ಬಾಕ್ಸ್ ಆಫೀಸ್‌ನಲ್ಲಿ Coolie ಅಬ್ಬರ: 4 ದಿನದಲ್ಲಿ 404 ಕೋಟಿ ಗಳಿಸಿದ ‘ಕೂಲಿ’

Untitled design (32)

ಸೂಪರ್‌ಸ್ಟಾರ್ ರಜನಿಕಾಂತ್‌ ಅವರ ಬಹುನಿರೀಕ್ಷಿತ ಚಿತ್ರ ಕೂಲಿ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಆಗಸ್ಟ್ 14ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ 404 ಕೋಟಿ ರೂ ಗಳಿಸಿ ಎಲ್ಲರನ್ನೂ ಬೆರಗುಗೊಳಿಸಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ, ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವು ರಜನಿಕಾಂತ್‌ ಅವರ 171ನೇ ಚಿತ್ರವಾಗಿದ್ದು, ತಮಿಳು ಚಿತ್ರರಂಗದ ಆಲ್-ಟೈಂ ರೆಕಾರ್ಡ್‌ಗೆ ಕಾರಣವಾಗಿದೆ.

ಕೂಲಿ ಚಿತ್ರವು ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮುಂಗಡ ಬುಕಿಂಗ್‌ನಲ್ಲಿ ಸುಮಾರು 70 ಕೋಟಿ ರೂಪಾಯಿ ಗಳಿಕೆಯೊಂದಿಗೆ ಈ ಚಿತ್ರವು ದಾಖಲೆ ಸೃಷ್ಟಿಸಿತ್ತು. ಮೊದಲ ದಿನವೇ ವಿಶ್ವಾದ್ಯಂತ 151 ಕೋಟಿ ರೂಪಾಯಿ ಗಳಿಕೆ ಮಾಡಿದ ಕೂಲಿ, ತಮಿಳು ಚಿತ್ರರಂಗದಲ್ಲಿ ಅತಿದೊಡ್ಡ ಓಪನಿಂಗ್ ದಾಖಲೆಯನ್ನು ಬರೆಯಿತು.

ಕೂಲಿಯ ಯಶಸ್ಸಿನ ಹಿಂದೆ ರಜನಿಕಾಂತ್‌ ಅವರ ನಟನೆಯ ಜೊತೆಗೆ, ಚಿತ್ರದ ಬಹು-ತಾರಾಗಣವೂ ಪ್ರಮುಖ ಕಾರಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ಸೌಬಿನ್ ಶಾಹಿರ್, ಆಮಿರ್ ಖಾನ್, ನಾಗಾರ್ಜುನ ಮತ್ತು ಸತ್ಯರಾಜ್‌ರಂತಹ ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಮಿರ್ ಖಾನ್‌ ಅವರ ವಿಶೇಷ ಪಾತ್ರ ಮತ್ತು ಲೋಕೇಶ್ ಕನಕರಾಜ್‌ ಅವರ ಹೈ-ಆಕ್ಷನ್ ದೃಶ್ಯಗಳು ಚಿತ್ರಕ್ಕೆ ಮತ್ತಷ್ಟು ಆಕರ್ಷಣೆ ತಂದಿವೆ.

Exit mobile version