ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಜನಪ್ರಿಯತೆ ಇದೆ. ಸದ್ಯ ಕನ್ನಡ ಬಿಗ್ ಬಾಸ್ ಸೀಸನ್ 12 ಕೂಡ ಇದೆ ಸೆಪ್ಟೆಂಬರ್ 28ಕ್ಕೆ ಶುರುವಾಗ್ತಿದೆ. ಬಿಬಿಕೆ ಅಂದ್ರೆ ಕಿಚ್ಚನ ಸ್ಟೈಲ್.. ಮ್ಯಾನರಿಸಂ.. ಗತ್ತು.. Spontaneous ಡೈಲಾಗ್, ಶೋ ನೋಡುವ ಆಡಿಯೆನ್ಸ್ ಹುಬ್ಬರಿಸುತ್ತಾರೆ. ಟ್ವಿಸ್ಟ್ ಏನೆಂದರೆ ಇದೀಗ ಕಿಚ್ಚನ ಸ್ಟೈಲ್ ನಲ್ಲೆ ತೆಲುಗು ಬಿಗ್ ಬಾಸ್ ನಿರೂಪಣೆ ಮಾಡಲು ನಾಗಾರ್ಜುನ ಮನಸ್ಸು ಮಾಡಿದ್ದಾರಂತೆ. ಹೌದು.. ನಿರೂಪಣೆಯಲ್ಲಿ ಕೊಂಚ ಬದಲಾವಣೆ ಮಾಡ್ತಿರೋ ನಾಗಾರ್ಜುನ, ಸುದೀಪ್ ರೀತಿ ಖಡಕ್ ಆಗಿ ಶೋ ನಡೆಸಿಕೊಡಲು ನಿರ್ಧರಿಸಿದ್ದಾರಂತೆ.
- ಬಿಗ್‌ಬಾಸ್‌ನಲ್ಲಿ ಕಿಚ್ಚನೇ ಬೆಸ್ಟ್.. ನಾಗ್ ಅದೇ ಸ್ಟೈಲ್ ಫಾಲೋ
- ಕಿಚ್ಚನ ವಾಕ್ ಚಾತುರ್ಯಕ್ಕೆ ನಾಗಾರ್ಜುನ ಫಿದಾ..!
- ತೆಲುಗು ಬಿಗ್ಬಾಸ್ಗೆ ಕಿಚ್ಚ ಸ್ಫೂರ್ತಿ..ಫ್ಯಾನ್ಸ್ ದಿಲ್ ಖುಷ್..!
ಬಿಗ್ ಬಾಸ್ ಕನ್ನಡ ಸೀಸನ್ 12ಇನ್ನು ಶುರುವಾಗಿಲ್ಲ ಆಗ್ಲೇ ಸ್ಪರ್ದಿಗಳು ಯಾರು ಅನ್ನೋ ಕುತೂಹಲ ಮನೆ ಮಾಡಿದೆ. ಈ ನಡುವೆ ಕಿಚ್ಚನ ಹುಟ್ಟುಹಬ್ಬಕ್ಕೆ ಹೊಸ ಪ್ರೊಮೊ ಕೂಡ ರಿಲೀಸ್ ಆಗಿದ್ದು ಸೆಪ್ಟೆಂಬರ್ 28ಕ್ಕೆ ಬಿಬಿಕೆ 12ಕಿಕ್ ಸ್ಟಾರ್ಟ್ ಆಗೋದು ಪಕ್ಕಾ. ಮುಖ್ಯವಾಗಿ ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ಎಲ್ಲಾ ಎಪಿಸೋಡ್ಸ್ ನೋಡಿದ್ರೆ ಕಿಚ್ಚನ costume ಅಟ್ರಾಕ್ಟ್ ಆಗುತ್ತೆ. ಅದ್ರಲ್ಲೂ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಗೆ ವೀಕ್ಷಕರು ಫಿದಾ ಆಗಿದ್ದಾರೆ.
- ಸುದೀಪ್ ರೀತಿ ಖಡಕ್ ಶೋ ಮಾಡಲು ನಾಗಾರ್ಜುನ ನಿರ್ಧಾರ
- ನಿಯಮ ಉಲ್ಲಂಘನೆ ಮಾಡಿದ್ರೆ ಖೇಲ್ ಖತಮ್.. ಸ್ಪರ್ಧಿಗಳಿಗೆ ಟೆನ್ಶನ್
ಕಿಚ್ಚ ಸುದೀಪ್ ರೀತಿಯೇ ನಾಗಾರ್ಜುನ ಕೂಡ ಈ ಬಾರಿ ಕಟ್ಟುನಿಟ್ಟಾಗಿ ನಡೆದುಕೊಳ್ಳಲಿದ್ದಾರೆ. ಒಂದುವೇಳೆ ಸ್ಪರ್ಧಿಗಳಿಂದ ಮನೆಯ ನಿಯಮಗಳು ಉಲ್ಲಂಘನೆ ಆದರೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಆ ಮೂಲಕ ಶೋನಲ್ಲಿ ಹೆಚ್ಚಿನ ಕುತೂಹಲ ಇರುವಂತೆ ನೋಡಿಕೊಳ್ಳಲಿದ್ದಾರೆ ಎಂದು ತೆಲುಗಿನ ಮಾಧ್ಯಮಗಳು ವರದಿ ಮಾಡಿವೆ. ಅವರದ್ದೇ ಸ್ಟೈಲ್ ನಲ್ಲಿ ನಿರೂಪಣೆ ಮಾಡಿದ್ರು ಕಿಚ್ಚನನ್ನು ಸ್ಫೂರ್ತಿಯಾಗಿ ತಗೆದುಕೊಂಡಿರೋದು ಕನ್ನಡಿಗರಿಗೆ ಹೆಮ್ಮೆ ಎನ್ನಿಸಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
