ಆರ್ಯ ಫಿಲಂಸ್‌ನ ಲಾಂಛನದಲ್ಲಿ ಆರ್. ಲಕ್ಷ್ಮೀನಾರಾಯಣ ಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ನಿರ್ದೇಶನದ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ ನೆಲಮಂಗಲ ಪೊಲೀಸ್ ಠಾಣೆಯ ಬಳಿ ನಡೆಯಿತು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕನಾಗಿ, ‘ಭೀಮ’ ಖ್ಯಾತಿಯ ನಟಿ ಪ್ರಿಯಾ ಪೊಲೀಸ್ ಅಧಿಕಾರಿಯಾಗಿ, ಡ್ರ್ಯಾಗನ್ ಮಂಜು ಖಳನಾಯಕನಾಗಿ ನಟಿಸುತ್ತಿದ್ದಾರೆ.
ನಿರ್ಮಾಪಕ ಆರ್. ಲಕ್ಷ್ಮೀನಾರಾಯಣ ಗೌಡ್ರು ಮಾತನಾಡಿ, ಇದು ನಮ್ಮ ಆರ್ಯ ಫಿಲಂಸ್‌ನ 4ನೇ ಚಿತ್ರ. ನೈಜ ಘಟನೆಯ ಸುತ್ತಲಿನ ಕಥೆಯಾಗಿದ್ದು, ಪ್ರಿಯಾ, ಡ್ರ್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತರು ಚಿತ್ರದಲ್ಲಿದ್ದಾರೆ. 25 ದಿನಗಳ ಚಿತ್ರೀಕರಣದಲ್ಲಿ 4 ಹಾಡುಗಳು, 4 ಫೈಟ್‌ಗಳಿವೆ. ಇಂದಿನ ಎಜುಕೇಶನ್ ಸ್ಕ್ಯಾಮ್ ಬಗ್ಗೆ ಗಟ್ಟಿ ಸಂದೇಶ ನೀಡುತ್ತಿದ್ದೇವೆ. ಸಮಾಜಕ್ಕೆ ಎಚ್ಚರಿಕೆಯನ್ನು ಕೊಡುವ ಪ್ರಯತ್ನ ಎಂದರು.
ನಾಯಕ ಕೌರವ ವೆಂಕಟೇಶ್ ಮಾತನಾಡಿ, ನಾನು ಗೂರ್ಖಾ ಪಾತ್ರದಲ್ಲಿ, ಕಥೆ ನಿರ್ಮಾಪಕರದೇ, ಅದಕ್ಕೆ ಚಿತ್ರರೂಪ ನೀಡಿದ್ದೇವೆ. ಈ ಚಿತ್ರವು ಬೆಂಗಳೂರಿನ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಮಂಜು ಅವರ ಛಾಯಾಗ್ರಹಣ, ರಾಜೇಶ್ ಸಂಗೀತ ಸಂಯೋಜನೆಯಾಗಿದೆ ಎಂದರು.
ನಿರ್ದೇಶಕ ಕಪಿಲ್ ಮಾತನಾಡಿ, ನೈಜ ಘಟನೆಗಳ ಸುತ್ತಲಿನ ಕಥೆ. ಎಜುಕೇಶನ್ ಸ್ಕ್ಯಾಮ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳ ವಂಚನೆ ಮತ್ತು ಪರಿಣಾಮಗಳನ್ನು ತೋರಿಸಿದ್ದೇವೆ. ಬೆಂಗಳೂರು ಸುತ್ತಮುತ್ತ 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಎಂದರು.ಇನ್ನೂ ಚಿತ್ರದಲ್ಲಿ ನಟಿಸಿರುವ ಅನೇಕ ನಟ ನಟಿಯರು ಮಾತನಾಡಿ ತಮ್ಮ ಪಾತ್ರದ ಬಗ್ಗೆ ಸುಳಿವು ನೀಡಿದರು.