ಬೆಲ್‌‌ಬಾಟಂ ಮೇಕರ್ಸ್ ನ್ಯೂ ವೆಂಚರ್.. ರಿಷಬ್ ಹೀರೋ ?

ಶೆಟ್ರಿಗಾಗಿ ಕಾಯ್ತಿದೆ ಅಪ್ಪು ಕ್ಲಾಪ್ ಮಾಡಿದ್ದ ‘ಬೆಲ್‌ಬಾಟಂ-2’

Untitled design 2025 12 16T161749.373

ರಿಷಬ್ ಶೆಟ್ಟಿಯ ಬೆಲ್‌‌ಬಾಟಂ ಚಿತ್ರದ ಪ್ರೊಡ್ಯೂಸರ್ ಸಂತೋಷ್, ನ್ಯೂ ಪ್ರಾಜೆಕ್ಟ್‌ ಒಂದನ್ನ ಅನೌನ್ಸ್ ಮಾಡಿದ್ದಾರೆ. 2019ರ ಡಿಟೆಕ್ಟೀವ್ ಬ್ಲಾಕ್‌‌ಬಸ್ಟರ್ ಜೊತೆ 2025ರ ಲೆಫ್ಟ್ ಹ್ಯಾಂಡ್ ಡಿಸಾಸ್ಟರ್ ಕೈ ಜೋಡಿಸ್ತಿದ್ದು, ಈ ಇಂಟರೆಸ್ಟಿಂಗ್ ಕಾಂಬೋಗೆ ನಾಯಕನಾಗ್ತಾರಾ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅನ್ನೋ ಪ್ರಶ್ನೆ ಹುಟ್ಟಿದೆ.

ಬೆಲ್‌ಬಾಟಂ.. 2019ರಲ್ಲಿ ತೆರೆಕಂಡ ಕನ್ನಡದ ಸಿನಿಮಾ. ಕಲಾವಿದನಾಗಿ ನಟ ರಿಷಬ್ ಶೆಟ್ಟಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ಚಿತ್ರವಿದು. ರೆಟ್ರೋ ಡಿಟೆಕ್ಡೀವ್ ಕಥೆಯನ್ನ ಆಧರಿಸಿ ಜಯತೀರ್ಥ ಆ್ಯಕ್ಷನ್ ಕಟ್ ಹೇಳಿದಂತಹ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ಹರಿಪ್ರಿಯಾ, ಅಚ್ಯುತ್ ಕೂಡ ಲೀಡ್‌‌ನಲ್ಲಿ ನಟಿಸಿದ್ದರು.

ಬೆಲ್‌‌ಬಾಟಂ ಮೇಕರ್ಸ್ ನ್ಯೂ ವೆಂಚರ್.. ರಿಷಬ್ ಹೀರೋ?

2019 ಡಿಟೆಕ್ಟೀವ್ ಬ್ಲಾಕ್‌‌ಬಸ್ಟರ್.. 2025 ಎಡಗೈ ಡಿಸಾಸ್ಟರ್

ಕಥೆ, ಪ್ರೆಸೆಂಟೇಷನ್ ಎರಡರ ಜೊತೆಗೆ ಪಾತ್ರಗಳು ನೋಡುಗರನ್ನ ಮಂತ್ರಮುಗ್ಧಗೊಳಿಸಿತ್ತು. ಹಾಗಾಗಿಯೇ ಬೆಲ್‌ಬಾಟಂ ಸಿನಿಮಾ ಆ ವರ್ಷದ ಬಿಗ್ಗೆಸ್ಟ್ ಹಿಟ್ ಮೂವಿ ಆಗಿ ಬಾಕ್ಸ್ ಆಫೀಸ್‌‌ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಿರ್ಮಾಪಕ ಸಂತೋಷ್ ಕುಮಾರ್ ಕೆ. ಸಿ ಆ ಸಿನಿಮಾ ಹಿಟ್ ಆಗ್ತಿದ್ದಂತೆ ಬೆಲ್‌ಬಾಟಂ-2 ಮಾಡೋಕೆ ರಿಷಬ್ ಶೆಟ್ಟಿಗೆ ಅಡ್ವಾನ್ಸ್ ಕೂಡ ಮಾಡ್ತಾರೆ.

