‘Zee5’ನಲ್ಲಿ ಅಯ್ಯನ ಮನೆ ದಾಖಲೆ: 100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಮಿನಿ ವೆಬ್ ಸರಣಿ

100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ: zee5ನಲ್ಲಿ ಅಯ್ಯನ ಮನೆ ರೆಕಾರ್ಡ್

Untitled design 2025 05 24t195544.541

ಸದಾ ಹೊಸತನ ಮೂಲಕ ದಾಖಲೆ ಬರೆಯುವ ಜೀ ಕನ್ನಡ ಮೊದಲ ಬಾರಿಗೆ zee5 ಒಟಿಟಿಯಲ್ಲಿ ಬಿಡುಗಡೆ ಮಾಡಿರುವ ಅಯ್ಯನ ಮನೆ ವೆಬ್ ಸರಣಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ತಿಂಗಳ 25ರಂದು zee5ನಲ್ಲಿ ಸ್ಟ್ರೀಮಿಂಗ್ ಕಂಡ ಅಯ್ಯನ ಮನೆ ಮಿನಿ ವೆಬ್ ಸಿರೀಸ್ ಈಗ ದಾಖಲೆ ಬರೆದಿದೆ. ಜಾಜಿಯ ರೋಚಕ ಕಥೆಯ ಈ ವೆಬ್ ಸರಣಿ ಬರೋಬ್ಬರಿ 100 ಮಿಲಿಯನ್ ಮಿನಿಟ್ ವೀಕ್ಷಣೆ ಕಂಡಿದೆ.

7 ಸಂಚಿಕೆಗಳನ್ನು ಒಳಗೊಂಡಿರುವ ಅಯ್ಯನ ಮನೆ ವೆಬ್ ಸರಣಿಯಲ್ಲಿ ‘ದಿಯಾ’ ಸಿನಿಮಾ ನಟಿ ಖುಷಿ ರವಿ ಜಾಜಿ ಪಾತ್ರದಲ್ಲಿ ನಟಿಸಿದ್ದಾರೆ. ಒಲವಿನ ನಿಲ್ದಾಣ ಸೀರಿಯಲ್ ನ ನಾಯಕ ನಟ ಅಕ್ಷಯ್ ನಾಯಕ್, ಹಾಗೂ ಕಾಂತಾರ ನಟಿ ಮಾನಸಿ ಸುಧೀರ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಾಜಿಯನ್ನು ಅವರ ಪತಿ ಜಾಜಿಯನ್ನು ಅತೀಯಾಗಿ ಪ್ರೀತಿಸುತ್ತಾನೆ. ಜಾಜಿ ಕೂಡ ಸಂಪ್ರದಾಯಿಕ ಹುಡುಗಿಯಾಗಿದ್ದು, ಇವಳ ಭಾವನಾತ್ಮಕ ಪಯಣ ಮನೆಯಲ್ಲಿನ ರಹಸ್ಯಗಳನ್ನು ಬಯಲು ಮಾಡುತ್ತಾ..? ಇಲ್ಲವೇ ಇವಳೇ ರಹಸ್ಯವಾಗಿರುತ್ತಾಳಾ ಎಂಬ ಕುತೂಹಲಗಳಿವೆ.

ಅಯ್ಯನ ಮನೆ ವೆಬ್ ಸೀರೀಸ್ ಅನ್ನು ನಿರ್ದೇಶಕ ರಮೇಶ್ ಇಂದಿರಾ ಅವರು ನಿರ್ದೇಶಿಸಿದ್ದಾರೆ. ಈ ವೆಬ್ ಸಿರೀಸ್ ನಲ್ಲಿ ರಮೇಶ್ ಇಂದಿರಾ, ಶೋಭರಾಜ್ ಪಾವೂರ್, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ವಿಜಯ್ ಶೋಭರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಶೃತಿ ನಾಯ್ಡು ಅವರು ವೆಬ್ ಸರಣಿಗೆ ಬಂಡವಾಳ ಹೂಡಿದ್ದಾರೆ.

Exit mobile version