ಪೂಜಾ, ರುಕ್ಕು, ಶ್ರೀನಿಧಿ.. BRB ಕಿಚ್ಚನಿಗೆ ತ್ರಿಬಲ್ ಧಮಾಕ..?!

ಯಾರಾಗ್ತಾರೆ ಕಿಚ್ಚನ ಜೋಡಿ..? ಎಲ್ರೂ ಮಾಡ್ತಾರಾ ಮೋಡಿ ?

Film 2025 04 21t142432.157

ಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಕಿಕ್‌‌ಸ್ಟಾರ್ಟ್‌ ಆಗಿದೆ. 200 ವರ್ಷಗಳ ಭವಿಷ್ಯದ ಫ್ಯಾಂಟಸಿ ಎಂಟರ್‌ಟೈನರ್‌ಗೆ ಬಾದ್‌ಷಾ ಎಂಟ್ರಿ ಕೊಟ್ಟಿದ್ದು, ಕಿಚ್ಚನ ಜೊತೆ ಬಣ್ಣ ಹಚ್ಚಲಿರೋ ಗ್ಲಾಮರ್ ಡಾಲ್ ಯಾರು ಅನ್ನೋ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ಅದಕ್ಕೆ ಉತ್ತರ ಒಬ್ಬರಲ್ಲ ಇಬ್ಬರಲ್ಲ ಮೂವರು ಅಂದ್ರೆ ನೀವು ನಂಬಲೇಬೇಕು.

ಮ್ಯಾಕ್ಸ್ ಸಿನಿಮಾದಲ್ಲಿ ಬಾದ್‌ಷಾ ಕಿಚ್ಚ ಸುದೀಪ್ ಅವರಿಗೆ ನಟೀಮಣಿಯೇ ಇರಲಿಲ್ಲ ಅಂತ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಜಾರು ಮಾಡ್ಕೊಂಡಿದ್ರು. ಅದಕ್ಕೆ ಅಭಿನಯ ಚಕ್ರವರ್ತಿ ಕೂಡ ಒಳಗೊಳಗೆ ಬೇಸರ ಇದ್ರೂ ಸಹ, ಸ್ಕ್ರಿಪ್ಟ್ ಡಿಮ್ಯಾಂಡ್ ಮಾಡಿದಂತೆ ಪಾತ್ರ ನಿರ್ವಹಿಸಬೇಕು ಅನ್ನೋ ಉತ್ತರ ಕೊಟ್ಟು ಸುಮ್ಮನಾಗಿದ್ರು. ಆದ್ರೀಗ ಕಾಲ ಬದಲಾಗಿದೆ. ಮ್ಯಾಕ್ಸ್ ಬೆನ್ನಲ್ಲೇ ಸೆಟ್ಟೇರಿರುವ ಬಿಲ್ಲ ರಂಗ ಬಾಷ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಮೂವರ ಹೆಸರು ಕೇಳಿಬರ್ತಿದೆ.

ADVERTISEMENT
ADVERTISEMENT

 

ಬಿಲ್ಲ, ರಂಗ ಹಾಗೂ ಬಾಷ ಅನ್ನೋದು ಒಂದು ಪಾತ್ರ ಅಲ್ಲ, ಮೂರು ಪಾತ್ರಗಳು. ಆ ಮೂರೂ ಕ್ಯಾರೆಕ್ಟರ್‌‌ಗಳನ್ನು ಕಿಚ್ಚ ಸುದೀಪ್ ಒಬ್ಬರೇ ನಿರ್ವಹಿಸುತ್ತಾರೆ ಅನ್ನೋದು ವಿಶೇಷ. ಅದು ಮೂರು ಶೇಡ್‌‌ಗಳುಳ್ಳ ಪಾತ್ರವಾ ಅಥ್ವಾ ತ್ರಿಬಲ್ ಆ್ಯಕ್ಟಿಂಗ್‌ನಲ್ಲಿ ಸುದೀಪ್ ಕಾಣಿಸ್ತಾರಾ ಅನ್ನೋದು ಸಸ್ಪೆನ್ಸ್. ಆದ್ರೆ ಆಲ್ ಇಂಡಿಯಾ ಕಟೌಟ್ ಜೊತೆ ಬಣ್ಣ ಹಚ್ಚೋಕೆ ಸಜ್ಜಾಗಿರೋ ಸುಂದರಿಯರು ಮಾತ್ರ ಒಬ್ಬಿಬ್ಬರಲ್ಲ, ಬರೋಬ್ಬರಿ ಮೂವರು.