ಬೆಲ್‌ಬಾಟಂ-2 ಚೆಂಡುಹೂವ ಸ್ಟೋರಿಗೆ ಮುಹೂರ್ತ ಕೂಡ ಆಗುತ್ತೆ. ಸ್ವತಃ ರಾಜರತ್ನ ಅಪ್ಪು ಅವರೇ ಬಂದು ಕ್ಲಾಪ್ ಮಾಡಿ ಟೀಂಗೆ ಶುಭ ಹಾರೈಸುತ್ತಾರೆ. ಆದ್ರೆ ಅದಾದ ಬಳಿಕ ರಿಷಬ್ ಬೇರೆ ಚಿತ್ರಗಳಲ್ಲಿ ಬ್ಯುಸಿ ಆಗ್ತಾರೆ. ಕೊರೋನಾ ಬರುತ್ತೆ. ಕಾಂತಾರ ಬರುತ್ತೆ.. ಕಾಂತಾರ-1 ಕೂಡ ಬಂತು. ಪರಭಾಷಿಗರಿಗೆ ಜೈ ಹನುಮಾನ್, ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗಳಿಗೆ ಡೇಟ್ಸ್ ನೀಡಿರೋ ರಿಷಬ್ ಅದ್ಯಾವಾಗ ಸಂತೋಷ್ ಅವರಿಗೆ ಬೆಲ್‌ಬಾಟಂ-2 ಮಾಡ್ತಾರೋ ಗೊತ್ತಿಲ್ಲ.

ಕ್ಯೂರಿಯಾಸಿಟಿ ಹುಟ್ಟಿಸಿದ ಇಂಟರೆಸ್ಟಿಂಗ್ ಕಾಂಬಿನೇಷನ್..!

ಶೆಟ್ರಿಗಾಗಿ ಕಾಯ್ತಿದೆ ಅಪ್ಪು ಕ್ಲಾಪ್ ಮಾಡಿದ್ದ ‘ಬೆಲ್‌ಬಾಟಂ-2’

ಇದೀಗ ಬೆಲ್‌ಬಾಟಂ ನಿರ್ಮಾಣ ಸಂಸ್ಥೆಯಿಂದ ಈ ವರ್ಷ ಎಡಗೈಯೇ ಅಪಘಾತಕ್ಕೆ ಕಾರಣ ಅನ್ನೋ ಸಿನಿಮಾ ಮಾಡಿದ್ದ ಡೈರೆಕ್ಟರ್ ಜೊತೆಗೂಡಿ ಹೊಚ್ಚ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಆದ್ರೆ ಆ ಚಿತ್ರಕ್ಕೆ ರಿಷಬ್ ಶೆಟ್ಟಿ ಹೀರೋ ಆಗ್ತಾರಾ ಅಥ್ವಾ ಬೇರೆ ಯಾರಾದ್ರೂ ಲೀಡ್‌‌ನಲ್ಲಿ ನಟಿಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

 ಕಾಂತಾರ-1 ಸಕ್ಸಸ್ ಗುಂಗಲ್ಲಿರೋ ರಿಷಬ್ ಶೆಟ್ಟಿ ಅವರು, ಸದ್ಯ ಜೈ ಹನುಮಾನ್ ಚಿತ್ರಕ್ಕೆ ಬಣ್ಣ ಹಚ್ಚುವ ಧಾವಂತದಲ್ಲಿದ್ದಾರೆ. ಹಾಗಾದ್ರೆ ಬೆಲ್‌ಬಾಟಂ ಸಂತೋಷ್ ಅವರ ನ್ಯೂ ಪ್ರಾಜೆಕ್ಟ್‌ಗೆ ಯಾರಾಗ್ತಾರೆ ಹೀರೋ ಅನ್ನೋದೇ ಯಕ್ಷ ಪ್ರಶ್ನೆ.

 

 

 

Exit mobile version