ಅಪ್ಪ ಮುಸ್ಲಿಂ.. ಅಮ್ಮ ಹಿಂದೂ.. ಮಗನಿಗೆ ಧರ್ಮ ಸಂಕಟ

ಶಾರೂಖ್ ಖಾನ್- ಗೌರಿ ಪುತ್ರ ಯಾವ ಧರ್ಮ ಪಾಲಿಸ್ತಾರೆ?

Untitled design (97)
ADVERTISEMENT
ADVERTISEMENT

ಬಾಲಿವುಡ್ ಬಾದ್‌ಷಾ.. ಕಿಂಗ್ ಖಾನ್ ಶಾರೂಖ್ ಮಗನಿಗೆ ಧರ್ಮ ಸಂಕಟ ಶುರುವಾಗಿದೆ. ಯಾಕಂದ್ರೆ ಅಪ್ಪ ಮುಸ್ಲಿಂ, ಅಮ್ಮ ಹಿಂದೂ. ತಾನು ಯಾವ ಧರ್ಮ ಪಾಲಿಸಬೇಕು ಅನ್ನೋ ಗೊಂದಲ. ಈ ಬಗ್ಗೆ ಮೌನ ಮುರಿದಿದ್ದಾರೆ ಗೌರಿ ಖಾನ್. ಸದ್ಯ ಶಾರೂಖ್ ಖಾನ್ ಪತ್ನಿಯ ಸ್ಟೇಟ್‌‌ಮೆಂಟ್ ಟಾಕ್ ಆಫ್ ದಿ ಟೌನ್ ಆಗಿದೆ.

ಶಾರೂಖ್‌ ಖಾನ್‌.. ಬಾಲಿವುಡ್ ಅಂಗಳದಲ್ಲಿ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ರಿಯಲ್ ಹೀರೋ. ಝೀರೋದಿಂದ ಕಷ್ಟ ಪಟ್ಟು ತನ್ನದೇ ಆದ ಬಹುದೊಡ್ಡ ಸಾಮ್ರಾಜ್ಯ ಕಟ್ಟಿರೋ ಕಿಂಗ್ ಖಾನ್‌ಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಅಂದಹಾಗೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರ್ತಾಳೆ. ಬಾಲಿವುಡ್ ಬಾದ್‌ಷಾ ಲೈಫ್‌‌ನ ಅಸಲಿ ಶಕ್ತಿ ಪತ್ನಿ ಗೌರಿ.

ಹೌದು, 1991ರಲ್ಲಿ ಪ್ರೀತಿಸಿ, ಮದುವೆಯಾದ ಶಾರೂಖ್ ಖಾನ್ ಹಾಗೂ ಗೌರಿ ದಾಂಪತ್ಯಕ್ಕೆ 34 ವರ್ಷಗಳು. ಅಂದಿನಿಂದ ಇಂದಿನವರೆಗೆ ಬಹಳ ಅನ್ಯೋನ್ಯವಾಗಿ ಜೀವನ ಸಾಗಿಸ್ತಿದ್ದಾರೆ ಸತಿ-ಪತಿ. ಇವರ ಸಹಬಾಳ್ವೆಗೆ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಹಂ ಖಾನ್ ಅನ್ನೋ ಮೂವರು ಮಕ್ಕಳು ಕೂಡ ಸಾಕ್ಷಿ ಆಗಿದ್ದಾರೆ. ಹಿಂದೂ- ಮುಸ್ಲಿಂ ಅನ್ನೋ ಕಾರಣಕ್ಕೆ ಕುಟುಂಬವನ್ನು ಎದುರಿಸಿ ಮದ್ವೆ ಆಗಿದ್ದ ಗೌರಿಗೆ ಮದ್ವೆ ಆದ ಬಳಿಕವೂ ಪ್ರಶ್ನೆಗಳು ತಪ್ಪಲಿಲ್ಲ.

ಶಾರೂಖ್ ಖಾನ್ ಮನೆಯಲ್ಲಿ ಗೌರಿ ಹಿಂದೂ ಧರ್ಮವನ್ನು ಪಾಲಿಸಿದ್ರೆ, ಪತಿ ಖಾನ್ ಇಸ್ಲಾಂ ಪಾಲಿಸ್ತಾರಂತೆ. ಅವರಿಬ್ಬರ ಮಧ್ಯೆ ಯಾರು ಯಾವ ಧರ್ಮ ಫಾಲೋ ಮಾಡ್ಬೇಕು ಬಿಡಬೇಕು ಅನ್ನೋದ್ರಲ್ಲಿ ಯಾವುದೇ ಗೊಂದಲಗಳಿಲ್ಲ. ಆದ್ರೆ ಮಕ್ಕಳಾದ ಬಳಿಕ ಅವರು ಯಾವುದನ್ನ ಪಾಲಿಸಬೇಕು ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ. ಅದ್ರಂತೆ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಯಾವ ಧರ್ಮ ಪಾಲಿಸ್ತಾರೆ ಅನ್ನೋದು ಯಕ್ಷ ಪ್ರಶ್ನೆ. ಅದಕ್ಕೆ ಗೌರಿ ಉತ್ತರಿಸಿದ್ದು, ಅದೀಗ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ.

