾ ವಿಚ್ಛೇದನದ ಹಿಂದೆ ವೈಯಕ್ತಿಕ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಕೆಲವು ಮೂಲಗಳು ಗೋವಿಂದ ಒಬ್ಬ ಮರಾಠಿ ನಟಿಯೊಂದಿಗಿನ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಹೇಳಲಾಗ್ತಿದೆ. ಆ ನಟಿಯ ಜೊತೆ ಗೋವಿಂದ ಅವರು ಲವ್‌ನಲ್ಲಿದ್ದಾರೆ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ವಿಚ್ಛೇದನದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಬಾಲಿವುಡ್ ಸುತ್ತಮುತ್ತಲೂ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Exit mobile version