ಬಿಗ್‌ಬಾಸ್‌ಗೆ ತೆರೆಮರೆ ಸಿದ್ಧತೆ.. ಯಾರಾಗ್ತಾರೆ ಬಾಸ್..?

ಬಿಗ್‌ಬಾಸ್‌ ನಿರೂಪಣೆಗೆ ಗ್ರೀನ್ ಸಿಗ್ನಲ್ ನೀಡಿದ ಕಿಚ್ಚ.. ಕಂಡಿಷನ್ಸ್ ಅಪ್ಲೈ

Untitled design 2025 06 09t164132.616

ಬಾದ್‌ಷಾ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆಯ ಬಿಗ್ ಬಾಸ್ ಸೀಸನ್. ಮುಂದಿನ ವರ್ಷದಿಂದ ನಾನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂತ ಪೋಸ್ಟ್ ಮಾಡುವ ಮೂಲಕ ಕಳೆದ ಬಿಗ್ ಬಾಸ್ ಫಿನಾಲೆಗೂ ಮೊದಲೇ ಶಾಕಿಂಗ್ ನ್ಯೂಸ್ ಕೊಟ್ಟಿದ್ರು. ಆದ್ರೀಗ ಬಿಗ್‌ಬಾಸ್ 12ಗೆ ತೆರೆಮರೆಯಲ್ಲಿ ಸಿದ್ಧತೆಗಳು ನಡೀತಿವೆ. ಹಾಗಾದ್ರೆ ಈ ಬಾರಿಯ ಬಿಗ್ ಮನೆಗೆ ಯಾರಾಗ್ತಾರೆ ಬಿಗ್‌ಬಾಸ್ ಅಂತೀರಾ..? ಇಲ್ಲಿದೆ ಎಕ್ಸ್‌‌ಕ್ಲೂಸಿವ್ ಇನ್‌ಸೈಡ್ ಸ್ಟೋರಿ.

ಬಿಗ್ ಬಾಸ್.. ಒಂದೊಳ್ಳೆ ರಿಯಾಲಿಟಿ ಶೋ. ಒಂದಷ್ಟು ಮಂದಿಯನ್ನ ಆರಿಸಿಕೊಂಡು, ಅವರ ವ್ಯಕ್ತಿತ್ವಗಳನ್ನ ಪರೀಕ್ಷಿಸುವ ಶೋ ಆಗಿದೆ. ಎರಡೆರಡು ಮುಖ ಇಟ್ಕೊಂಡು ಜೀವನ ಮಾಡೋರ ಮುಖವಾಡ ಕಳಚುವ ಅಸಲಿ ಆಟ ಇದಾಗಲಿದೆ. ಹಾಗಾಗಿಯೇ ಈ ಶೋ ಭಾರತದ ಹತ್ತಾರು ಭಾಷೆಗಳಲ್ಲಿ ಬಿಗ್ಗೆಸ್ಟ್ ಸಕ್ಸಸ್‌‌ಫುಲ್ ಶೋ ಅನಿಸಿಕೊಂಡಿದೆ. ಅದ್ರಲ್ಲೂ ನಮ್ಮ ಕನ್ನಡದಲ್ಲಿ 2013ರ ಮಾರ್ಚ್‌ನಿಂದ ಸತತವಾಗಿ 11 ಸೀಸನ್‌‌ಗಳು ಕಂಪ್ಲೀಟ್ ಆಗಿದ್ದು, ಎಲ್ಲವನ್ನೂ ಬಾದ್‌ಷಾ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ ಅನ್ನೋದು ಇಂಟರೆಸ್ಟಿಂಗ್.

ಆದ್ರೆ ಸೀಸನ್-12ಗೆ ಈ ವರ್ಷ ಕಲರ್ಸ್ ಕನ್ನಡ ವಾಹಿನಿ ಸಕಲ ತಯಾರಿ ನಡೆಸ್ತಿದೆ. ತೆರೆಮರೆಯಲ್ಲಿ ಸದ್ದಿಲ್ಲದೆ ಎಲ್ಲಾ ಯೋಜನೆಗಳು ಸಿದ್ದವಾಗ್ತಿವೆ. ಆದ್ರೆ ಯಾರಾಗ್ತಾರೆ ಈ ಬಾರಿ ಬಿಗ್‌ಬಾಸ್ ಹೋಸ್ಟ್ ಮಾಡುವ ಬಾಸ್ ಅನ್ನೋದೇ ಯಕ್ಷ ಪ್ರಶ್ನೆ. ಯಾಕಂದ್ರೆ ಕಳೆದ ವರ್ಷ ಗ್ರ್ಯಾಂಡ್ ಫಿನಾಲೆಗೂ ಮೊದಲೇ ಸ್ವತಃ ಸುದೀಪ್ ಅವರು ನಾನು ಇದೇ ಕೊನೆಯ ಸೀಸನ್ ನಿರೂಪಿಸುವೆ. ಮುಂದಿನ ವರ್ಷದಿಂದ ಹೋಸ್ಟ್ ಮಾಡಲ್ಲ ಅಂತ ಅಧಿಕೃತವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಶಾಕಿಂಗ್ ಪೋಸ್ಟ್ ಅಪ್ಡೇಟ್ ಮಾಡಿದ್ರು.

