3ದಿನ 4ಲಕ್ಷ ಟಿಕೆಟ್ಸ್..463ಶೋ..ಅಯೋಗ್ಯ ಜೇಬಿಗೆ 6.5Cr

ಹೌಸ್‌‌ಫುಲ್ ಹೌಸ್‌‌ಫುಲ್.. ಎಲ್ಲೆಡೆ ಅಯೋಗ್ಯ ಹೌಸ್‌‌ಫುಲ್

ದೇ (15)

ಅಭಿನಯ ಚತುರ ನೀನಾಸಂ ಸತೀಶ್-ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿ ಮತ್ತೆ ಮೋಡಿ ಮಾಡ್ತಿದೆ. ಯೆಸ್.. ಅಯೋಗ್ಯ-2ಗೆ ರಾಜ್ಯಾದ್ಯಂತ ಬಿಗ್ ಓಪನಿಂಗ್ ಸಿಕ್ಕಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡ್ತಿದೆ. ಇಷ್ಟಕ್ಕೂ ಮೊದಲ ವೀಕೆಂಡ್‌‌ನಲ್ಲಿ ದೋಚಿದ್ದೆಷ್ಟು ಕೋಟಿ..? ವಿಜಯಯಾತ್ರೆಯಲ್ಲಿರೋ ಚಿತ್ರತಂಡದ ಉತ್ಸಾಹ, ಉಲ್ಲಾಸ ಹೇಗಿದೆ..? ಟಾಕ್ಸಿಕ್‌‌ಗೂ ಮುನ್ನ ಇಂಡಸ್ಟ್ರಿ ಜೋಶ್ ಹೆಚ್ಚಿಸಿದ ಯೋಗ್ಯ ಸಿನಿಮಾದ ಕಂಪ್ಲೀಟ್ ಕಹಾನಿ ಇಲ್ಲಿದೆ.

ಅಯೋಗ್ಯ ಚಿತ್ರದಂತೆ ಅಯೋಗ್ಯ-2 ಚಿತ್ರಕ್ಕೂ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋ ಅಯೋಗ್ಯ-2ಗೆ ಸ್ಕ್ರೀನ್‌‌ಗಳು ಹೆಚ್ಚಿಸುವಂತೆ ಡಿಮ್ಯಾಂಡ್ ಕೂಡ ಹೆಚ್ಚಾಗ್ತಿದೆ. ಅದಕ್ಕೆ ಕಾರಣ ಸಿನಿಮಾದ ಕಥೆ, ಪಾತ್ರಗಳು ಮತ್ತು ಮೇಕಿಂಗ್. ಹೌದು.. ಗ್ರಾಮೀಣ ಸೊಗಡಿನ ಕಥೆಗೆ ಹಾಸ್ಯ, ಆ್ಯಕ್ಷನ್, ಲವ್, ಡ್ರಾಮಾ, ಫ್ರೆಂಡ್ಶಿಪ್, ಫ್ಯಾಮಿಲಿ ಎಮೋಷನ್ಸ್, ಪಂಚಾಯ್ತಿ ಪಾಲಿಟಿಕ್ಸ್ ಎಲ್ಲವನ್ನೂ ಹದವಾಗಿ ಬೆರೆಸಲಾಗಿದೆ. ಮಾಸ್ತಿ ಬರವಣಿಗೆ ಕೂಡ ಪ್ಲಸ್ ಆಗಿದ್ದು, ಒನ್ಸ್ ಅಗೈನ್ ಮೋಡಿ ಮಾಡ್ತಿದೆ ರಚಿತಾ ರಾಮ್-ನೀನಾಸಂ ಸತೀಶ್ ಜೋಡಿ.

ಮಹೇಶ್ ಕುಮಾರ್ ನಿರ್ದೇಶನದ ಹಾಗೂ ಮುನೇಗೌಡ ನಿರ್ಮಾಣದ ಅಯೋಗ್ಯ-2 ಸಿನಿಮಾ ಮೊದಲ ದಿನವೇ 1.34 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ಮೂಲಕ ಬಿಗ್ ಓಪನಿಂಗ್ ಪಡಿದಿತ್ತು. ನಂತರ ಎರಡನೇ ದಿನ 2.18ಕೋಟಿ ಪೈಸಾ ವಸೂಲ್ ಮೂಲಕ ಭಾನುವಾರ ಈ ಹಿಂದಿನ ಎರಡು ದಿನಗಳಿಗಿಂತ ಜಾಸ್ತಿನೇ ಗಳಿಸೋ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಯೆಸ್.. ಮೂರನೇ ದಿನ 3 ಕೋಟಿ 6 ಲಕ್ಷ ಗ್ರಾಸ್ ಕಲೆಕ್ಷನ್‌‌ನಿಂದ ಮೂರೇ ದಿನಕ್ಕೆ ಆರೂವರೆ ಕೋಟಿ ಕ್ಲಬ್ ಸೇರಿದೆ.

ಒಟ್ಟಾರೆ ಮೂರು ದಿನದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್‌ಔಟ್ ಆಗಿದ್ದು, 2200 ಶೋಗಳು ಪ್ರದರ್ಶನಗೊಂಡಿವೆ. ಆ ಪೈಕಿ 1650 ಶೋಗಳು ಫಾಸ್ಟ್‌ ಫಿಲ್ಲಿಂಗ್ ಆಗಿದ್ರೆ, 463 ಶೋಗಳು ಹೌಸ್‌‌ಫುಲ್ ಪ್ರದರ್ಶನ ಕಂಡಿವೆ. ಮನರಂಜನೆ ಇಲ್ಲದೆ ಮಂಕಾಗಿದ್ದ ಥಿಯೇಟರ್‌‌ಗಳಿಗೆ ಅಯೋಗ್ಯ-2 ಹೊಸ ಭರವಸೆಯನ್ನ ತಂದುಕೊಟ್ಟಿದೆ.

