ಬಹುನಿರೀಕ್ಷಿತ ‘ಬೇಲ್’ ಸಿನಿಮಾದ ಟ್ರೈಲರ್‌ ಬಿಡುಗಡೆ: ವಿಭಿನ್ನ ಗೆಟಪ್‌ನಲ್ಲಿ ಶಿವಣ್ಣ

ಖಾಕಿ-ಖಾದಿ.. ಲಾ & ಆರ್ಡರ್ ಗೇಮ್.. ಥ್ರಿಲ್ಲಿಂಗ್ ಬೇಲ್..!

ಪಟ್ಟೆ ತಲೆ ಹೆಬ್ಬಾತು ಪ್ರಕರಣ (55)

ಗೂಗ್ಲಿ ಡೈರೆಕ್ಟರ್-ಲಿವಿಂಗ್ ಲೆಜೆಂಡ್ ಶಿವಣ್ಣ ಕಾಂಬೋನ ಬೇಲ್ ಚಿತ್ರದ ಟ್ರೈಲರ್ ನೋಡುಗರ ಹುಬ್ಬೇರಿಸುವಂತಿದೆ. ಖಾಕಿ ಹಾಗೂ ಖಾದಿ ಜೊತೆ ಲಾ & ಆರ್ಡರ್ ಗೇಮ್ ಕುರಿತ ಥ್ರಿಲ್ಲಿಂಗ್ ಕಥಾನಕ ಇದಾಗಿದ್ದು, ಟಾಕ್ಸಿಕ್ ಪ್ರೊಡ್ಯೂಸರ್ ಸಖತ್ ರಿಚ್ ಆಗಿ ನಿರ್ಮಾಣ ಮಾಡಿದ್ದಾರೆ.

ಖಾಕಿ-ಖಾದಿ.. ಲಾ & ಆರ್ಡರ್ ಗೇಮ್.. ಥ್ರಿಲ್ಲಿಂಗ್ ಬೇಲ್..!

ಟಾಕ್ಸಿಕ್ ಪ್ರೊಡ್ಯೂಸರ್, ಗೂಗ್ಲಿ ಡೈರೆಕ್ಟರ್ & ಶಿವಣ್ಣ ಕಾಂಬೋ

 ಲೂಸ್‌ಮಾದ ವಿಲನಿಸಂ.. ದೊಡ್ಮನೆ ದೊರೆ ಶಿವಣ್ಣ ಖಾಕಿಸಂ

ಶಿವಣ್ಣಗೆ ಜಯರಾಂ, ಸಾಯಿಕುಮಾರ್, ದೀಕ್ಷಿತ್ ಶೆಟ್ಟಿ ಸಾಥ್

ಇದು ಬೇಲ್ ಸಿನಿಮಾದ ಲೇಟೆಸ್ಟ್ ಟ್ರೈಲರ್ ಝಲಕ್. ಗೂಗ್ಲಿ, ರಣವಿಕ್ರಮ್ ಅಂತಹ ಬ್ಲಾಕ್‌ ಬಸ್ಟರ್ ಹಿಟ್ ಚಿತ್ರಗಳ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರೋ ಆ್ಯಕ್ಷನ್ ಡ್ರಾಮಾ ಕಥಾನಕವಿದು. ಜನನಾಯಗನ್, ಟಾಕ್ಸಿಕ್‌‌ನಂತಹ ಬಿಗ್ ಪ್ಯಾನ್ ಇಂಡಿಯಾ ಚಿತ್ರಗಳನ್ನ ನೀಡಿರೋ ಕೆವಿಎನ್ ಪ್ರೊಡಕ್ಷನ್ಸ್ ಬೇಲ್ ಚಿತ್ರವನ್ನ ಅದ್ಧೂರಿಯಾಗಿ ನಿರ್ಮಿಸಿದೆ.

