ಅಬ್ಬಬ್ಬಾ..ರಸಗುಲ್ಲಾ ಮಲೈಕಾ- ಝೈದ್ ಖಾನ್ ಮಸ್ತ್ ರೊಮ್ಯಾನ್ಸ್..!

ಅಂದು ಬೆಳಕಿನ ಕವಿತೆ.. ಇಂದು ಅಯ್ಯೋ ಶಿವನೇ ದೃಶ್ಯಚಿತ್ತಾರ

Untitled design 2025 09 13t164912.168

ಬನಾರಸ್ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ಜಮೀರ್ ಮಗ ಝೈದ್ ಖಾನ್, ಇದೀಗ ಕಲ್ಟ್ ಹೀರೋ ಆಗೋಕೆ ಹೊರಟಿದ್ದಾರೆ. ಕಲ್ಟ್ ಆಲ್ಬಮ್‌‌ನಿಂದ ಫಸ್ಟ್ ಸಿಂಗಲ್ ಹೊರಬಿದ್ದಿದ್ದು, ಒಂದೊಂದು ಫ್ರೇಮ್ ಕೂಡ ಪೇಂಟಿಂಗ್‌ನಂತೆ ಕಣ್ಮನ ತಣಿಸುತ್ತಿದೆ. ಅಂದು ಬೆಳಕಿನ ಕವಿತೆಯಂತೆ ಇಂದು ಅಯ್ಯೋ ಶಿವನೇ ದೃಶ್ಯಚಿತ್ತಾರವನ್ನ ಒಮ್ಮೆ ಕಣ್ತುಂಬಿಕೊಳ್ಳಿ.

ಯೆಸ್.. ಇದು ಸ್ಯಾಂಡಲ್‌ವುಡ್‌‌ನಲ್ಲಿ ರಿಲೀಸ್‌‌ಗೆ ಸಜ್ಜಾಗ್ತಿರೋ ಕಲ್ಟ್ ಸಿನಿಮಾ ಆಲ್ಬಮ್‌ನ ಅಯ್ಯೋ ಶಿವನೇ ಅನ್ನೋ ಫಸ್ಟ್ ಸಾಂಗ್. ನಟ ಝೈದ್ ಖಾನ್ ಹಾಗೂ ಮಲೈಕಾ ವಸುಪಾಲ್ ಜೋಡಿಯ ಕಲರ್‌‌ಫುಲ್ ಮೆಲೋಡಿ ಡುಯೆಟ್. ನಿರ್ದೇಶಕ ದಿಲ್‌ವಾಲಾ ಅನಿಲ್ ಅವರೇ ಸಾಹಿತ್ಯ ಬರೆದಿರೋ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಕೃಷ್ಣಂ ಪ್ರಣಯಸಖಿ ಚಿತ್ರದ ದ್ವಾಪರ ಸಾಂಗ್‌ನಿಂದ ಸಂಚಲನ ಮೂಡಿಸಿದ್ದ ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಈ ಹಾಡಿಗೆ ಧನಿಯಾಗಿದ್ದಾರೆ.

ಜೆ.ಎಸ್. ವಾಲಿ ಕ್ಯಾಮೆರಾ ಕೈಚಳಕದಲ್ಲಿ ಒಂದೊಳ್ಳೆ ಕಲಾಕೃತಿಯಾಗಿ ಹೊರಹೊಮ್ಮಿದೆ ಈ ಅಯ್ಯೋ ಶಿವನೇ ಸಾಂಗ್. ಹೌದು.. ಹೆಸರಿಗಷ್ಟೇ ಇದು ಕಲ್ಟ್ ಮೂವಿ. ಆದ್ರೆ ಇಲ್ಲಿರೋ ಸಾಂಗ್ ಔಟ್ ಅಂಡ್ ಔಟ್ ಕ್ಲಾಸಿಕ್ ಆಗಿದೆ. ನಾಯಕ-ನಾಯಕಿಯನ್ನ ಸಿನಿಮಾಟೋಗ್ರಾಫರ್ ಬಹಳ ಮುದ್ದಾಗಿ ತೋರಿಸಿದ್ರೆ, ಕೊರಿಯೋಗ್ರಾಫರ್ ಅದ್ಭುತವಾಗಿ ಇದನ್ನ ಕಟ್ಟಿಕೊಟ್ಟಿದ್ದಾರೆ. ಮುದ್ದಾದ ಜೋಡಿಯ ಹಾರ್ಟ್‌ ಟಚಿಂಗ್ ಸಾಂಗ್ ಇದಾಗಿದ್ದು, ಕಣ್ಮನ ತಣಿಸುತ್ತಿದೆ.

ಬನಾರಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಟನಾಗಿ ಕಾಲಿಟ್ಟ ಝೈದ್ ಖಾನ್, ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ್ರು. ಅಲ್ಲಿ ಬೆಳಕಿನ ಕವಿತೆ.. ಬೆರಗಿಗೆ ಸೋತೆ ಅನ್ನೋ ಬ್ಯೂಟಿಫುಲ್ ಹಾಡಿನಿಂದ ಎಲ್ಲರ ಎದೆಗೆ ಇಳಿದಿದ್ರು. ಇದೀಗ ಎರಡನೇ ಚಿತ್ರ ಕಲ್ಟ್‌‌ನಲ್ಲಿ ಆ ಬನಾರಸ್ ಸಾಂಗ್‌‌ನ ದೃಶ್ಯಚಿತ್ತಾರ ಮೀರುವಂತಹ ದೃಶ್ಯಗುಚ್ಚ ಕಟ್ಟಿದ್ದಾರೆ ಡೈರೆಕ್ಟರ್ ಅನಿಲ್ ಕುಮಾರ್.

ಉಪಾಧ್ಯಕ್ಷ ಸೇರಿದಂತೆ ಯಶಸ್ವಿ ಚಿತ್ರಗಳನ್ನ ನೀಡಿರೋ ಡೈರೆಕ್ಟರ್ ಅನಿಲ್ ಕುಮಾರ್ ಸಿನಿಮಾ ಪ್ಯಾಷನ್ ಪ್ರತಿ ಫ್ರೇಮ್‌‌ನಲ್ಲೂ ಎದ್ದು ಕಾಣ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇಂಟರೆಸ್ಟಿಂಗ್ ಅಂದ್ರೆ ಉಪಾಧ್ಯಕ್ಷ ಸಿನಿಮಾದ ನಾಯಕಿ ಮಲೈಕಾರನ್ನೇ ಈ ಕಲ್ಟ್ ಚಿತ್ರಕ್ಕೂ ನಾಯಕಿ ಆಗಿಸಿದ್ದಾರೆ ಅನಿಲ್ ಕುಮಾರ್. ಅಪ್ಪಟ ಕನ್ನಡದ ಚೆಂದುಳ್ಳಿ ಚೆಲುವೆ ಮಲೈಕಾ ಸೊಬಗಿಗೆ ಬೆರಗಾಗದವರೇ ಇಲ್ಲ. ಇದೀಗ ಕಲ್ಟ್‌‌‌ನಲ್ಲೂ ಕಲ್ಟ್ ಕ್ಲಾಸಿಕ್ ಬ್ಯೂಟಿಯಾಗಿ ಕಮಾಲ್ ಮಾಡ್ತಿದ್ದಾರೆ ಮಲೈಕಾ. ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು, ಅದಾದ ಬಳಿಕ ರಿಲೀಸ್ ಡೇಟ್ ಅನೌನ್ಸ್ ಮಾಡುವ ಧಾವಂತದಲ್ಲಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version