ಕಾಫಿ ವಿತ್ ಕರಣ್ ಮೊದಲ ಸೀಸನ್‌‌ನಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಗೌರಿಯ ಮಾತುಗಳು ಟಾಕ್ ಆಫ್ ದಿ ಟೌನ್ ಆಗಿವೆ.

ಅಪ್ಪ ಮುಸ್ಲಿಂ.. ಅಮ್ಮ ಹಿಂದೂ.. ಮಗ ಯಾವ ಧರ್ಮ..?

‘ಆರ್ಯನ್‌ಗೆ ಶಾರೂಖ್ ಮೇಲೆ ತುಂಬಾ ಪ್ರೀತಿ. ಅವನು ಶಾರೂಖ್ ಅವರ ಧರ್ಮವನ್ನು ಅನುಸರಿಸುತ್ತಾನೆ. ಅವನು ಯಾವಾಗ್ಲೂ ನಾನು ಮುಸ್ಲಿಂ ಅಂತ ಹೇಳ್ತಿರ್ತಾನೆ. ನಮ್ಮಲ್ಲಿ ಎರಡೂ ಧರ್ಮಗಳ ನಡುವೆ ಹೊಂದಾಣಿಕೆ ಇದೆ. ನಾನು ಶಾರೂಖ್ ಧರ್ಮವನ್ನು ಗೌರವಿಸುತ್ತೇನೆ. ಹಾಗಂತ ನಾನು ಧರ್ಮ ಬದಲಿಸಬೇಕು, ಕನ್ವರ್ಟ್ ಆಗ್ಬೇಕು ಅಂತೇನಿಲ್ಲ. ಮತಾಂತರದಲ್ಲಿ ನನಗೆ ಯಾವುದೇ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ತಮಗೆ ಇಷ್ಟ ಬಂದ ಧರ್ಮವನ್ನು ಪಾಲಿಸಬೇಕು. ಅದು ನಮ್ಮ ಹಕ್ಕು, ನಮ್ಮ ಸ್ವಾತಂತ್ರ್ಯ. ಯಾವುದೇ ರೀತಿಯಲ್ಲಿ ಧರ್ಮಕ್ಕೆ ಅಗೌರವ ತೋರಬಾರದು. ಶಾರೂಖ್ ಇದುವರೆಗೂ ನನ್ನ ಧರ್ಮವನ್ನು ಅಗೌರವಿಸಿಲ್ಲ’ ಎಂದು ಗೌರಿ ಖಾನ್ ತಿಳಿಸಿದ್ದಾರೆ.

ಹೌದು, ಗೌರಿ ಹೇಳಿದ ಮಾತುಗಳು ಅಕ್ಷರಶಃ ಸತ್ಯ. ಧರ್ಮದ ವಿಚಾರದಲ್ಲಿ ಯಾರೂ ಹೇರಿಕೆ ಮಾಡಬಾರದು. ಇನ್ನು ಇದಕ್ಕೆ ಪೂರಕವಾಗಿ ಹಿಂದೆ ಒಮ್ಮೆ ಶಾರೂಖ್ ಖಾನ್ ಮಾತಾಡ್ತಾ, ‘ನನ್ನ ಪತ್ನಿ ಹಿಂದೂ, ನಾನು ಮುಸ್ಲಿಂ.. ನಮ್ಮ ಮಕ್ಕಳು ಹಿಂದೂಸ್ತಾನದ ಮಕ್ಕಳು’ ಅಂತ ಭಾರತೀಯರ ಮನಸ್ಸು ಗೆದ್ದಿದ್ರು.

ಇಂಟೋರಿಯರ್ ಡಿಸೈನರ್, ರೆಡ್ ಚೆಲ್ಲೀಸ್ ಎಂಟರ್‌‌ಟೈನ್ಮೆಂಟ್ ಹೋಮ್ ಬ್ಯಾನರ್‌‌ನ ಉಸ್ತುವಾರಿ ಹಾಗೂ ಕುಟುಂಬದ ಜವಾಬ್ದಾರಿ ಹೊತ್ತಿರೋ ಗೌರಿ, ಇಂದಿಗೂ ಸಿಂಗಲ್ ವಿವಾದ ಇಲ್ಲದೆ ಮಾದರಿ ಹೆಣ್ಣಾಗಿ ಬದುಕುತ್ತಿದ್ದಾರೆ. ಆದ್ರೆ ಶಾರೂಖ್ ದೊಡ್ಮಗ ಆರ್ಯನ್ ಖಾನ್ ಮಾತ್ರ ಆಕೆಯ ಮಾತುಗಳಿಂದ ಮುಸ್ಲಿಂ ಅನ್ನೋದು ಕಾತರಿ ಆಗಿದೆ.

Exit mobile version