ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಉಳಿದಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್ ಕಿರೀಟ ಮುಡಿಗೇರಿಸಿಕೊಳ್ಳುವ ರೇಸ್‌ನಲ್ಲಿ ಗಿಲ್ಲಿ, ಅಶ್ವಿನಿ, ರಕ್ಷಿತಾ ಮುಂಚೂಣಿಯಲ್ಲಿದ್ದು, ಯಾರಾಗ್ತಾರೆ ವಿನ್ನರ್ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಇದರ ಮಧ್ಯೆ ಫಿನಾಲೆ ಇವೆಂಟ್ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗವಾಗಿ ಮಾತನಾಡಿರೋದು ಇಂಟರೆಸ್ಟಿಂಗ್.
- ಗಿಲ್ಲಿ, ಅಶ್ವಿನಿ, ರಕ್ಷಿತಾ.. ಯಾರಿಗೆ ಕಿರೀಟ..? ಕಿಚ್ಚ ಹೇಳಿದ್ದೇನು..?
- ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್.. ಕಂಟೆಸ್ಟೆಂಟ್ಸ್‌ಗೆ ಟೆನ್ಷನ್
- ಗಿಲ್ಲಿ ಜಗತ್ ಕಿಲಾಡಿ.. ಇವ್ರೇ ಭವಿಷ್ಯದ ಸ್ಟಾರ್ ಕಮೆಡಿಯನ್
- ‘ಫೇವರಿಟ್ ಸ್ಪರ್ಧಿಗೆ ವೋಟ್ ಮಾಡಿ, ಆದ್ರೆ ಕಿತ್ತಾಡ್ಬೇಡಿ’- ಕಿಚ್ಚ
ಇಷ್ಟು ದಿನ ವಾರದ ಕಥೆ ಕಿಚ್ಚನ ಜೊತೆ ನೋಡ್ತಿದ್ರಿ. ಆದ್ರೀಗ ನೂರು ದಿನದ ಬಿಗ್ ಮನೆಯ ಕಥೆಯನ್ನ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೋಡೋ ಸಮಯ ಬಂದಾಗಿದೆ. ಯೆಸ್.. ಬಿಗ್‌ಬಾಸ್ ಸೀಸನ್-12ರ ಬಹುನಿರೀಕ್ಷಿತ ಫಿನಾಲೆಗೆ ಇನ್ನೊಂದೇ ಒಂದು ವಾರ ಬಾಕಿ ಉಳಿದಿದೆ. ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ ಅಶ್ವಿನಿ ಗೌಡ, ಮಗದೊಂದು ಕಡೆ ರಕ್ಷಿತಾ.. ಇವರುಗಳ ಮಧ್ಯೆ ಮ್ಯೂಟೆಂಟ್ ರಘು, ಕಾವ್ಯ.. ಹೀಗೆ ಸಾಕಷ್ಟು ಮಂದಿ ಇದ್ದ ಬಿಗ್ ಮನೆ, ಸದ್ಯ ಇವರುಗಳ ಸುತ್ತ ಸುತ್ತುತ್ತಿದೆ.
ಎಲ್ಲರ ಚಿತ್ತ ಗಿಲ್ಲಿ ಮೇಲೆ ನೆಟ್ಟಿದೆ. ಆದ್ರೆ ಗಿಲ್ಲಿ ಮನಸ್ಸು ಮಾತ್ರ ಕಾವ್ಯ ಮೇಲೆ ಇದೆ. ಇವರಿಬ್ಬರ ನಡುವೆ ವೋಟ್ಸ್ ಸ್ಕೋರ್ ಮಾಡ್ತಿರೋದು ಮಾತ್ರ ಅಶ್ವಿನಿ ಗೌಡ ಅಂದ್ರೆ ತಪ್ಪಾಗಲ್ಲ. ವೋಟ್ಸ್ ಯಾರಿಗೆ ಎಷ್ಟೇ ಬರಲಿ ಅಥ್ವಾ ಬಿಡಲಿ. ಬಿಗ್ ಮನೆಯ ರಿಯಲ್ ಎಂಟರ್‌ಟೈನರ್ ಅಂದ್ರೆ ಒನ್ ಅಂಡ್ ಓನ್ಲಿ ಗಿಲ್ಲಿ ನಟ. ಕಾಮಿಡಿ ಕಿಲಾಡಿಗಳಿಂದ ಬಿಗ್ ಮನೆ ಹೊಕ್ಕಿರೋ ಗಿಲ್ಲಿ, ಪ್ರತಿಭೆಯಲ್ಲಿ ಜಗತ್ ಕಿಲಾಡಿ ಅನಿಸಿಕೊಂಡಿದ್ದಾರೆ.
