ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಬಾಲಿವುಡ್‌ನ ದೊಡ್ಡ ಬಾಕ್ಸ್ ಆಫೀಸ್ ಫೈಟ್ ಈಗ ಗೊಂದಲದ ಗೂಡಾಗಿದೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಈಗಾಗಲೇ ಮುಂದೂಡಿಕೆಯಾಗಿದೆ. ಅದರ ಬೆನ್ನಲ್ಲೇ ರಣವೀರ್ ಸಿಂಗ್ ನಟನೆಯ ಧುರಂಧರ್ 2 ರಿಲೀಸ್ ಕೂಡ ಡೌಟ್ ಎನ್ನುವ ಮಾತು ಕೇಳಿಬರುತ್ತಿದೆ. ಟ್ರೈಲರ್ ಕೂಡ ಇನ್ನೂ ರಿಲೀಸ್ ಆಗಿಲ್ಲ. ಇದರ ನಡುವೆ ಯಾವೆಲ್ಲಾ ಸಿನಿಮಾಗೆ ಲಾಭ..? ಹೇಳ್ತಿವಿ ಈ ಇಂಟೆರೆಸ್ಟಿಂಗ್ ಸ್ಟೋರಿ ನೋಡಿ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ಪ್ರಭಾವ ಈಗ ಸಿನಿಮಾ ಇಂಡಸ್ಟ್ರಿಗೂ ತಲುಪಿದಂತೆ ಕಾಣುತ್ತಿದೆ. ಜಾಗತಿಕ ರಾಜಕೀಯ ಪರಿಸ್ಥಿತಿಯಿಂದ ಪ್ಯಾನ್ ಇಂಡಿಯಾ ಸಿನಿಮಾಗಳ ರಿಲೀಸ್ ಡೇಟ್ ಬದಲಾಗುತ್ತಿದೆ. ಇದೇ ಕಾರಣಕ್ಕೆ ರಾಕಿ ಭಾಯ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಜೂನ್ 4ಕ್ಕೆ ಮುಂದೂಡಲಾಗಿದೆ. ಈ ನಿರ್ಧಾರ ಚಿತ್ರರಂಗದ ವಿತರಕರಿಗೂ, ಅಭಿಮಾನಿಗಳಿಗೂ ದೊಡ್ಡ ಶಾಕ್ ನೀಡಿದೆ. ಈ ಬೆನ್ನಲೇ ಬಾಲಿವುಡ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾದ ರಿಲೀಸ್ ಡೇಟ್ ಕೂಡ ಪೋಸ್ಟ್ ಫೋನ್ ಆಗಬಹುದು ಎಂಬ ಟಾಕ್ ಟೌನ್ ಫುಲ್ ಹಬ್ಬಿದೆ.
ಇರಾನ್ ಇಸ್ರೇಲ್ ಉದ್ವಿಗ್ನತೆ… ಬಣ್ಣದ ಲೋಕಕ್ಕೆ ಹೊಡೆತ..!
ಟಾಕ್ಸಿಕ್ ಹಿಂದೆ ಸರಿದ ಶಾಕ್…ಈಗ ಧುರಂಧರ್ 2ಗೂ ಬ್ರೇಕ್..?