ಕಿಚ್ಚ 47 ಸಿನಿಮಾಗೆ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಎನ್ನಲಾಗಿತ್ತು. ಅದಕ್ಕೆ ತಮಿಳು ಡೈರೆಕ್ಟರ್ ಚೇರನ್ ನಿರ್ದೇಶನ ಮಾಡೋದು ಕೂಡ ಪಕ್ಕಾ ಆಗಿತ್ತು. ಆದ್ರೀಗ ಆ ಸಿನಿಮಾ ತಡವಾಗ್ತಿರೋದ್ರಿಂದ ಶ್ರೀನಿಧಿ ಶೆಟ್ಟಿ ಬಿಲ್ಲ ರಂಗ ಬಾಷ ಚಿತ್ರಕ್ಕೆ ನಾಯಕಿ ಆಗ್ತಾರೆ ಎನ್ನಲಾಗ್ತಿದೆ. ಸದ್ಯ ನಾನಿಯ ಹಿಟ್-3 ಸಿನಿಮಾಗಾಗಿ ಬಣ್ಣ ಹಚ್ಚಿರೋ ಶ್ರೀನಿಧಿ, ಬಿಲ್ಲ ರಂಗ ಬಾಷ ಚಿತ್ರದಿಂದ ಕಂಬ್ಯಾಕ್ ಮಾಡ್ತಾರಾ ಅನ್ನೋದು ಕಾದು ನೋಡಬೇಕಿದೆ.

ಇನ್ನು ಸಪ್ತ ಸಾಗರದಾಚೆ ಎಲ್ಲೋ ಬಳಿಕ ತೆಲುಗು ಹಾಗೂ ತಮಿಳಲ್ಲಿ ಸಖತ್ ಬ್ಯುಸಿ ಆಗಿರೋ ಅಪ್ಪಟ ಕನ್ನಡತಿ ರುಕ್ಮಿಣಿ ವಸಂತ್ ಹೆಸರು ಕೂಡ ದಟ್ಟವಾಗಿ ಕೇಳಿಬರ್ತಿದೆ. ಮಿಗಿಲಾಗಿ ರುಕ್ಮಿಣಿ ವಸಂತ್ ನಿನ್ನೆಯಷ್ಟೇ ಇನ್ಸ್‌ಟಾ ಸ್ಟೇಟಸ್‌‌ನಲ್ಲಿ ಬಿಲ್ಲ ರಂಗ ಬಾಷ ಅಂತ ಬರೆದುಕೊಂಡಿದ್ದರು. ಅಲ್ಲಿಗೆ ಈಕೆಯೇ ಕಿಚ್ಚನ ಜೋಡಿ ಅಂತ ಫ್ಯಾನ್ಸ್ ಫಿಕ್ಸ್ ಆಗ್ತಿದ್ದಾರೆ. ಆದ್ರೆ ರುಕ್ಕು, ಶ್ರೀನಿಧಿ ನಡುವೆ ಮತ್ತೊಂದು ಹೆಸರು ಕೇಳಿಬರ್ತಿದೆ. ಅವರೇ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ.

ಪೂಜಾ ಹೆಗ್ಡೆ ಇಲ್ಲೇ ನಮ್ಮ ಕರಾವಳಿಯಲ್ಲೇ ಹುಟ್ಟಿ, ಮುಂಬೈನಲ್ಲಿ ಬೆಳೆದರೂ ಸಹ ಕನ್ನಡದಲ್ಲಿ ಇಲ್ಲಿಯವರೆಗೆ ಒಂದೂ ಸಿನಿಮಾ ಮಾಡಿಲ್ಲ. ಆದ್ರೆ ಸೌತ್‌ನಿಂದ ಬಾಲಿವುಡ್‌‌ವರೆಗೆ ಈಕೆ ಆಲ್ಮೋಸ್ಟ್ ಆಲ್ ಎಲ್ಲಾ ಸೂಪರ್ ಸ್ಟಾರ್ಸ್‌ ಜೊತೆ ಬಣ್ಣ ಹಚ್ಚಿದ್ದಾರೆ. ಹಾಗಾಗಿ ಬಿಲ್ಲ ರಂಗ ಬಾಷ ಚಿತ್ರದ ಮೂಲಕ ಪೂಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಾರೆ ಅನ್ನೋದು ಒಂದು ಮೂಲದ ಸುದ್ದಿ. ಅದೇನೇ ಇರಲಿ, ಕಿಚ್ಚನ ಜೊತೆ ಈ ಮೂವರೂ ಕಾಣಿಸಿಕೊಂಡ್ರೆ ಗ್ಲಾಮರ್‌ ಗೆ ಕಿಂಚಿತ್ತೂ ಕೊರೆತೆ ಇರಲಾರದು. ಆದ್ರೆ ನಿರ್ದೇಶಕ ಅನೂಪ್ ಭಂಡಾರಿ ಯಾರನ್ನ ಫೈನಲ್ ಮಾಡ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

Exit mobile version