ಗಿಲ್ಲಿಗೆ ಫ್ಯಾನ್ ಬೇಸ್ ಜೊತೆ ಇನ್ಸ್‌ಟಾ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಿದೆ. ಮಗದೊಂದು ಕಡೆ ಆರಂಭದಲ್ಲೇ ಬಿಗ್ ಮನೆಯಿಂದ ಕಾಣೆಯಾಗಿದ್ದ ರಕ್ಷಿತಾ, ಕೊನೆವರೆಗೂ ಉಳಿದುಕೊಂಡು ಮಿಂಚುವ ಮುನ್ಸೂಚನೆ ನೀಡಿದ್ದಾರೆ. ವಿನ್ನರ್ ಅಥ್ವಾ ರನ್ನರ್ ಅಪ್ ಆದ್ರೂ ಅಚ್ಚರಿಯಿಲ್ಲ ಅನ್ನೋದು ಖಚಿತ. ಇರೋದನ್ನ ನೇರವಾಗಿ ಫಿಲ್ಟರ್‌ಲೆಸ್ ಆಗಿ ಮಾತನಾಡೋ ರಕ್ಷಿತಾ ಅಸಂಖ್ಯಾತ ಕನ್ನಡಿಗರ ಮನಸ್ಸು ಗೆದ್ದಿರೋದು ಸುಳ್ಳಲ್ಲ. ಆದ್ರೀಗ ಈ ವ್ಯಕ್ತಿತ್ವಗಳ ಆಟದಲ್ಲಿ ಅತಿಹೆಚ್ಚು ವೋಟ್ಸ್ ಯಾರಿಗೆ ಬರುತ್ತೆ ಅನ್ನೋದೇ ಯಕ್ಷ ಪ್ರಶ್ನೆ. ಈ ಬಗ್ಗೆ ಸ್ವತಃ ಬಿಗ್‌ಬಾಸ್ ಸುದೀಪ್ ಅವರೇ ಕುಣಿಗಲ್ ಉತ್ಸವದಲ್ಲಿ ಮಾತನಾಡಿದ್ದಾರೆ.
ಯೆಸ್.. ಎಲ್ರೂ ಬಿಗ್‌ಬಾಸ್ ನೋಡ್ತಿದ್ದೀರಾ..? ಇನ್ನೊಂದೇ ವಾರ ಇರೋದು. ನಿಮ್ಮ ಫೇವರಿಟ್ ಕಂಟೆಸ್ಟೆಂಟ್ಸ್‌ಗೆ ವೋಟ್ ಮಾಡಿ. ಆದ್ರೆ ಕಿತ್ತಾಡ್ಕೋಬೇಡಿ ಅನ್ನೋ ಕಿವಿಮಾತು ಹೇಳಿದ್ದಾರೆ ಬಾದ್‌ಷಾ ಕಿಚ್ಚ ಸುದೀಪ್. ಯಾಕಂದ್ರೆ ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಾಗ ಸಾಕಷ್ಟು ಹೈಪ್ ಪಡೆಯುತ್ತೆ ಬಿಗ್‌ಬಾಸ್ ಶೋ. ಹಾಗಾಗಿ ಅದನ್ನ ಕೂಲ್ ಆಗಿ ನಡೆಸಿಕೊಡೋ ಧಾವಂತದಲ್ಲಿರೋ ಕಿಚ್ಚ, ಯಾರೇ ಗೆದ್ರೂ, ಯಾರೇ ಸೋತ್ರೂ ಕಿತ್ತಾಡಬೇಡಿ ಅನ್ನೋದನ್ನ ಈಗಲೇ ಹೇಳಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