ಹೌದು.. ಸಕ್ಸಸ್ ಖುಷಿಯಲ್ಲಿ ಚಿತ್ರತಂಡ ಮಂಡ್ಯ ಹಾಗೂ ಮೈಸೂರಿನ ಥಿಯೇಟರ್‌‌ಗಳಿಗೆ ಭೇಟಿ ನೀಡಿ, ಫ್ಯಾನ್ಸ್‌ನ ಮೀಟ್ ಮಾಡೋ ಮೂಲಕ ವಿಜಯಯಾತ್ರೆ ಆರಂಭಿಸಿದೆ. ಅದ್ರಂತೆ ಮಂಡ್ಯದ ಮಹಾವೀರ್ ಥಿಯೇಟರ್ ಹಾಗೂ ಅರಮನೆ ನಗರಿಯ ವುಡ್‌ಲ್ಯಾಂಡ್ಸ್, ಮಾಲ್ ಆಫ್ ಮೈಸೂರು ಹಾಗೂ ಡಿಆರ್‌ಸಿ ಸಿನಿಮಾಸ್‌ಗೆ ವಿಸಿಟ್ ಮಾಡಿದೆ. ಹೋದಲ್ಲೆಲ್ಲಾ ಭರ್ಜರಿ ಸ್ವಾಗತದೊಂದಿಗೆ, ಚಿತ್ರ ನೋಡಿ ದಿಲ್‌ಖುಷ್ ಆದ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.

ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್ ಅದ್ಯಾಕೋ ಪ್ರಮೋಷನ್ಸ್‌‌‌‌‌‌ನಲ್ಲಿ ಅಷ್ಟಾಗಿ ತೊಡಗಿಸಿಕೊಳ್ತಿಲ್ಲ. ಪ್ರೀ ರಿಲೀಸ್ ಇವೆಂಟ್‌‌ ನಂತರ ಫಸ್ಟ್ ಡೇ ಫಸ್ಟ್ ಶೋಗೆ ಆಗಲಿ, ಆ ನಂತ್ರ ಮಂಡ್ಯ-ಮೈಸೂರಿನ ವಿಜಯಯಾತ್ರೆಗಾಗಲಿ ಬಂದಿಲ್ಲ. ಅಷ್ಟೇ ಯಾಕೆ ಸಂದರ್ಶನಗಳೂ ನೀಡಿಲ್ಲ. ಅದಕ್ಕೆ ಅವ್ರ ಚಿರಂಜೀವಿ ಜೊತೆಗಿನ ಹೊಸ ಸಿನಿಮಾದ ಶೂಟಿಂಗ್ ಡೇಟ್ಸ್ ಇರಬಹುದು. ಆದ್ರೆ ರಚ್ಚು ಕೂಡ ಒಂದು ಕೈ ಜೋಡಿಸಿದ್ರೆ ಚಿತ್ರತಂಡದ ಉತ್ಸಾಹ, ಹುಮ್ಮಸ್ಸು ಮತ್ತಷ್ಟು ಹೆಚ್ಚಲಿದೆ. ಥಿಯೇಟರ್‌‌ಗೆ ನುಗ್ಗುವ ಚಿತ್ರಪ್ರೇಮಿಗಳ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗೋದ್ರಲ್ಲಿ ಡೌಟೇ ಇಲ್ಲ.

ಇನ್ನೂ ಅಯೋಗ್ಯ-2 ಟೀಂ.. ಈ ಮನರಂಜನಾತ್ಮಕ ಸಿನಿಮಾನ ಚಂದನವನದ ಸ್ಟಾರ್ಸ್ ಹಾಗೂ ತಂತ್ರಜ್ಞರಿಗೆ ಉಣಬಡಿಸೋ ಯೋಜನೆ ಮಾಡಿದೆ. ಅದಕ್ಕಾಗಿಯೇ ಇದೇ ಆಗಸ್ಟ್ 12ರಂದು ಅಂದ್ರೆ ಬುಧವಾರ ಸಂಜೆ 7 ಗಂಟೆಗೆ ಒರಾಯನ್ ಮಾಲ್‌‌ನಲ್ಲಿ ಸೆಲೆಬ್ರಿಟಿ ಶೋ ಕೂಡ ಆಯೋಜಿಸುತ್ತಿದೆ. ಅಂದು ಕಿರುತೆರೆ ಹಾಗೂ ಬೆಳ್ಳಿತೆರೆಯ ಸ್ಟಾರ್‌‌ ನಟ, ನಟಿಯರ ಜೊತೆ ಟೆಕ್ನಿಷಿಯನ್ಸ್ ಕೂಡ ಅಯೋಗ್ಯನ ಹಂಗಾಮವನ್ನ ಕಣ್ತುಂಬಿಕೊಳ್ತಾರೆ. ಒಟ್ಟಾರೆ ಅಯೋಗ್ಯ-2 ಸಿನಿಮಾದಿಂದ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಭರವಸೆಯ ಅಲೆಯೊಂದು ಎದ್ದಿದೆ. ಟಾಕ್ಸಿಕ್ ರಿಲೀಸ್‌ಗೂ ಮುನ್ನ ಇಂಥದ್ದೊಂದು ಪಾಸಿಟಿವ್ ವೈಬ್ ಸಿಕ್ಕಿರೋದು ಚಿತ್ರರಂಗಕ್ಕೆ ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version