ಲಿವಿಂಗ್ ಲೆಜೆಂಡ್.. ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್ ನಟನೆಯ ಬೇಲ್ ಸಿನಿಮಾ.. ಖಾಕಿ, ಖಾದಿ, ಲಾ & ಆರ್ಡರ್, ರೌಡಿಸಂ, ಸಮಾಜ.. ಇವೇ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಹೌದು.. ಶಿವಣ್ಣ ಇಲ್ಲಿ IPS ಆಫೀಸರ್ ಆಗಿ ಕಾಣಸಿಗಲಿದ್ದು, ಅವರಿಗೆ ಮಲಯಾಳಂನ ಜಯರಾಂ, ತೆಲುಗಿನ ಸಾಯಿಕುಮಾರ್ ಹಾಗೂ ದಿಯಾ ದೀಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ.

ಇಲ್ಲಿ ಶಿವಣ್ಣನಿಗೆ ಸಂಗೀತಾ ಜೋಡಿಯಾಗಿದ್ದು, ದೀಕ್ಷಿತ್ ಶೆಟ್ಟಿಗೆ ಸಂಜನಾ ಆನಂದ್ ನಾಯಕಿ. ಅಲ್ಲದೆ ಸುದ್ದಿ ವಾಹಿನಿಯ ಸಂಪಾದಕರಾಗಿ ರಮೇಶ್ ಇಂದಿರ, ರಾಜಕಾರಣಿಯಾಗಿ ಗೋಪಾಲಕೃಷ್ಣ ದೇಶಪಾಂಡೆ, ಖಡಕ್ ಖಳನಾಯಕನಾಗಿ ಲೂಸ್‌ಮಾದ ಯೋಗಿ, ಹಿರಿಯ ನಟ ರಮೇಶ್ ಭಟ್.. ಹೀಗೆ ಬಹುದೊಡ್ಡ ತಾರಾಗಣವಿದೆ. ಒಟ್ಟಾರೆ ಇಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳು ಸೇರಿದಂತೆ ಅದರ ಸುತ್ತಲಿನ ವ್ಯವಸ್ಥೆ ಹಾಗೂ ಅವ್ಯವಸ್ಥೆಗಳ ಚಿತ್ರಣವಾಗಿ ಇದು ಹೊರಹೊಮ್ಮಿದೆ ಅನಿಸ್ತಿದೆ.

ಈಗಾಗ್ಲೇ ಎರಡು ಸಾಂಗ್ಸ್ ಎಲ್ಲರ ಕಣ್ಮನ ತಣಿಸಿದ್ದು, ಟೀಸರ್‌‌ಗಳಿಗಿಂತ ಟ್ರೈಲರ್ ಜಾಸ್ತಿ ಇಂಟರೆಸ್ಟಿಂಗ್ ಅನಿಸಿದೆ. ಪವನ್ ಒಡೆಯರ್ ಲಾಂಗ್ ಗ್ಯಾಪ್‌ನ ನಂತ್ರ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟಂತಿದೆ. ವೈದ್ಯ ಎಸ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ತೂಕ ಹೆಚ್ಚಿಸಿವೆ. ಶಿವಣ್ಣನನ್ನ ರೊಟೀನ್ ಲುಕ್ಸ್‌‌ನಲ್ಲಿ ನೋಡಿ ಬೋರ್ ಆಗಿದ್ದ ಜನಕ್ಕೆ ಸಾಲ್ಟ್ & ಪೆಪ್ಪರ್ ಲುಕ್‌ ಜೊತೆ ಇಂಟೆನ್ಸ್ ಫೋರ್ಸ್ ಕಥೆ ಹಾಗೂ ವಿಭಿನ್ನ ಮ್ಯಾನರಿಸಂನ ಕಿಕ್ ಕೊಟ್ಟಿದ್ದಾರೆ.

ಬೇಲ್ ಸಿನಿಮಾ ಇದೇ ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿ ಪ್ರಯುಕ್ತ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್‌ನ ವೆರಿ ಪ್ರಾಮಿಸಿಂಗ್ ಪ್ರಾಜೆಕ್ಟ್ ಅನಿಸಿಕೊಂಡಿದೆ. ಸೋ.. ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟು ಕೋಟಿ ಗೂಗ್ಲಿ ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

Exit mobile version