ಅದರ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡಿದ್ರು ಕೂಡ. ಆದ್ರೀಗ ಗ್ಯಾರಂಟಿ ನ್ಯೂಸ್‌ಗೆ ಸಿಕ್ಕಿರೋ ಅಧಿಕೃತ ಮಾಹಿತಿ ಪ್ರಕಾರ ಈ ಬಾರಿಯೂ ಸಹ ಕಿಚ್ಚ ಸುದೀಪ್ ಅವರೇ ಬಿಗ್‌ಬಾಸ್ 12ನೇ ಆವೃತ್ತಿಯನ್ನ ನಿರೂಪಿಸಲಿದ್ದಾರೆ. ಅವರನ್ನ ಬಿಟ್ಟು ಬೇರೆ ಯಾರನ್ನೇ ಆಗಲಿ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಯಾಕಂದ್ರೆ ಇಲ್ಲಿಯವರೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಮರಾಠಿ, ಬೆಂಗಾಳಿ ಸೇರಿದಂತೆ ಬಹುತೇಕ ಭಾಷೆಗಳ ಬಿಗ್‌ ಮನೆಯಲ್ಲಿ ಸಾಕಷ್ಟು ಮಂದಿ ಸ್ಟಾರ್‌ಗಳು ನಿರೂಪಕರಾಗಿ ಬದಲಾಗಿದ್ದಾರೆ. ಒಂದೊಂದು ಸೀಸನ್‌‌ಗೆ ಒಬ್ಬೊಬ್ಬರು ಬದಲಾಗಿರೋ ನಿದರ್ಶನಗಳೂ ಉಂಟು. ಆದ್ರೆ ಕನ್ನಡದಲ್ಲಿ ಒನ್ ಅಂಡ್ ಓನ್ಲಿ ಕಿಚ್ಚ ಸುದೀಪ್.

2013ರಿಂದ ಕೊರೋನಾ ಅಂತಹ ಮಹಾಮಾರಿ ಬಂದಾಗಲೂ ಸಹ ಸುದೀಪ್ ಅವರೇ ಬಿಗ್‌ಬಾಸ್‌ನ ಹೋಸ್ಟ್ ಮಾಡಿದ್ದಾರೆ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ಸ್ ಅಂತೂ ಯಾರೂ ಮಿಸ್ ಮಾಡ್ಕೊಳಲ್ಲ. ಕಿಚ್ಚನ ಸ್ಟೈಲು, ಮ್ಯಾನರಿಸಂ, ಸ್ಪಾಂಟೇನಿಯಸ್ ಆಗಿ ಹಾಗೂ ಆರ್ಗ್ಯಾನಿಕ್ ಆಗಿ ಕಂಟೆಸ್ಟೆಂಟ್ಸ್ ಜೊತೆ ನಿರರ್ಗಳವಾಗಿ ಮಾತನಾಡಬಲ್ಲಂತಹ ಮತ್ತೊಬ್ಬ ಮಾತಿನ ಚತುರ ಇಲ್ಲವೇ ಇಲ್ಲ. ತಾಯಿ ತೀರಿಕೊಂಡಾಗಲೂ ಸಹ ಕರ್ತವ್ಯ ಪ್ರಜ್ಞೆ ಮೆರೆದ ಕಿಚ್ಚ, ಅನಾರೋಗ್ಯದಲ್ಲೂ ನಿರೂಪಣೆ ಮಾಡಿಕೊಟ್ಟಿದ್ದಾರೆ. ನೈಟ್ ಪೂರ ಮ್ಯಾಕ್ಸ್ ಚಿತ್ರೀಕರಣದಲ್ಲಿ ಭಾಗಿಯಾಗಿ, ಮತ್ತೆ ರೆಸ್ಟ್ ಇಲ್ಲದೆ ಹಗಲೆಲ್ಲಾ ಬಿಗ್ ಮನೆಯಲ್ಲಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ.

