ಅವಳಿ ಮಕ್ಕಳ ನಿರೀಕ್ಷೆಯಲ್ಲಿರೋ ಭಾವನಾಗೆ ಸೀಮಂತ..!

ಮದುವೆ ಆಗದೆ ಮಕ್ಕಳ ತಾಯಿ ಆಗ್ತಿರೋ ಬೋಲ್ಡ್ ಲೇಡಿ

Untitled design 2025 08 02t171709.844

ಮದುವೆ ಆಗದೆ IVF ತಂತ್ರಜ್ಞಾನದಿಂದ ತಾಯ್ತನ ಅನುಭವಿಸೋಕೆ ಸಜ್ಜಾಗಿರೋ ನಟಿ ಭಾವನಾ ರಾಮಣ್ಣನ ನಡೆ ಎಲ್ಲರನ್ನ ಚಕಿತಗೊಳಿಸಿತ್ತು. ಆದ್ರೀಗ ಅವಳಿ ಮಕ್ಕಳ ನಿರೀಕ್ಷೆಯಲ್ಲಿರೋ ಈ ಬೋಲ್ಡ್ ಲೇಡಿ, ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಒಂದಲ್ಲ ಎರಡಲ್ಲ ಮೂರು ಬಾರಿ ಸ್ಟೇಟ್ ಫಿಲ್ಮ್ ಅವಾರ್ಡ್‌ ಪಡೆದಂತಹ ಕನ್ನಡ ಚಿತ್ರರಂಗದ ಹಿರಿಯನಟಿ ಭಾವನಾ ರಾಮಣ್ಣ, 40 ಪ್ಲಸ್ ವಯಸ್ಸಿನಲ್ಲಿ ಒಂದು ಬೋಲ್ಡ್ ಡಿಸಿಷನ್ ತೆಗೆದುಕೊಂಡಿರೋದು ಗೊತ್ತೇಯಿದೆ, ಮದುವೆ ಆಗದೆ ಅವಳಿ ಮಕ್ಕಳ ತಾಯಿ ಆಗ್ತಿರೋ ಸುದ್ದಿಯನ್ನ ಇತ್ತೀಚೆಗೆ ಅವರೇ ನೀಡಿದ್ರು. ಅದನ್ನ ಕಂಡು ಇಡೀ ಕರುನಾಡೇ ಬೆಚ್ಚಿ ಬಿದ್ದಿತ್ತು. IVF ತಂತ್ರಜ್ಞಾನದ ಮೂಲಕ ತಾಯ್ತನ ಅನುಭವಿಸೋಕೆ ಸಜ್ಜಾಗಿರೋ ಭಾವನಾ, ನಮ್ಮ ಗ್ಯಾರಂಟಿ ನ್ಯೂಸ್ ಜೊತೆಗೂ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ರು.

ಚಂದ್ರಮುಖು ಪ್ರಾಣಸಖಿ, ಇಂತಿ ನಿನ್ನ ಪ್ರೀತಿಯ, ಭಾಗೀರತಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರೋ ಭಾವನಾ, ಇದೀಗ ಡೆಲಿವರಿಗೂ ಮುನ್ನ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಕೆಲ ತಾರೆಯರು ಕೂಡ ಈ ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿ ಆಕೆಯನ್ನ ಹರಸಿ, ಹಾರೈಸಿದ್ದಾರೆ.

ಸೆಪ್ಟೆಂಬರ್‌‌ನಲ್ಲಿ ಅವಳಿ ಮಕ್ಕಳ ತಾಯಿ ಆಗಲಿರೋ ಭಾವನಾ, ಅವರನ್ನ ತಂದೆ ಇಲ್ಲದೆಯೂ ಸಹ, ಒಳ್ಳೆಯ ಮೌಲ್ಯಗಳೊಂದಿಗೆ ಬೆಳೆಸುವ ಕನಸು ಕಂಡಿದ್ದಾರೆ. ಭಾವನಾ ತೆಗೆದುಕೊಂಡಿರೋ ಈ ನಿರ್ಧಾರವನ್ನು ಸಾಕಷ್ಟು ಮಂದಿ ಟೀಕಿಸಿದ್ರೆ, ಅದಕ್ಕಿಂತ ಹೆಚ್ಚಿನ ಮಂದಿ ಪ್ರೋತ್ಸಾಹಿಸುತ್ತಿದ್ದಾರೆ. ಅದೇನೇ ಇರಲಿ, ತಾಯ್ತನದ ಬಹುದೊಡ್ಡ ಕನಸು ಕಂಡು, ಸಮಾಜದ ಟೀಕೆಗಳನ್ನ ಲೆಕ್ಕಿಸದೆ, ತನ್ನಿಷ್ಟದಂತೆ ತಾಯಿ ಆಗ್ತಿರೋ ಭಾವನಾ ಭಾವನೆಗಳಿಗೆ ನಾವು ಬೆಲೆ ಕೊಡೋಣ. ಆ ಪುಟ್ಟ ಕಂದಮ್ಮಗಳೆರಡೂ ಆರೋಗ್ಯವಾಗಿ ಈ ಭೂಮಿಗೆ ಬರಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version