ಅಂತೂ ಇಂತು ‘ಅನುಶ್ರೀ’ ಮದುವೆ ಡೇಟ್ ಫಿಕ್ಸ್!

ಆಗಸ್ಟ್ 28ಕ್ಕೆ ರೋಷನ್ ಜೊತೆ ಸಪ್ತಪದಿ!

1 2025 08 22t173639.533

ಬೆಂಗಳೂರು: ಕನ್ನಡ ಟೆಲಿವಿಷನ್ ಜಗತ್ತಿನ ಖ್ಯಾತ ನಿರೂಪಕಿ ಅನುಶ್ರೀ ಇದೇ ಆಗಸ್ಟ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜೀ ಕನ್ನಡ ವಾಹಿನಿಯ ‘ಮಾತಿನ ಮಲ್ಲಿ’ ಎಂದೇ ಜನಪ್ರಿಯರಾದ ಅನುಶ್ರೀ ಆಗಸ್ಟ್ 28ರ ಬೆಳಗ್ಗೆ 10:56ಕ್ಕೆ ಬೆಂಗಳೂರಿನ ಹೊರವಲಯದಲ್ಲಿರುವ ಸಂಭ್ರಮ ಬೈ ಸ್ವಾನ್‌ಲೈನ್ ಸ್ಟುಡಿಯೋಸ್ ರೆಸಾರ್ಟ್‌ನಲ್ಲಿ ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.

ಕನ್ನಡ ಟೆಲಿವಿಷನ್‌ನ ಜನಪ್ರಿಯ ಮುಖವಾಗಿದ್ದು, ತಮ್ಮ ಚಾಕಚಕ್ಯತೆ ಮತ್ತು ಆಕರ್ಷಕ ನಿರೂಪಣೆಯಿಂದ ಲಕ್ಷಾಂತರ ಜನರ ಮನೆಮಾತಾಗಿದ್ದಾರೆ. ಐಟಿ ಕಂಪನಿಯ ಉದ್ಯೋಗಿಯಾಗಿರುವ ರೋಷನ್ ಅವರೊಂದಿಗೆ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಆಮಂತ್ರಣ ಪತ್ರಿಕೆಯ ವಿಶೇಷ ಸಂದೇಶ:

ಅನುಶ್ರೀ ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ, “ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ,” ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ಈ ಸಂದೇಶ ಅವರ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಸಂತಸವನ್ನು ತಂದಿದೆ.

Exit mobile version