ಹೀಗಾಗಿಯೇ ಕಿಚ್ಚನನ್ನ ಕಳೆದುಕೊಳ್ಳಲು ಇಚ್ಚಿಸದ ಕಲರ್ಸ್ ಕನ್ನಡ ಟೀಂ, ಈ ಬಾರಿಯೂ ಸಹ ಬಿಗ್‌ಬಾಸ್ ಸೀಸನ್-12 ಹೋಸ್ಟ್ ಮಾಡಲು ಬಾದ್‌ಷಾನ ಒಪ್ಪಿಸುವಲ್ಲಿ ಸಕ್ಸಸ್ ಆಗಿದೆ. ಹೊಚ್ಚ ಹೊಸ ಸೀಸನ್‌ಗೆ ಬಾಸ್ ಆಗೋಕೆ ಓಕೆ ಅಂದಿರೋ ಕಿಚ್ಚ, ಒಂದಷ್ಟು ಕಂಡಿಷನ್ಸ್ ಹಾಕಿದ್ದಾರೆ. ಅದೇನಪ್ಪಾ ಅಂದ್ರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಬಿಗ್ ಮನೆ ಇತರೇ ಭಾಷೆಯ ಮನೆಗಳಿಗಿಂತ ಕಲರ್‌‌ಫುಲ್ ಆಗಿರಬೇಕು. ಒಂದೊಳ್ಳೆ ಲೀಗಲ್ ಟೀಂ ಇರಬೇಕು. ವಿವಾದಿದ ಕಂಟೆಸ್ಟೆಂಟ್‌‌ಗಳನ್ನ ಅವಾಯ್ಡ್ ಮಾಡಬೇಕು ವಗೇರಾ ವಗೇರಾ ಕಂಡಿಷನ್ಸ್ ಹಾಕಿದ್ದಾರೆ. ಅದಕ್ಕೆಲ್ಲಾ ಓಕೆ ಅಂದಿರೋ ಕಲರ್ಸ್ ವಾಹಿನಿ, ಒಂದೊಳ್ಳೆ ಗುಡ್ ನ್ಯೂಸ್ ನೀಡುವ ಧಾವಂತದಲ್ಲಿದೆ.

ಅಂದಹಾಗೆ ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ಜುಲೈನಲ್ಲಿ ಬಾದ್‌ಷಾ ಕಿಚ್ಚ ಸುದೀಪ್ ಜೊತೆಗೂಡಿ ಸ್ವತಃ ಕಲರ್ಸ್ ಕನ್ನಡ ಟೀಂ ಸೀಸನ್-12 ಬಗ್ಗೆ ಸುದ್ದಿಗೋಷ್ಠಿ ಮುಖೇನ ಅಧಿಕೃತವಾಗಿ ಅನೌನ್ಸ್ ಮಾಡಲಿದೆ. ಆಗಸ್ಟ್‌ನಿಂದಲೇ ಬಿಗ್ ಮನೆಯ ಅಸಲಿ ಆಟ ಶುರು ಮಾಡೋ ಯೋಜನೆಯಲ್ಲಿದೆ. ಕಳೆದ ವರ್ಷ ಮ್ಯಾಕ್ಸ್ ಸಿನಿಮಾ ಮಾಡ್ತಾ ಮಾಡ್ತಾನೇ ಬಿಗ್ ಮನೆಯಲ್ಲೂ ಮ್ಯಾಕ್ಸಿಮಮ್ ಮನರಂಜನೆ ನೀಡಿದ್ರು ಕಿಚ್ಚ ಸುದೀಪ್. ಅದೇ ರೀತಿ ಈ ಬಾರಿ ಕೂಡ ಬಿಲ್ಲ ರಂಗ ಬಾಷ ಸಿನಿಮಾದ ಜೊತೆಯಲ್ಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಅದೇನೇ ಇರಲಿ, ಕಿಚ್ಚ ಬಿಗ್ ಬಾಸ್‌ಗೆ ಸೈ ಅಂದಿರೋದಕ್ಕೆ ಇಡೀ ಕರುನಾಡೇ ಬಾದ್‌ಷಾ ಕಿಚ್ಚನಿಗೆ ಜೈ ಅಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version