ಟಾಕ್ಸಿಕ್ ಹಿಂದೆ ಸರಿದ ನಂತರ ಮಾರ್ಚ್ 19ರಂದು ರಣವೀರ್ ಸಿಂಗ್ ನಟನೆಯ ಧುರಂಧರ್ 2 ಗೆ ಭರ್ಜರಿ ಲಾಭ ಮಾಡಿಕೊಳ್ಳುತೇ ಯಾವುದೇ ಸಿನಿಮಾ ಕಾಂಪಿಟಿಷನ್ ಇಲ್ಲ ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ ಈಗ ಈ ಸಿನಿಮಾಗೂ ಅಡೆತಡೆ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ. ಧುರಂಧರ್ 2 ಬಿಡುಗಡೆಗೆ ಕೇವಲ ಎರಡು ವಾರಗಳು ಬಾಕಿ ಇದ್ದರೂ ಚಿತ್ರತಂಡದಿಂದ ಯಾವುದೇ ಅಪ್ಡೇಟ್ಸ್ ಇಲ್ಲ. ಪ್ರಮೋಷನ್ ಕೂಡ ಮಾಡ್ತಿಲ್ಲ. ಈ ಮೌನವೇ ಈಗ ಚಿತ್ರ ಮುಂದೂಡಿಕೆ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆಯ ಮುನ್ನ ಭರ್ಜರಿ ಪ್ರಚಾರ ನಡೆಸುತ್ತವೆ. ಆದರೆ ಧುರಂಧರ್ 2 ತಂಡ ಮಾತ್ರ ಇನ್ನೂ ಮೌನವಾಗಿಯೇ ಇದೆ. ವರದಿಗಳ ಪ್ರಕಾರ ಮಾರ್ಚ್ 3ರಂದು ಟ್ರೈಲರ್ ರಿಲೀಸ್ ಆಗಬೇಕಿತ್ತು. ಆದರೆ ಆ ದಿನಾಂಕವೂ ಮುಗಿದಿದೆ. ಟ್ರೈಲರ್ ಬಗ್ಗೆ ಸುಳಿವೇ ಇಲ್ಲ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಧುರಂಧರ್ 2 ಮುಂದೂಡಿಕೆ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿವೆ.
ಟ್ರೇಲರ್ ಇಲ್ಲ, ಪ್ರಚಾರ ಇಲ್ಲ, ಧುರಂಧರ್ 2 ಮೌನ
ಧುರಂಧರ್ 2 ಮುಂದೂಡಿದ್ರೆ ದಕ್ಷಿಣ ಸಿನಿಮಾಗಳಿಗೆ ಜ್ಯಾಕ್‌ಪಾಟ್..!
ಇನ್ನೊಂದು ಕಡೆ ಈ ಸಿನಿಮಾದ ಕಥೆಯೂ ಚರ್ಚೆಗೆ ಕಾರಣವಾಗಿದೆ. ಧುರಂಧರ್ ಮೊದಲ ಭಾಗದಲ್ಲಿ ಪಾಕಿಸ್ತಾನ ವಿರೋಧಿ ಕಥಾವಸ್ತು ಇದ್ದ ಕಾರಣ ಕೆಲ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ನಿಷೇಧಕ್ಕೆ ಒಳಗಾಗಿತ್ತು. ಈಗ ಎರಡನೇ ಭಾಗಕ್ಕೂ ಅದೇ ಭೀತಿ ಎದುರಾಗಬಹುದು ಎನ್ನಲಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮಸ್ಯೆ ಎದುರಾದರೆ ನಿರ್ಮಾಪಕರು ರಿಲೀಸ್ ದಿನಾಂಕವನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಒಂದೆಡೆ ಬಾಲಿವುಡ್ ಸಿನಿಮಾಗಳು ಗೊಂದಲದಲ್ಲಿದ್ದರೆ, ಮತ್ತೊಂದೆಡೆ ದಕ್ಷಿಣ ಭಾರತದ ಸಿನಿಮಾಗಳು ಇದೇ ಅವಕಾಶವನ್ನು ಬಳಸಿಕೊಳ್ಳಲು ಸಜ್ಜಾಗಿವೆ. ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಮತ್ತು ಕನ್ನಡದ ಲವ್ ಮಾಕ್ ಟೆಲ್ 3 ಮಾರ್ಚ್ 19ಕ್ಕೆ ರಿಲೀಸ್ ಆಗಲು ಸಿದ್ಧವಾಗಿವೆ. ಈಗ ಎಲ್ಲರ ಕಣ್ಣು ಒಂದೇ ಪ್ರಶ್ನೆಯ ಮೇಲೆ ನೆಟ್ಟಿದೆ. ಇಂದೋ ನಾಳೆಯೋ ಧುರಂಧರ್ 2 ಟ್ರೈಲರ್ ಹೊರಬಂದರೆ ರಿಲೀಸ್ ಡೇಟ್ ಪಕ್ಕಾ ಇಲ್ಲದಿದ್ದರೆ ಬಾಲಿವುಡ್‌ನ ಈ ದೊಡ್ಡ ಫೈಟ್ ಮತ್ತೊಮ್ಮೆ ಮುಂದೂಡಿಕೆ ಆಗೋದು ಖಚಿತ ಎನ್ನಲಾಗುತ್ತಿದೆ.
