ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರವು ಅತ್ಯಂತ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಂಡಿದೆ. ಫ್ಯಾಮಿಲಿ ವೀಕ್ ಮುಕ್ತಾಯದ ಹಂತ ತಲುಪಿದ್ದು, ಮನೆಯಲ್ಲಿ ಹೊಸ ನಾಯಕನ ಆಯ್ಕೆಯಾಗಿದೆ. ಅತ್ತ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರ ಅನುಪಸ್ಥಿತಿ ಪ್ರೇಕ್ಷಕರಲ್ಲಿ ಸಣ್ಣ ನಿರಾಸೆ ಮೂಡಿಸಿದ್ದರೂ, ಈ ವೀಕ್ ಮನೆಗೆ ಯಾವ ಹೊಸ ಅಥಿತಿ ಬರುತ್ತಾರೆ ಎಂದೂ ವೀಕ್ಷಕರು ಕೂತುಹಲದಿಂದ ಕಾಯುತ್ತಿದ್ದಾರೆ
‘ಕೆಡಿ’ ಚಿತ್ರತಂಡದ ಭರ್ಜರಿ ಎಂಟ್ರಿ:
ಕಿಚ್ಚ ಸುದೀಪ್ ಅವರು ವೈಯಕ್ತಿಕ ಕಾರಣಗಳಿಂದ ಈ ವಾರ ಬಿಗ್ ಬಾಸ್‌ಗೆ ಬರುವುದಿಲ್ಲ ಎಂದು ಮೊದಲೇ ಘೋಷಿಸಿದ್ದರು. ಅವರ ಬದಲಿಗೆ ಯಾರು ಈ ಬಾರಿ ಬಿಗ್‌ಬಾಸ್ ಮನೆಗೆ ಬರುತ್ತಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಅವರು ‘KD: The Devil’ ಸಿನಿಮಾದ ಪ್ರಚಾರಕ್ಕಾಗಿ ಬಿಬಿ ಹೌಸ್‌ಗೆ ಆಗಮಿಸುತ್ತಿದ್ದಾರೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ಅಣ್ತಮ್ಮ ಜೋಡೆತ್ತು ಕಣೋ’ ಹಾಡು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿನಿಮಾ ರಿಲೀಸ್ ಡೇಟ್ ಅನೌನ್ಸ್:
ದೀರ್ಘ ಕಾಲದಿಂದ ಕಾಯುತ್ತಿದ್ದ ‘ಕೆಡಿ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. 2026ರ ಏಪ್ರಿಲ್ 30 ರಂದು ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಅಂತಹ ದೊಡ್ಡ ತಾರಾಗಣವಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.
ಗಿಲ್ಲಿ ಕ್ಯಾಪ್ಟನ್ಸಿ
ಸೀಸನ್ ಉದ್ದಕ್ಕೂ ತನ್ನನ್ನು ತಾನು ‘ವೈಸ್ ಕ್ಯಾಪ್ಟನ್’ ಎಂದು ಕರೆದುಕೊಳ್ಳುತ್ತಿದ್ದ ಗಿಲ್ಲಿ ನಟ, ಕೊನೆಗೂ 13ನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಫ್ಯಾಮಿಲಿ ವಾರದಲ್ಲಿ ಬಂದಿದ್ದ ಸ್ಪರ್ಧಿಗಳ ಕುಟುಂಬಸ್ಥರಾದ ಸ್ಪಂದನಾ ಸೋಮಣ್ಣ ಅವರ ಪೋಷಕರು, ರಘು ಪತ್ನಿ ಮತ್ತು ಧನುಷ್ ತಾಯಿ ಗಿಲ್ಲಿಗೆ ಹೆಚ್ಚಿನ ಮತಗಳನ್ನು ನೀಡಿದರು. ಅಂತಿಮವಾಗಿ ಅಶ್ವಿನಿ ಗೌಡ ವಿರುದ್ಧ ಟಾಸ್ಕ್‌ನಲ್ಲಿ ಗೆದ್ದು ಗಿಲ್ಲಿ ಕ್ಯಾಪ್ಟನ್ ರೂಂಗೆ ಎಂಟ್ರಿ ಕೊಟ್ಟಿದ್ದಾರೆ. ಗಿಲ್ಲಿಯ ನಾಯಕತ್ವದಲ್ಲಿ ಕಾವ್ಯಾ ಅವರ ಆಟ ಮತ್ತು ಮನೆಯ ಕಾರ್ಯವೈಖರಿ ಹೇಗೆ ಬದಲಾಗಲಿದೆ ಎಂಬುದು ಈಗಿನ ದೊಡ್ಡ ಕುತೂಹಲ. ಸುದೀಪ್ ಅವರ ಅನುಪಸ್ಥಿತಿಯಲ್ಲಿ ‘ಕೆಡಿ’ ಟೀಂ ಮನೆಯ ಸದಸ್ಯರ ಜೊತೆ ಹೇಗೆ ಮನರಂಜನೆ ನೀಡಲಿದೆ ಮತ್ತು ನಾಮಿನೇಟೆಡ್ ಸ್ಪರ್ಧಿಗಳಲ್ಲಿ ಯಾರು ಹೊರಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.





